ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷರಾಗಿ ಅಕ್ಷಿತ್ ಸುವರ್ಣ ಪುನರಾಯ್ಕೆಯಾಗಿದ್ದಾರೆ.
ಅಕ್ಷಿತ್ ಸುವರ್ಣ ಅವರಿಗೆ ಬೆಂಗಳೂರಿನ ಜೆಪಿ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಸೋಮವಾರ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿದರು.
ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿ ವಿವಿಧ ಕಾರ್ಯಕ್ರಮಗಳ ಮೂಲಕ ಪಕ್ಷದ ಅಭಿವೃದ್ಧಿಯಲ್ಲಿ ಮಂಚೂಣಿ ನಾಯಕತ್ವ ವಹಿಸಿರುವು ಅಕ್ಷಿತ್ ಸುವರ್ಣ ಅವರ ಕಾರ್ಯವನ್ನು ಗಮನಿಸಿ ಪಕ್ಷ ಇನ್ನೊಮ್ಮೆ ಅವಕಾಶ ನೀಡಿದ್ದು, ಪಕ್ಷದ ತತ್ವ ಹಾಗೂ ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷದ ಎಲ್ಲಾ ಸಮುದಾಯದ ಯುವ ಮುಖಂಡರನ್ನು ಹಾಗೂ ಯುವ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಕ ಜಿಲ್ಲೆಯಲ್ಲಿ ಯುವ ಜನತಾ ದಳ (ಜಾತ್ಯಾತೀತ) ವಿಭಾಗವನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಸೂಚಿಸಿದ್ದಾರೆ.