TOP STORIES:

FOLLOW US

ದಕ್ಷ ಪ್ರಾಮಾಣಿಕ ಪಾದರಸದಂತೆ ಕ್ರಿಯಾಶೀಲ ವ್ಯಕ್ತಿತ್ವವುಳ್ಳ ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಎನ್ ಪದ್ಮನಾಭ ಮಾಣಿಂಜ


ದಕ್ಷ ಪ್ರಾಮಾಣಿಕ ಪಾದರಸದಂತೆ ಕ್ರಿಯಾಶೀಲ ವ್ಯಕ್ತಿತ್ವವುಳ್ಳ ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಎನ್ ಪದ್ಮನಾಭಮಾಣಿಂಜ

ಬದುಕು ನಿಂತ ನೀರನ್ನಾಗಿಸದೇ ಸದಾ ನಿರ್ಮಲ ಸೇವಾ ಮನೋಭಾವದ ಜಲಪಾತವನ್ನಾಗಿಸಿ ಕೊಂಡಾಗ ಮಾತ್ರ ಬದುಕುಬಂಗಾರವಾಗಿ

ಸಾರ್ಥಕ್ಯ ಜೀವನ ಎನ್ನಿಸಿಕೊಳ್ಳಲು ಸಾಧ್ಯ.

ಗುರಿಯಾಗಿ ಆತ್ಮ ಶಕ್ತಿಯೊಂದೇ ಸರ್ವದಾ ಮನ ತುಂಬಿದ್ದರೆ ಯಶಸ್ಸಿನ ಗರಿ ಶಾಶ್ವತ. ದೇವರು ಮೆಚ್ಚುವಂತಹ ಸತ್ಯ ಧರ್ಮ ನ್ಯಾಯದಪಥದಲ್ಲಿ ಸರ್ವದಾ ಬಾಳು ಮುಂದುವರಿದರೆ ದೇವರೊಲುಮೆಯ ಆದರ್ಶ ಜೀವನದಿಂದ ಬದುಕು ನಂದನವನವಾಗುವುದು.

ಮುಖಂಡರಾಗಲು

ಇಚ್ಚಿಸುವವರಲ್ಲಿ ಮೊದಲಿಗೆ ಇರಬೇಕಾದುದು ಹೃದಯ ಸಂಪನ್ನತೆ ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯಂತೆ

ಸಾಮಾಜಿಕ ,ಆಧ್ಯಾತ್ಮಿಕ, ಧನಾತ್ಮಕ ಹಿತಚಿಂತನೆಗಳ ಮುಖೇನ ಓರ್ವ ಆದರ್ಶವ್ಯಕ್ತಿಯಾಗಿ, ಉತ್ಸಾಹಿ ಸೇವಾ ಕಾರ್ಯಕರ್ತರಾಗಿ, ಮನೋಜಾಗೃತರಾಗಿ, ಧಾರ್ಮಿಕ ಮಾರ್ಗದರ್ಶಕರಾಗಿ,

ಶಕ್ತಿ ಯುಕ್ತಿಪ್ರೇರಕರಾಗಿ ಜನಮಾನಸದ ಹೃದಯದಿ ಶೋಭಿಸುತ್ತಿರುವ ನಿಸ್ವಾರ್ಥ ಸೇವಾ ಮಾಣಿಕ್ಯ. ಧೀಮಂತ ನಾಯಕನಾಗಿಪ್ರಾಮಾಣಿಕತೆ, ದಕ್ಷತೆ, ಶಿಸ್ತುಗಾರವಾಗಿ ನೇರನುಡಿಪಾಲಕನಾಗಿ,

ನಿಷ್ಟುರವಾದಿಯಾಗಿ,

ಮಿತಭಾಷಿಯಾಗಿ, ರಾಜ ಗಾಂಭೀರ್ಯ ಕಳೆಯ ಸುಂದರ ಅಜಾನುಬಾಹು ಆಕರ್ಷಕ ಮೈಕಟ್ಟು, ಚುರುಕುತನದ ಬುದ್ಧಿವಂತಿಕೆಯಿಂದಕೂಡಿದ್ದು

ಸಭೆ ಸಮಾರಂಭಗಳಲ್ಲಿ ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ಪಾದರಸದಂತೆ ಕ್ರಿಯಾಶೀಲರಾಗಿ ಸರ್ವರ ಕಣ್ಮನ ಸೆಳೆದು ಮಿಂಚುತ್ತಿರುವಹಿರಿಯ ನಿಷ್ಠಾವಂತ ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಗೌರವಾನ್ವಿತ ಶ್ರೀಮಾನ್ ನಿರ್ಮಲ್ ಪದ್ಮನಾಭ ಮಾಣಿಂಜರವರಯಶಸ್ವಿ ಸಾಧನೆಯ ಯಶೋಗಾಥೆ.

ತುಳುನಾಡಿನ ಅಳಿಯ ಕಟ್ಟಿನ ಪ್ರತಿಷ್ಠಿತ ಮುಗ್ಗಗುತ್ತು ಮನೆತನದ ಕೇಶವ ಪೂಜಾರಿ ಮತ್ತು ಕುಕ್ಕಿನಡ್ಡ ಮನೆತನದ ಮೋಹಿನಿದಂಪತಿಗಳ ಪ್ರಥಮ ಪುತ್ರನಾಗಿ 1937 ನೇ ಸಪ್ಟೆಂಬರ್ 5 ರಂದು ಶುಭ ಜನನ.ಪಾಣೆಮಂಗಳೂರು ಎಸ್.ವಿ.ಎಸ್ ಶಿಕ್ಷಣ ಸಂಸ್ಥೆಯಲ್ಲಿಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೊರೈಸಿ ತದನಂತರ ಮಂಗಳೂರು ಸರ್ಕಾರಿ ಪದವಿ ಶಿಕ್ಷಣ ವ್ಯಾಸಂಗ ಮಾಡಿರುತ್ತಾರೆ.

ಅಜ್ಞಾನದಿಂದ ಸುಜ್ಞಾನದೆಡೆಗೆ ಎಂಬ ಪೂರ್ವಜರ ಮಾತಿಗೆ ಸರಿಸಾಟಿವೆಂಬಂತೆ

ಪದ್ಮನಾಭ ಮಾಣಿಂಜರವರು ಬದುಕಿನ ಯೌವ್ವನದ ಪುಟದೀ ಶೈಕ್ಷಣಿಕ ಖಾತೆ ತೆರೆದು ಅವಿರತ ಕಲಿಕಾಶ್ರಮದಿಂದ ಪ್ರಪಥಮವಾಗಿ1959 ರಲ್ಲಿ  ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಿಂದ ವಲಯ ಅರಣ್ಯಾಧಿಕಾರಿ ತರಬೇತಿಗೆ ಆಯ್ಕೆಯಾಗಿ ಮುಂದೆಕೊಯಮೂತ್ತೂರಿನ ಅರಣ್ಯ ವಿಶ್ವವಿದ್ಯಾನಿಲಯದಲ್ಲಿ ಎರಡು ವರ್ಷ ಅರಣ್ಯ ಶಾಸ್ತ್ರದ ಉನ್ನತ ವಿದ್ಯಾಭ್ಯಾಸವನ್ನು

ಅಧ್ಯಯನ ಮಾಡಿದ ಯಶಸ್ಸಿನ ಮೆಟ್ಟಿಲು ಇವರದ್ದು. ತನ್ನ ಕರ್ತವ್ಯದ ಬದುಕಿನಲ್ಲಿ ಓರ್ವ  ಜವಾಬ್ದಾರಿಯುತ ಸರ್ಕಾರಿ  ನೌಕರನಾಗಿಪ್ರಾಮಾಣಿಕತೆ, ನಿಷ್ಠೆ,ದಕ್ಷತೆಗೆ ಸವಾಲೆಂಬಂತೆ  1961 ನೇ ನವೆಂಬರಿನಲ್ಲಿ ಕರ್ನಾಟಕ ಸರ್ಕಾರದ ವಲಯ ಅಧಿಕಾರಿಯಾಗಿನೇಮಕಗೊಂಡು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆದರ್ಶ ಅರಣ್ಯ ಅಧಿಕಾರಿಯಾಗಿ ಬಹು ನಿಷ್ಠೆಯಿಂದ ಕರ್ತವ್ಯನಿರ್ವಹಿಸಿರುವರು.1978 ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ

ಭಡ್ತಿಗೊಂಡ ನಂತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.1983 ರಲ್ಲಿ ಆಫ್ರಿಕಾ ಖಂಡದ ಝಂಬಿಯು ,ಜಿಂಬಾಬ್ವೆಮತ್ತು ಸ್ಕಾಟ್ಲ್ಯಾಂಡ್ ದೇಶವಿದೇಶಗಳಲ್ಲಿ ಅರಣ್ಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಪರಿಣಿತಿ ಪಡೆದಿರುತ್ತಾರೆ. ಅಷ್ಟೇ ಅಲ್ಲದೆಜಗತ್ಪ್ರಸಿದ್ದ ಇಂಗ್ಲೆಂಡ್ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಅರಣ್ಯ ಶಾಸ್ತ್ರದ ಅಧ್ಯಯನ ನಡೆಸಿದಂತಹ ಇವರ ಹಿರಿಮೆ ಅಕ್ಷರಶಃಅಸಾಧಾರಣವಾದದ್ದು. ತನ್ನ ನಿರಂತರ 1990 ರಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ

ಭಡ್ತಿಗೊಂಡು ಮಂಗಳೂರು ಮತ್ತು ಕಾರ್ಕಳದಲ್ಲಿ ಸೇವೆ ಸಲ್ಲಿಸಿರುತ್ತಾರೆ. ತನ್ನ ಸಾರ್ಥಕ್ಯ  ವೃತ್ತಿ ಪುಟದಲ್ಲಿ ಧೀಮಂತಿಕೆಯಿಂದಸುದೀರ್ಘ 35 ವರ್ಷದ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ 1995 ರಲ್ಲಿನಿವೃತ್ತಿಗೊಂಡಿರುವಂತಹ  ಟಾಕುಟೀಕೆಯ ಅಧಿಕಾರಿ.ಇವರು ರಾಜ ಗಾಂಭೀರ್ಯದ ಹುಲಿಯಂತೆ ಘರ್ಜಿಸುತ್ತ,ಯಾರನ್ನು ಲೆಕ್ಕಿಸದೆಧೈರ್ಯದಿಂದ ಸತ್ಯವನ್ನು ಕಡ್ಡಿ ತುಂಡಾದಂತೆ ಉಲ್ಲೇಖಿಸುವ ನಿಷ್ಠುರವಾದಿ, ಯಾವುದೇ ಆಮಿಷಗಳಿಗೆ ಒಳಗಾಗದೆ ಭೃಷ್ಟರ ಪಾಲಿಗೆಸಿಂಹಸ್ವಪ್ನರಾಗಿರುವ ನಿವೃತ್ತ ಅಧಿಕಾರಿ ಪದ್ಮನಾಭ ಮಾಣಿಂಜರವರು ತುಳುನಾಡಿನ ಹೊನ್ನ ಕಲಶ.

