TOP STORIES:

ತುಳುನಾಡ ತಲೈವ- ಅರವಿಂದ್ ಬೋಳಾರ್


 

ಇತ್ತೀಚಿಗಿನ ಕೆಲ ವರ್ಷಗಳಿಂದ ತುಳುನಾಡಿನ ಸಿನೆಮಾ, ಸೀರಿಯಲ್, ಟಿವಿ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಅರವಿಂದ್ ಬೋಳಾರ್ ಅವರದ್ದೇ ಹವಾ. ಸೌಮ್ಯ ವೆಕ್ತಿತ್ವ, ಅಜಾತ ಶತ್ರು, ಯಾವುದೇ ಪಾತ್ರಗಳನ್ನು ಲೀಲಾಜಾಲವಾಗಿ ನಿಭಾಯಿಸುವ ಸಾಮರ್ಥ್ಯ, ಅದಲ್ಲದೇ ಸಮಾಜದಲ್ಲಿನ ಕೆಡುಕುಗಳ ವಿರುದ್ಧ ಕಪಟತನವಿಲ್ಲದೆ ಮುಕ್ತವಾಗಿ ಮಾತಾನಾಡುವ ಧೈರ್ಯ ಹೊಂದಿರುವ ಬೋಳಾರರು ಇದೀಗ ತುಳುನಾಡ ತಲೈವ ಎಂದೇ ಪರಿಗಣಿಸಲ್ಪಟ್ಟಿದ್ದಾರೆ. ಬೋಳಾರ್ ಅವರ ಮುಗ್ದ ಹಾಸ್ಯಕ್ಕೆ ಮಾರು ಹೋಗದವರು ಕನ್ನಡ ಕರಾವಳಿಯಲ್ಲಿ ಯಾರೂ ಇರಲಾರರು.


ಕರಾವಳಿಯಲ್ಲಿ ಇದೀಗ ಸಿನೇಮಾ ನಿರ್ದೇಶಕನೊಬ್ಬ ಸಿನೆಮಾ ಮಾಡಲು ಹೊರಟಿದ್ದಾನೆಂದರೆ ಆತ ಮಾಡುವ ಮೊದಲ ಕೆಲಸ ಅರವಿಂದ್ ಬೋಳಾರ್ ಅವರ ಅಶೀರ್ವಾದ ಬೇಡಿ ಅವರೊಂದಿಗೆ ಚಿತ್ರದ ಬಗ್ಗೆ ಚರ್ಚಿಸುವುದು. ಇಲ್ಲಿ ಸಿನೆಮಾದಲ್ಲಿ ಬೋಳಾರರು ಅಭಿನಯ ಮಾಡ್ತಾರೋ, ಇಲ್ಲವೋ ಎಂಬ ಪ್ರಶ್ನೆಗೆ ಎಡೆಯಿಲ್ಲ. ಬದಲಾಗಿ ಅವರ ನಗುಮುಖದ ಆಶೀರ್ವಾದವಿದ್ದರೆ ಯಾವುದೇ ಸಿನೇಮಾ ಇರಲಿ ಅದು ಜನರಿಗೆ ಹಚ್ಚಿಕೊಂಡು ಬಿಡುತ್ತದೆ ಎಂದು ನಿರ್ದೇಶಕರ, ನಿರ್ಮಾಪಕರ ನಂಬಿಕೆ.


ಕೋಸ್ಟಲ್ ವುಡ್ಡಿನಲ್ಲಿ ಅರವಿಂದ್ ಬೋಳಾರ್ ಇಂದು ಒಂದು ವಿಶೇಷ ಶಕ್ತಿ. ಪೋಸ್ಟರಿನಲ್ಲಿ ಅಥಾವಾ ಪ್ರಚಾರದ ವೇಳೆ ಬೋಳಾರ್ ಅವರ ಚಿತ್ರ ಕಂಡರೆ ಕರಾವಳಿಗರು ತಕ್ಷಣ ಸಿನೆಮಾ ನೋಡಲೇ ಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಂದು ಅರವಿಂದ್ ಬೋಳಾರ್ ಕರಾವಳಿಯಲ್ಲಿ ಅತೀ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಕಲಾವಿದ.

ಅರಂವಿದ್ ಅವರ ಮುಖವನ್ನಿಟ್ಟುಕೊಂಡೇ ಪ್ರಚಾರ ಗಿಟ್ಟಿಸಿಕೊಳ್ಳುವ ಫೇಸ್ ಬುಕ್ಕ್ , ಟ್ರೋಲ್ ಪೇಜುಗಳು ಸಾಕಷ್ಟಿವೆ. ತುಳುನಾಡಿನಲ್ಲಿ ಇಂದು ಎಲ್ಲರನ್ನೂ ಆಕರ್ಷಿಸುವ, ನಗಿಸುವ ಮಾಂತ್ರಿಕ ಶಕ್ತಿ ಇದೆಯೆಂದರೆ ಅದು ಅರವಿಂದ್ ಬೋಳಾರ್ ಅವರಿಗೆ ಮಾತ್ರ. ಇತ್ತೀಚೆಗೆ ಬೋಳಾರ್ ಅವರು ನಡೆಸಿಕೊಟ್ಟ ಟಿವಿ ಕಾರ್ಯಕ್ರಮವೊಂದು ವಿವಾದಕ್ಕೊಳಗಾದಾಗ ಇಡೀ ತುಳು ನಾಡು ಅವರ ಬೆನ್ನ ಹಿಂದೆ ಅವರ ಬೆಂಬಲಕ್ಕೆ ನಿಂತಿತ್ತು. ಕುಹಕ ಮನಸ್ಸುಗಳು ಬೋಳಾರರಿಗೆ ದೊರಕಿದ ಈ ಬೆಂಬಲದಿಂದ ದಿಕ್ಕುತೋಚದಂತಾಗಿ ಚಡಪಡಿಸುವ ಸ್ಥಿತಿಯುಂಟಾಗಿತ್ತು. ಈ ಕಾರಣಕ್ಕಾಗಿಯೇ ಬೋಳಾರ್ ಅವರನ್ನು ತುಳುನಾಡ ಮಾಣಿಕ್ಯ ಅಥಾವ ತುಳುನಾಡ ತಲೈವ ಎಂಬ ಬಿರುದುಗಳನ್ನಿತ್ತು ಜನರು ಗೌರವಿಸುತ್ತಿರುವುದು.

ಬಡ ಬಿಲ್ಲವ ಕುಟುಂಬದಲ್ಲಿ ಜನಿಸಿ ಕೇವಲ ತನ್ನ ಪ್ರತಿಭೆಯಿಂದಲೇ ಹಂತ ಹಂತವಾಗಿ ಬೆಳೆದ ಅರವಿಂದ್ ಬೋಳಾರ್ ಇಂದು ಬಿಲ್ಲವ ಸಮಾಜದ ಹೆಮ್ಮೆಯ ಮುಕುಟ ಎಂದು ಕರೆಯಲ್ಪಡುತ್ತಾರೆ. ಶ್ರೀ ನಾರಯಣ ಗುರುಗಳ ತತ್ವಗಳನ್ನು ಚಾಚೂ ತಪ್ಪದೆ ಪಾಲಿಸುವ ಬೋಳಾರ್ ಬಿಲ್ಲವ ಕಾರಣಿಕ ಪುರುಷರಾದ ಕೋಟಿ-ಚೆನ್ನಯ್ಯರ ನೀತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು. ಕೇವಲ ಪ್ರಸಿದ್ಧಿ ಅಥಾವಾ ದುಡ್ಡಿಗಾಗಿ ತನ್ನ ಪ್ರತಿಭೆಯನ್ನು ಮಾರಟ ಮಾಡದೆ ಓರ್ವ ಜವಾಬ್ದಾರಿಯುತ ಕಲಾವಿದನಾಗಿ ಸಮಾಜದಲ್ಲಿನ ಕೆಡುಕುಗಳ ಬಗ್ಗೆ, ಕಪಟತನದ ಬಗ್ಗೆ ಧ್ವನಿ ಎತ್ತುವಲ್ಲಿ ಬೋಳಾರರು ಮೊದಲ ಸ್ಥಾನದಲ್ಲಿದ್ದಾರೆ. ನೇರ ನುಡಿಯ, ಸೌಮ್ಯ ಸ್ವಭಾವದ ಹಾಗೂ ಲಲಿತ ಜೀವನದ ರುವಾರಿಯಾದ ತಲೈವ ಅರವಿಂದ್ ಬೋಳಾರ್ ಅವರನ್ನು ಪಡೆದ ಈ ಕಾಲಘಟ್ಟದ ಜನತೆ ಧನ್ಯರು.

Special article by: billavaswarriors.com team.


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »