ಮುಂಬಯಿ – ಮ್ಯಾರಥಾನ್ ನಲ್ಲಿ ಕಡಬದ ಕೊಣಾಜೆಯ ಯುವಕ ಹರೀಶ್ ಎಂ.ಡಿ 42 ಕಿಲೋಮೀಟರ್ ದೂರವನ್ನು 4 ಗಂಟೆಯಲ್ಲಿ ಕ್ರಮಿಸಿ ಸಾಧನೆಗೈದಿದ್ದಾರೆ.
ಕ್ರೀಡಾ ಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಿರುವ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಮುಚ್ಚಿಲೋಡಿ ನಿವಾಸಿದೇವಪ್ಪ ಪೂಜಾರಿ ಮೋಹಿನಿ ದಂಪತಿಯ ಪುತ್ರ ಹರೀಶ್ ಎಂ.ಡಿ. ಟಾಟ ಮುಂಬೈ ಮ್ಯಾರಥಾನ್‌ನಲ್ಲಿ 4 ಗಂಟೆಯಲ್ಲಿ 42 ಕಿ.ಮೀ. ದೂರ ಕ್ರಮಿಸುವ ಮೂಲಕ ದಾಖಲೆಗೈದಿದ್ದಾರೆ. ಕಳೆದ ಬಾರಿ 42 ಕಿ.ಮೀ. ದೂರವನ್ನು 4 ಗಂಟೆ 16 ನಿಮಿಷಗಳಲ್ಲಿಕ್ರಮಿಸಿ ದಾಖಲೆ ಮಾಡಿದ್ದರು. ಹರೀಶ್ ಹಲವು ರನ್ನಿಂಗ್ ರೇಸ್‌ಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನುತನ್ನದಾಗಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲದೇ ಬೆಂಗಳೂರು ಯುವವಾಹಿನಿ ಘಟಕದ ಆರೋಗ್ಯ ಮತ್ತು ಕ್ರೀಡಾನಿರ್ದೇಶಕರಾಗಿ ಘಟಕದ ಸದಸ್ಯರನ್ನು ಒಗ್ಗೂಡಿಸಿ ನಂದಿನಿ ಲೇಔಟ್ ಬೆಂಗಳೂರಿನಲ್ಲಿ ಒಂದು ದಿನದ ’ಸ್ಪೋರ್ಟ್ಸ್ ಡೇ’ ಆಯೋಜಿಸಿದ್ದಾರೆ. ಕ್ರೀಡೆಯಲ್ಲಿ ಸತತ ಸಾಧನೆ ಮಾಡುತ್ತಿರುವ ಹರೀಶ್‌ರವರು ಮುಂದಿನ ದಿನಗಳಲ್ಲಿ, ಒಲಂಪಿಕ್ಸ್ಕ್ರೀಡೆಯಲ್ಲಿ ಭಾಗವಹಿಸುವ ಪಣವನ್ನು ತೊಟ್ಟಿದ್ದು, ಅದಕ್ಕಾಗಿ ಈಗಾಗಲೇ ಕಾರ್ಯಸಾಧನೆ ಮಾಡುತ್ತಿದ್ದಾರೆ.