TOP STORIES:

ಡಾ. ಯೋಗೀಶ್ ಕೈರೋಡಿ ಎಂಬ ವಿದ್ವತ್ ಪ್ರತಿಭೆ


ಹುಲ್ಲಿನಷ್ಟು ಸಾಧನೆ ಮಾಡಿ ಬೆಟ್ಟದಷ್ಟು ಪ್ರಚಾರ ಪಡೆಯುವ ಕಾಲವಿದು. ಕೊಡುಗೆಗಿಂತ ಪ್ರಚಾರವೇ ಅಧಿಕವಾದರೆ ಬಹಳ ಕಾಲ ಉಳಿಯದು. ಕೆಲವರದ್ದು ಹಾಗಲ್ಲ, ಅವರ ಕೆಲಸವೇ ಮಾತನಾಡುತ್ತದೆ. ಬಹುಕಾಲ ಉಳಿಯುತ್ತದೆ. ಅಂತಹ ಪ್ರತಿಭಾ ಸಂಪನ್ನ ಡಾ. ಯೋಗೀಶ್ ಕೈರೋಡಿರವರು . ನಾನು ಇವರ ಬಗ್ಗೆ ಬಹುಕಾಲದಿಂದ ಬಲ್ಲೆ. ನಿಮ್ಮ ಬಗ್ಗೆ ಬರೆಯುತ್ತೇನೆಂದಾಗ ಮುಗುಳ್ನಕ್ಕು ನಿರಾಕರಿಸುತ್ತಲೇ, ಬಂದರು. ಕೈರೋಡಿಯವರ ಬಗ್ಗೆ ಬರೆಯಲೇಬೇಕೆಂಬ ತುಡಿತದ ಫಲವೇ ಈ ಲೇಖನ.ಬಹುತೇಕ ಎಲ್ಲರಂತೆ ತುಳು ನಾಟಕ ಯಕ್ಷಗಾನ ನೋಡುತ್ತಲೇ, ವಿದ್ಯಾರ್ಥಿ ಜೀವನ ಸಮೃದ್ಧಗೊಳಿಸಿದವರು. ಸಾಂಪ್ರದಾಯಿಕ ಬೇಸಾಯದ ಗದ್ದೆಯ ಪರಿಮಳ ಅನುಭವಿಸುತ್ತಲೇ, ಬಾಲ್ಯದ ಸವಿ ಉಂಡವರು. ಊರ ಹೃದಯ ಭಾಗದಲ್ಲಿದ್ದ. ತನ್ನ ತಂದೆಯ ಹೊಟೇಲಿಗೆ ಬರುವ ವಿವಿಧ ಭಾವಭಂಗಿ, ಮಾತುಕತೆಗಳ ತಿರುಳು ಸ್ವಾರಸ್ಯದ ಜೀವನ ಶಿಕ್ಷಣದ ತಳಹದಿಯಲ್ಲಿ, ಬೆಳೆದ ಕೈರೋಡಿಯವರ ಪ್ರತಿಭೆಯ ವಿಕಾಸಕ್ಕೆ ವಿಸ್ತಾರ ಅವಕಾಶಗಳು ಒದಗಿಬಂತು.

ತುಳು ನಾಟಕಗಳಲ್ಲಿ ಹಾಸ್ಯ ಪಾತ್ರ ನಿರ್ವಹಿಸಿ ಪ್ರೇಕ್ಷಕ ಸಮೂಹವನ್ನು ನಗೆಗಡಲಲ್ಲಿ ತೇಲಿಸಿದರು. ಯಕ್ಷಗಾನದಲ್ಲಿ ಕಿರೀಟ ವೇಷಧಾರಿಯಾಗಿ, ರಾಜಗಾಂಭಿರ್ಯದ ಮಾತುಗಾರಿಕೆಯ ಮೂಲಕ ಕಣ್ಮನ ಸೆಳೆದರು.

