ಝಿ ಕನ್ನಡ ದ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್”ದಲ್ಲಿ ಪ್ರಜ್ವಲಿಸುತ್ತಿರುವ ಶಿಫಾಲಿ ವಿ ಪೂಜಾರಿ
ತುಳುನಾಡು ಪ್ರತೀಭೆಗಳಿಗೆ ಕಡಿಮೆಯಿಲ್ಲದೆ, ಎಲ್ಲಾ ಕ್ಷೇತ್ರದಲ್ಲೂ ನಮ್ಮ ತುಳುನಾಡಿನ ಜನರೆ ಪ್ರಜ್ವಲಿಸುತ್ತಿರುವುದು ನಮ್ಮ ಹೆಮ್ಮೆ, ಆದರೂ ನಮ್ಮ ಬಿಲ್ಲವ ಸಮಾಜದ ಪ್ರತೀಭೆ ಝಿ ಕನ್ನಡ ದ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಶೊ ದಲ್ಲಿ ನಮ್ಮ ತುಳುನಾಡಿನ ಹಾಗು ಬಿಲ್ಲವ ಸಮಾಜದ ಶಿಫಾಲಿ ವಿ ಪೂಜಾರಿ ಪ್ರಜ್ವಲಿಸುತ್ತಿದ್ದಾರೆ.
ಇವರು ಮೂಲತಃ ಮಂಗಳೂರಿನ ಗುರುಪುರದವರು, ವಿಶ್ವನಂದ ಹಾಗೂ ಶಶಿಕಲರವರ ಮುದ್ದಿನ ಮಗಳು ಶಿಫಾಲಿ ವಿ ಪೂಜಾರಿ, ತನ್ನ ವಿದ್ಯಾಭ್ಯಾಸವನ್ನು ಬೇತನಿ ಆಂಗ್ಲ ಮಾದ್ಯಮ ಕಿನ್ನಿಕಂಬಳದಲ್ಲಿ ಕಲಿಯುತ್ತಿದ್ದಾರೆ. ಕೇವಲ ವಿದ್ಯಾಬ್ಯಾಸದ ಜೊತೆಗೆ ಇವರ ಪ್ರತಿಭೆಗೆ ಮನೆಯವರು ಉತ್ತಮವಾಗಿ ಬೆಂಬಲ ನೀಡುತ್ತಿದ್ದಾರೆ.
ಬಾಲ್ಯದಿಂದಲೇ ಶಿಫಾಲಿ ನೃತ್ಯದಲ್ಲಿ ಆಸಕ್ತಿ ಹೊಂದಿದ್ದು, ನಾಲ್ಕನೇ ವಯಸ್ಸಿನಿಂದಲೇ ನೃತ್ಯವನ್ನು ಕಲಿತ್ತಿದ್ದು, ಮಂಗಳೂರಿನ ಸುಧೀರ್ ಉಳ್ಳಾಲ್ ಅವರ ಸಿಟಿ ಗೈಯ್ಸ್ ಕುಡ್ಲ ಕ್ವೀನ್ ಡ್ಯಾನ್ಸ್ ಅಕಾಡೆಮಿಯಲ್ಲಿ ಹಲವಾರು ವರುಷಗಳಿಂದ ನೃತ್ಯ ತರಬೇತಿಯನ್ನು ಪಡೆದಿರುತ್ತಾಳೆ.
2017- 18 ರ ಸಾಲಿನ ಯೋಗ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಆಯ್ಕೆಯಾಗಿದ್ದಾರೆ. ಕಲ್ಕತ್ತಾದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಚಾಂಪಿಯನ್ ಶಿಪ್ ಆಗಿರುತ್ತಾರೆ. ಹಲವಾರು ರಿಯಾಲಿಟಿ ಶೋ ನಲ್ಲಿ ಮಿಂಚಿದ್ದಾರೆ.
✍ ಪುಷ್ಪರಾಜ್ ಪೂಜಾರಿ