TOP STORIES:

FOLLOW US

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 172 ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ಪ್ರೋತ್ಸಾಹಧನ ವಿತರಣೆ


ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 172 ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ಪ್ರೋತ್ಸಾಹಧನ ವಿತರಿಸಲಾಯಿತು.

ಶ್ರೀ ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನ ಬೆಂಗಳೂರು ವತಿಯಿಂದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಸಹಯೋಗದಲ್ಲಿ ಸುರತ್ಕಲ್ ಶ್ರೀ ಗುರು ಚಾರಿಟೆಬಲ್ ಟ್ರಸ್ಟ್ ಸಹಕಾರದಲ್ಲಿ ಕುದ್ರೋಳಿ ಕ್ಷೇತ್ರದಲ್ಲಿ ಭಾನುವಾರ ದ.ಕ ಹಾಗೂ ಉಡುಪಿ ಜಿಲ್ಲೆಗಳ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ನಡೆಯಿತು.

ಬಡ ಕುಟುಂಬದಲ್ಲಿ ಹುಟ್ಟಿ, ಸರಳತೆ ಮೈಗೂಡಿಸಿಕೊಂಡು, ಸಮಾಜಸೇವೆ ಮೂಲಕ ಬಡಜನರ ಏಳಿಗೆಗೆ ಶ್ರಮಿಸಿದವರು ಜೆ.ಪಿ.ನಾರಾಯಣ ಸ್ವಾಮಿ. ಅವರು ತಮ್ಮ ಜೀವಿತಾವಧಿಯಲ್ಲಿ ಸಹಸ್ರಾರು ಮಂದಿಗೆ ಸಹಾಯ ಮಾಡಿದ್ದರು ಎಂದು ಬೆಂಗಳೂರಿನ ಶ್ರೀ ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನ ಟ್ರಸ್ಟಿ ಕುಸುಮಾ ಅಜಯ್ ಉದ್ಘಾಟಿಸಿ ಮಾತನಾಡಿದರು.

ನಾವು ಮಾಡುವ ಆಸ್ತಿ ಯಾವತ್ತೂ ಶಾಶ್ವತ ಅಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಕೌಶಲಗಳನ್ನು ಬೆಳೆಸಿಕೊಂಡು ಜ್ಞಾನಾರ್ಜನೆ ಮೂಲಕ ಸಮಾಜ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಜೆ.ಪಿ. ನಾರಾಯಣ ಸ್ವಾಮಿಯವರು ತಮ್ಮ ಜೀವಿತಾವಧಿಯಲ್ಲಿ ಅಸಂಖ್ಯಾತ ಬಡವರು, ಅಶಕ್ತರಿಗೆ ಸಹಾಯಹಸ್ತ ನೀಡಿದ್ದಾರೆ. ಅನೇಕ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪ್ರೋತ್ಸಾಹಿಸಿದ್ದ ಅವರು ಎಲ್ಲರಿಗೂ ದಾರಿದೀಪವಾಗಿದ್ದರು. ಶ್ರೀಯುತರು ವಿಧಿವಶರಾದ ಮೇಲೆ ಅವರ ಪುತ್ರ ಜೆ.ಪಿ.ಸುಧಾಕರ್ ಅವರು ಶ್ರೀ ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನ ಎಂಬ ಸೇವಾ ಸಂಸ್ಥೆ ಸ್ಥಾಪಿಸಿ ತಂದೆಯ ಆದರ್ಶಗಳನ್ನು ಪಾಲಿಸುತ್ತ ಬಂದಿದ್ದಾರೆ ಎಂದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಪ್ರತಿಷ್ಠಾನದ ಸ್ಥಾಪನೆಯಾದ 2 ವರ್ಷಗಳಿಂದ ಕರ್ನಾಟಕದಾದ್ಯಂತ ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧ ನೀಡುತ್ತ ಬರಲಾಗಿದೆ. ಈ ವರ್ಷ ಕರ್ನಾಟಕ ರಾಜ್ಯಾದ್ಯಂತ 77 ಲಕ್ಷ ರೂ. ಪ್ರೋತ್ಸಾಹಧನವನ್ನು ವಿತರಿಸಲಾಗಿದೆ. ಅಲ್ಲದೆ ವೃದ್ಧರು, ಅಶಕ್ತರು, ಆರ್ಥಿಕವಾಗಿ ಹಿಂದುಳಿದವರು, ಬಡ ಅನಾರೋಗ್ಯಪೀಡಿತರಿಗೆ ಆರ್ಥಿಕ ಸಹಾಯ ನೀಡುತ್ತ ಬರಲಾಗುತ್ತಿದೆ. ಆರೋಗ್ಯ ಶಿಬಿರ, ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ, ಪದವೀಧರ ಯುವತಿ ಯುವಕರಿಗೆ ಕೌಶಲ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಿ ಕೊಡಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಸಾರ್ವಜನಿಕರ ಸೇವೆಗೂ ಗಮನಹರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಜೆ.ಪಿ.ನಾರಾಯಣ ಸ್ವಾಮಿ ಜಯಂತಿ ದಿನ ಸಮಾಜದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿರುವ ಹಿರಿಯರು, ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಸಮಾಜ ಸೇವೆಗೈದವರಿಗೆ ಜೆಪಿಎನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.

ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶೈಲೇಂದ್ರ ವೈ. ಸುವರ್ಣ, ಜೆ.ಪಿ.ನಾರಾಯಣ ಸ್ವಾಮಿ ಟ್ರಸ್ಟ್‌ ಟ್ರಸ್ಟಿ ಅಜಯ್ ಉಪಸ್ಥಿತರಿದ್ದರು. ಚಂದ್ರಶೇಖರ ನಾನಿಲ್ ಸ್ವಾಗತಿಸಿದರು.


Share:

More Posts

Category

Send Us A Message

Related Posts

ಕೋಟ ಶ್ರೀನಿವಾಸ ಪೂಜಾರಿಯಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರೀ ಪೈಪೋಟಿ: ಗೀತಾಂಜಲಿ ಸುವರ್ಣ ಹೆಸರು ಮುಂಚೂಣಿಗೆ


Share       ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಕೋಟ ಅವರ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಉದ್ಭವ ವಾಗುತ್ತಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೈಪೋಟಿ ಶುರುವಾಗಿದ್ದು, ಜಾತಿ ಲೆಕ್ಕಾಚಾರ, ಪಕ್ಷದಲ್ಲಿನ ಹಿರಿತನ ಎಲ್ಲವೂ ಗಣನೆಗೆ ತೆಗೆದುಕೊಂಡು


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ರಿ ವತಿಯಿಂದ 5ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ವತಿಯಿಂದ ಇಂದು ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ 5ನೇ ವರ್ಷದ ಪುಸ್ತಕ ವಿತರಣೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಹಿಂದು ಹಿಂದುಗಳನ್ನೇ ತುಳಿದು ಬಡಿದಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ


Read More »

ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಳ್ಳಾಲ್‍ಬಾಗ್ 5 ಕುಟುಂಬಗಳಿಗೆ 1.50 ಲಕ್ಷ ರೂ ವೈದ್ಯಕೀಯ ನೆರವು


Share       ಬಿರುವೆರ್ ಕುಡ್ಲ-ಫ್ರೆಂಡ್ಸ್  ಬಳ್ಳಾಲ್‍ಬಾಗ್ 5 ಕುಟುಂಬಗಳಿಗೆ ವೈದ್ಯಕೀಯ ನೆರವು ಕುದ್ರೋಳಿ,ಜೂ.1: ಉದಯ ಪೂಜಾರಿ ಬಳ್ಳಾಲ್ ಬಾಗ್ ನೇತೃತ್ವದಲ್ಲಿ ಫ್ರೆಂಡ್ಸ್ ಬಳ್ಳಾಲ್‍ಬಾಗ್ ,ಬಿರುವೆರ್ ಕುಡ್ಲದ ವತಿಯಿಂದ ಐದು ಅರ್ಹ ಕುಟುಂಬಗಳ ಸದಸ್ಯರ ವೈದ್ಯಕೀಯ ನೆರವಿಗೆ ಆರ್ಥಿಕ


Read More »

ಬಹುಮುಖ ಪ್ರತಿಭೆಯ ರಿಷಿತ್ ರಾಜ್ ಗೆ ಸುಳ್ಯ ರಂಗಮನೆ ಪ್ರತಿಭಾ ಪುರಸ್ಕಾರ


Share       ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಅಭಿನಯ ಪ್ರಧಾನ ಚಿಣ್ಣರಮೇಳದಲ್ಲಿ  ಝೀ ಕನ್ನಡ ಡ್ರಾಮಾ ಜ್ಯೂನಿಯರ್ ಸೀಸನ್ 5 ರ ಫೈನಲಿಸ್ಟ್ ಪ್ರತಿಭಾನ್ವಿತ ಬಾಲಪ್ರತಿಭೆ ರಿಷಿತ್ ರಾಜ್ ವಿಟ್ಲ ಇವರಿಗೆ


Read More »

ಬಂಟ್ವಾಳ ಬಿ. ಸಿ. ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ತೆರವು


Share       ಬಂಟ್ವಾಳ: ಬಿ.ಸಿ.ರೋಡಿನ ಪ್ರಮುಖ ಲ್ಯಾಂಡ್ ಮಾರ್ಕ್ ಎನಿಸಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವು ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ‌ ಹಿನ್ನೆಲೆಯಲ್ಲಿ ತೆರವುಗೊಂಡಿದೆ. ನಾರಾಯಣ ಗುರು ವೃತ್ತದ ನಿರ್ಮಾಣ ಹಾಗೂ ನಿರ್ವಹಣೆಯನ್ನು ಬಂಟ್ವಾಳ ತಾಲೂಕು ಬಿಲ್ಲವ ಸಂಘ


Read More »

ಬಿಲ್ಲವ ಸಮಾಜ ಜಿಲ್ಲೆಯಲ್ಲಿ ರಾಜಕೀಯವನ್ನು ಬಿಟ್ಟು ಒಟ್ಟಾಗ ಬೇಕಿದೆ. ಉದಯ ಪೂಜಾರಿ ಬಲ್ಲಾಳ್ ಭಾಗ್.


Share       ಬಿಲ್ಲವ ಸಮಾಜ ಜಿಲ್ಲೆಯಲ್ಲಿ ರಾಜಕೀಯವನ್ನು ಬಿಟ್ಟು ಒಟ್ಟಾಗ ಬೇಕಿದೆ. ಬಿಲ್ಲವರು ಎಲ್ಲವನ್ನೂ ಬಲ್ಲವರು. ಹಿಂದುತ್ವ ಸಿದ್ಧಾಂತವನ್ನು ಅರಿತುಕೊಂಡವರು, ಜಿಲ್ಲೆಯ ಬಹು ಸಂಖ್ಯಾತ ಸಮಾಜ,ರಾಜಕೀಯವನ್ನು ನಿರ್ಧಾರ ಮಾಡುವ ನಿರ್ಣಾಯಕರಾಗಿದ್ದಾರೆ. ಉದಯ ಪೂಜಾರಿಯವನ್ನು ತುಳಿಯುವ ಪ್ರಯತ್ನ ಬಹಳ


Read More »