ರಂಗಸ್ಥಳದ ನಡೆನುಡಿಯ ಸೊಬಗನ್ನು ಕಂಡವರೆಲ್ಲಾ ಕೈರೋಡಿಯವರು ಮುಂದೊಂದು ದಿನ ನಾಟಕ, ಯಕ್ಷಗಾನದ ಮೇರು ಕಲಾವಿದರಾಗುತ್ತಾರನೆಂದೇ ಭಾವಿಸಿದ್ದರು. ಪದವಿ ವಿದ್ಯಾರ್ಥಿ ಯಾಗಿದ್ದಾಗಲೇ, ಅವರು ಬರೆದ ಬಂಗಾರ್ದ ಬಲೆ ತುಳು ನಾಟಕದ ಸನ್ನಿವೇಶಗಳು ಹಿಂದಿಗೂ ಜನಮನದಲ್ಲಿ ಹಸಿರಾಗಿ ಉಳಿದಿದೆ.ಸಹಕಾರಿ ಮಹಾಮಂಡಳ ಬೆಂಗಳೂರಿನಲ್ಲಿ, ಆಯೋಜಿಸಿದ್ದ ರಾಜ್ಯಮಟ್ಟದ ಚರ್ಚಾಸ್ಪರ್ಧೆಯಲ್ಲಿ ಪುರಸ್ಕಾರ ಪಡೆದವರು.

ಸ್ನಾತಕೋತ್ತರ ಪದವಿ ಪಡೆದ ಯೋಗೀಶ್ ಕೈರೋಡಿಯವರು ಕಾಲೇಜು ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು.ತನ್ನ ಕಾರ್ಯ ಕ್ಷೇತ್ರವನ್ನು ತರಗತಿಯ ಕೊಠಡಿಗೆ ಸೀಮಿತಗೊಳಿಸದೆ ಸಾರ್ವಜನಿಕ ಸಭೆ ಸಮಾರಂಭಗಳ ನಿರೂಪಕರಾಗಿ, ಮುಖ್ಯ ಭಾಷಣಕಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ದಶಕಗಳಕಾಲ ಜಿಲ್ಲೆಯಾದ್ಯಂತ ತೊಡಗಿಸಿಕೊಂಡು ಚಿರಪರಿಚಿತರಾದರು. ಪ್ರಚಲಿತ ವಿಷಯ ಆಧರಿಸಿ ಬರೆದ ಲೇಖನಗಳು ಉದಯವಾಣಿ, ಪ್ರಜಾವಾಣಿಯಲ್ಲಿ, ಪ್ರಕಟವಾಗಿದೆ. ಮಾತು ಮತ್ತು ಬರಹವನ್ನು ತನ್ನ ಅಭಿವ್ಯಕ್ತಿಯ ಪ್ರಧಾನ ಮಾಧ್ಯಮವನ್ನಾಗಿಸಿ
ಬೆಳೆದರು.

ವಿವಿಧ ವಿಷಯ ಮತ್ತು ಪ್ರಕಾರಗಳಿಗೆ ಸಂಬಂಧಿಸಿದ ಆರು ಕೃತಿಗಳು ಪ್ರಕಟಗೊಂಡಿದೆ. ಇವರ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯು (2011)ರಲ್ಲಿ ದೊರೆತಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕಿರು ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಪದವಿ ಕನ್ನಡ ಹಾಗೂ ತುಳು ಭಾಷಾ ಪಠ್ಯಪುಸ್ತಕಗಳ ಸಂಪಾದಕರಾಗಿಯೂ, ಕಾರ್ಯನಿರ್ವಹಿಸಿದ್ದಾರೆ.ಕೆಲ ಕಾಲ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, ಸಂಶೋಧನಾ ಸಹಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಶಿಕ್ಷಣ ಪಡೆದ ಯುವಕರಿಗೆ ಬೇಸಾಯವೆಂದರೆ ಅಲರ್ಜಿ. ಆದರೆ ಕೈರೋಡಿ ಹಾಗಲ್ಲ, ತನ್ನ ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿಭೂಮಿಯಲ್ಲಿ ಭತ್ತದ ಬೇಸಾಯ ಮಾಡುತ್ತಾರೆ.ಅಡಿಕೆಯೊಂದಿಗೆ ಮಿಶ್ರ ಬೆಳೆಯ ಕಡೆಗೂ ಆಸಕ್ತಿ ತೋರಿಸಿದ್ದಾರೆ. ಸಾಧ್ಯವಾದಷ್ಟು ಆಹಾರ ಸ್ವಾಲಂಬನೆ ಆಗಬೇಕೆಂಬುದು ಅವರ ಸಂಕಲ್ಪ.

ಕೆಲವು ವರ್ಷಗಳ ಹಿಂದೆ ಸಮಾಜಸೇವಾ ಸಂಘ-ಸಂಸ್ಥೆಗಳ ಚಟುವಟಿಕೆಯಲ್ಲಿ ಕೈರೋಡಿ ಮುಂಚೂಣಿಯಲ್ಲಿ ಕಂಡುಬರುತ್ತಿದ್ದರು.ನೇರ – ನಿರರ್ಗಳ ಸ್ವಾರಸ್ಯಕರ ಮಾತಿನ ಮೋಡಿಯಲ್ಲಿ ಸಭಿಕರನ್ನು ಮಂತ್ರಮುಗ್ಧಗೊಳಿಸುತ್ತಿದರು.

ಸಮಾಜದ ಉನ್ನತಿಗೆ ರಚನಾತ್ಮಕ ಕಾರ್ಯಗಳಾಗಬೇಕು ಚಿಂತನ- ಮಂಥನಗಳಾಗಬೇಕೆಂದು ನಿರ್ಧಾರಕ್ಕೆ ಬಂದ ಕೈರೋಡಿಯವರು ಸಾರ್ವಜನಿಕ ವೈಭವ ಹಾಗೂ ಭಾಷಣದ ಮೇಲಿನ ನಂಬಿಕೆ ಕಳೆದುಕೊಂಡರು. ಆದರೆ ಇವರು ಕೈಕಟ್ಟಿ ಕುಳಿತುಕೊಂಡಿಲ್ಲ. ಸಮಾಜದ ಒಳಿತಿಗೆ ತನ್ನ ಪಾಲಿನ ಕೊಡುಗೆ ನೀಡುತ್ತಲೆ ಇದ್ದಾರೆ. ಯುವಕರು ದಾರಿ ತಪ್ಪಿದ್ದಾರೆ ಎಂದು ಸಾರ್ವಜನಿಕ ವೇದಿಕೆಯಲ್ಲಿ, ಕೂಗಾಡುವುದು ನಿರರ್ಥಕ. ಯುವಕರ ಮನಸ್ಸನ್ನು ಸಕರಾತ್ಮಕವಾಗಿ ರೂಪಿಸುವ ರಚನಾತ್ಮಕ ಕಾರ್ಯಗಳಾಗಬೇಕೆಂದು ಇವರ ನಂಬಿಕೆ. ಆರೋಗ್ಯಪೂರ್ಣ ಮನಸ್ಸು ರೂಪಿಸಿದರೆ ಉಳಿದೆಲ್ಲವೂ ಸಾಧಿತವಾಗುತ್ತದೆ. ಎಂಬುದು ಇವರ ಚಿಂತನೆ. ಇವರು ಮೌನವಾಗಿ ರೂಪಿಸಿದ್ದ ಮದ್ಯಮುಕ್ತ ಮದರಂಗಿ ಜಿಲ್ಲೆಯಲ್ಲಿ ಉಂಟುಮಾಡಿದ ಕ್ರಾಂತಿಕಾರಿ ಬದಲಾವಣೆ ಸದ್ದುಗದ್ದಲವಿಲ್ಲದ ಸಮಾಜಪರ ಕಾಳಜಿಗೆ ಸಾಕ್ಷಿ.

ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ಉಪನ್ಯಾಸಕ, ಕಲಾವಿದ, ಸಾಹಿತಿ, ಸಂಶೋಧಕ, ಸಮಾಜಪರ ಚಿಂತಕ ಡಾ.ಯೋಗೀಶ್ ಕೈರೋಡಿಯವರ ಸಾಧನೆಯ ಹಾದಿಗೆ ಇವಿಷ್ಟು ಅಕ್ಷರದ ಮಾಲಾರ್ಪಣೆ.

Credits: ಪಟ್ಲ ಯತೀನ್ ಪೂಜಾರಿ ಕಡೇಶಿವಾಲಯ

Email us: billavaswarriors@gmail.com

www.billavaswarriors.com


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »