ಹನಿ ಹನಿಕೂಡಿದರೆ ಹಳ್ಳ ಯೆಂಬ ದ್ಯೇಯ ವಾಕ್ಯದೊಂದಿಗೆ ತಾನು ದುಡಿದದರಲ್ಲಿ ಸ್ವಲ್ಪವನ್ನು ಸಮಾಜ ಮುಖಿ ಕಾರ್ಯಕ್ಕಾಗಿ ಮೀಸಲಿಟ್ಟು ತನ್ನಿಂದೆನಾದರು ಸಮಾಜಕ್ಕಾಗಿ ಕೈಲಾದ ಸಹಾಯವನ್ನು ನೀಡಿರುವ ಟೀಮ್ ತುಳುನಾಡ ಬಿರುವೆರ್ ಬೆಳ್ತಂಗಡಿಯ ಸಮಾನ ಮನಸ್ಕ ಯುವ ಪಡೆ.ಬೆಳ್ತಂಗಡಿ ತಾಲೂಕಿನ ಕೆಲೆಂಜ ಪುದಿಯೆಟ್ಟು ಗ್ರಾಮದ ರಾಜಕುಮಾರ್ ಎಂಬವರ ಕುಟುಂಬಕ್ಕೆ ಟೀಮ್ ತುಳುನಾಡ ಬಿರುವೆರ್ ಬೆಳ್ತಂಗಡಿಯ ಸದಸ್ಯರು ತುರ್ತು ಸೇವಾಯೋಜನಡಿಯಲ್ಲಿ ಕುಟುಂಬಕ್ಕೆ 15200 ರೂಪಾಯಿ ಸಹಾಯಧನವನ್ನು ವಿತರಿಸಿದರು. ಇ ಸಂದರ್ಭ ತಂಡದ ಪ್ರಮುಖರು ಮತ್ತು ಸರ್ವ ಸದಸ್ಯರು ಉಪಸ್ಥಿತಿಯಿದ್ದರು.
ಮತ್ತಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬರುತ್ತಾ ಸಮಾಜದ ಶ್ರೇಯಾಭಿವೃದ್ಧಿಗೆ,ಅಶಕ್ತರ ಏಳಿಗೆಗೆ ಇನ್ನು ಮುಂದೆಯೂ ಕೈ ಜೋಡಿಸಿಗೊಂಡು ಇನ್ನಷ್ಟು ಕೆಲಸ ಕಾರ್ಯಗಳಲ್ಲಿ *ತೊಡಗಿಕೊಳ್ಳುವ ಶಕ್ತಿಯನ್ನು ಶ್ರೀ ಮಾತೆ ದೇಯಿ ಬೈದೆತಿಯು ನಿಮಗೆ ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.
ಟೀಮ್ ತುಳುನಾಡ ಬಿರುವೆರ್ ಬೆಳ್ತಂಗಡಿ ತಂಡದ ಸದಸ್ಯರು ನಯನ್ ಬಿಲ್ಲವ ಕಲೆಂಜ, ಸಂಪತ್ ಪೂಜಾರಿ, ಕುಕ್ಕೇಡಿ ಶ್ರೀಕಾಂತ್ ಬಿರ್ವೆ, ರಂಜಿತ್ ಬಿರ್ವ ಗುರು ಬಿರ್ವ, ಸದಾಶಿವ ಪೂಜಾರಿ ,ಸುಧಾಕರ ಗಾನದಕೊಟ್ಯ ಉಪಸ್ಥಿತಿತರಿದ್ದರು.