ಪದ್ಮನಾಭ ಮಾಣಿಂಜರವರು 1964 ರಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಿ ಶ್ರೀಮತಿ ಇಂದಿರಾರವನ್ನು ಬಾಳ ತೇರಿಗೆ ಒಲುಮೆಯಸಂಗಾತಿಯನ್ನಾಗಿ ಸ್ವೀಕರಿಸಿ ಸಂಸ್ಕಾರಯುತ ಮೌಲ್ಯಾಧಾರಿತ ಜೀವನವನ್ನು ಅಳವಡಿಸಿಕೊಂಡು ಪ್ರಸ್ತುತ ಮೂರು ಗಂಡು ಮಕ್ಕಳುಹಾಗೂ ನಾಲ್ಕು ಮೊಮ್ಮಕ್ಕಳ  ಸವಿಜೇನ ಒಡನಾಟದ  ಕೂಡುಕುಟುಂಬದೊಂದಿಗೆ ಸುಖಿಸಂಸಾರದ ಪಯಣದಲ್ಲಿ ಸಫಲರಾಗಿದ್ದಾರೆ. ತನ್ನ ವೃತ್ತಿ ನಿರತ ಸಮಯದಲ್ಲೂ ಹಲವಾರು ಸಮಾಜಮುಖಿ ಚಟುವಟಿಕೆಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಅಷ್ಟೇಅಲ್ಲದೆ ತನ್ನ ನಿವೃತ್ತಿಯ ನಂತರವೂ ಸಹ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜದಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ಶೈಲಿಯಲ್ಲಿ ಕೊಡುಗೆಯನ್ನು ನೀಡುತ್ತಾ ಸರ್ವರ ಹೃದಯದೀ ಪ್ರಶಂಸಾರ್ಹರಾಗಿರುತ್ತಾರೆ .

ಧಾರ್ಮಿಕ ಕ್ಷೇತ್ರವಾದ ಬೆಳ್ತಂಗಡಿ ತಾಲೂಕು ಕನ್ಯಾಡಿ ಶ್ರೀ ರಾಮಮಂದಿರದ ನಿರ್ಮಾಣದ ಕಾಲಾವಧಿಯಲ್ಲಿ ಅವಿರತ ಶ್ರಮದಿಂದ  ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡು ತನುಮನಗಳಿಂದ ಸಹಕರಿಸುತ್ತ ಕನ್ಯಾಡಿ ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿಸ್ವಾಮೀಜಿಯವರ ಆತ್ಮೀಯ ನಿಕಟವರ್ತಿಯಾಗಿರುತ್ತಾರೆ.

ಅಷ್ಟೇ‌ ಅಲ್ಲದೆ ಶ್ರೀರಾಮ ಕ್ಷೇತ್ರದ  ಟ್ರಸ್ಟಿಯಾಗಿರುತ್ತಾರೆ. ಹಾಗೇ ಗುರುದೇವ ಮಠ ನಿರ್ಮಾಣದಲ್ಲಿ ಸಂಪೂರ್ಣವಾಗಿತೊಡಗಿಸಿಕೊಂಡು ಕ್ಷೇತ್ರದ ಟ್ರಸ್ಟಿಯಾಗಿ ಪ್ರಾಮಾಣಿಕತೆಯಿಂದ ನಿಸ್ವಾರ್ಥ ಸೇವೆ ಸಲ್ಲಿಸಿರುತ್ತಾರೆ.

ಬ್ರಹ್ಮಶ್ರೀ ನಾರಾಯಣ ಗುರುವರ್ಯರ #ಸಂಘಟನೆಯಿಂದ ಬಲಯುತರಾಗಿರಿ #ಎನ್ನುವ ತತ್ವ ಸಂದೇಶಗಳ ಪರಿಪಾಲಕನಾಗಿ, ಅನುಯಾಯಿಯಾಗಿ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಸ್ಥಾಪನೆಗೆ ಕೊಡುಗೈ ದಾನಿಯಾಗಿ ಹಾಗೂ#ನಾರಾಯಣ ಗುರು ವಾಣಿಜ್ಯ ಸಂಕೀರ್ಣ #ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು  ಪ್ರಸ್ತುತ ಎರಡನೇ ಬಾರಿ #ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಾಮಾಜಿಕ ಸೇವಾಕರ್ತರು. ಇವರು ಯಾವುದೇ ಪ್ರಚಾರಗಿಟ್ಟಿಸಿಕೊಳ್ಳದೇ ಅದೆಷ್ಟೋ ಸಂಘ ಸಂಸ್ಥೆಗಳಿಗೆ ಹೆಚ್ಚೆಚ್ಚು ದೇಣಿಗೆ ನೀಡುತ್ತ ಸಹಕರಿಸಿದ ಸಹಕಾರ ಮೂರ್ತಿ.

#ವಿದ್ಯೆಯಿಂದ ಸ್ವತಂತ್ರರಾಗಿರಿ #ವಿದ್ಯೆಯಿಂದ ಜ್ಞಾನ ಉಂಟಾಗುತ್ತದೆ  ಸಮಾಜದಲ್ಲಿ ಶಿಕ್ಷಣ ಪ್ರಸಾರಕ್ಕೆ  ಮಹತ್ವ ನೀಡುವ ಗುರು ತತ್ವಆದೇಶದಂತೆ ಹಿಂದುಳಿದ ಬಡ ವಿದ್ಯಾರ್ಥಿಗಳಿಗಾಗಿ ಗುರುದೇವ ಎಜುಕೇಶನಲ್ ಟ್ರಸ್ಟ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದುಪ್ರಸ್ತುತ ಟ್ರಸ್ಟ್ ಉಪಾಧ್ಯಕ್ಷರಾಗಿರುತ್ತಾರೆ.

ರಾಷ್ಟ್ರೀಯ ರಬ್ಬರ್ ಬೋರ್ಡ್ ಮಾಜಿ

ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಪ್ರಬುದ್ಧತೆಯ ವ್ಯಕ್ತಿತ್ವ. ‌ಕುಕ್ಕಿನಡ್ಡ ಫ್ಯಾಮಿಲಿಯ ಟ್ರಸ್ಟಿ  ಅಧ್ಯಕ್ಷರಾಗಿ ಬೆಳ್ತಂಗಡಿ ರಬ್ಬರ್ಸೊಸೈಟಿ ಉಜಿರೆ  ಮಾಜಿ ಉಪಾಧ್ಯಕ್ಷರಾಗಿ ಹಾಲಿ ನಿರ್ದೇಶಕರಾಗಿದ್ದು ಮಾತ್ರವಲ್ಲದೆ #ಮಾಸ್ ಲಿಮಿಟೆಡ್ ಮಂಗಳೂರು ಮಾಜಿನಿರ್ದೇಶಕರಾಗಿರುತ್ತಾರೆ. ಉದ್ದಿಮೆಯಿಂದ ಆರ್ಥಿಕ ಸ್ವಾವಲಂಬಿಗಳಾಗಿ ಎಂಬ ಗುರು ಸಂದೇಶಕ್ಕೆ ಸರಿಸಮನ್ವಯವಾಗುವಂತೆ  ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ ಮಾಜಿ ಶಾಸಕರಾದ ಶ್ರೀ ವಸಂತ ಬಂಗೇರ, ಶ್ರೀ.ಕೆ.ಜಿ ಬಂಗೇರ, ವಕೀಲರಾದ ಶ್ರೀಭಗೀರಥ.ಜಿ ಹೀಗೆ ಹತ್ತು ಹಲವು ಸಹಕಾರ ಮನೋಭಾವನೆಯುಳ್ಳ ಸಹಪಾಠಿಗಳನ್ನು ಸೇರಿಸಿಕೊಂಡು ಉತ್ತಮ ಸಾಮಾಜಿಕಹಿತಚಿಂತನೆಯುಳ್ಳ  ಆರ್ಥಿಕ ಸಂಸ್ಥೆಯಾದ #ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘ #ಹುಟ್ಟು ಹಾಕಿರುವುದು ನಿಜಕ್ಕೂಶ್ಲಾಘನೀಯ. ಸಂಸ್ಥೆಯ ಉನ್ನತಿಗಾಗಿ ಸತತವಾಗಿ ಹನ್ನೊಂದು ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಬಯಸದೆ #ಶ್ರೀ ಗುರುದೇವವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರಾಗಿರುತ್ತಾರೆ.  ತನ್ನ ವೃತ್ತಿಜೀವನದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ ಇವರು ಇಂದು ತನ್ನ ಪೂರ್ಣ ಪ್ರಮಾಣದ ಸಹಕಾರವನ್ನು ಸಾಮಾಜಿಕ, ಧಾರ್ಮಿಕ, ಆರ್ಥಿಕ ಸೇವಾ ರಂಗದಲ್ಲೂಮುಂದುವರಿಸಿಕೊಂಡು ಬಂದಿರುತ್ತಾರೆ. ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘವನ್ನು ಸಹಕಾರದ ಕ್ಷೇತ್ರದಲ್ಲಿ ಅಭಿವೃದ್ಧಿಯಪಥದಲ್ಲಿ ಸಾಗಿಸಿರುವುದು ಇವರ ದಕ್ಷ ಆಡಳಿತಕ್ಕೆ ಹಿಡಿದಂತಹ ಕೈಗನ್ನಡಿಯ ಪ್ರತಿರೂಪ. ಇವತ್ತು ಶ್ರೀ ಗುರುದೇವ ವಿವಿಧೋದ್ಧೇಶಸಹಕಾರ ಸಂಘ ನಿಯಮಿತ ರಾಜ್ಯಮಟ್ಟದ ಉತ್ತಮ ಸಹಕಾರಿ ಸಂಘ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ ಎಂದರೆಅದಕ್ಕೆ ಅಧ್ಯಕ್ಷರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಪ್ರತಿಫಲ ಎಂದರೆ ತಪ್ಪಾಗಲಾರದು. 85 ವರ್ಷಕ್ಕೆ ಕಾಲಿಡುತ್ತಿರುವ ಇಳಿವಯಸ್ಸಿನಲ್ಲೂ ವೃತ್ತಿಯಲ್ಲಿ ತೋರಿಸುವ ನವಹುರುಪು, ಉಲ್ಲಾಸದ ಯುವಕನಂತಿರುವ ಇವರು ಇಂದಿಗೂ ಕಾರನ್ನುಚಲಾಯಿಸಿಕೊಂಡು ಹೋಗುವಂತಹ  ನವಚೈತನ್ಯಯುತ ಆರೋಗ್ಯ,ಹುಮ್ಮಸ್ಸನ್ನು ನೋಡಿದರೆ ಯುವ ಪೀಳಿಗೆಯನ್ನೇ  ನಾಚಿಸುವಂತಿದೆ. ಇವರ  ನಿಸ್ವಾರ್ಥ ಸೇವಾ ಮನೋಭಾವದ ಅವಧಿ ಫಲಪ್ರದವಾಗಿ ಪ್ರಸ್ತುತ 13 ಶಾಖೆಗಳನ್ನು ತೆರೆದಿದ್ದು ಮುಂದಿನಯೋಜನೆಯಡಿ 5 ಶಾಖೆಗಳನ್ನು ತೆರೆಯಲು ಸರಕಾರದಿಂದ ಅನುಮತಿ ಮಂಜೂರಾತಿಯಾಗಿರುತ್ತದೆ. ಈಗಾಗಲೇ ಬೆಳ್ತಂಗಡಿ ಕೇಂದ್ರಕಚೇರಿಗೆ ಒಂದು ಕೋಟಿ ರೂಪಾಯಿಯೊಳಗಿನ ನಿವೇಶನ ಹೊಂದಿದ್ದು,ಭವಿಷ್ಯದ ಕನಸಿನ ಕೂಸಿಗಾಗಿ ಸುಮಾರು 3.5 ಕೋಟಿರೂಪಾಯಿ ವೆಚ್ಚದಲ್ಲಿ ಕೇಂದ್ರ ಕಚೇರಿ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದೆ. ಇವರ ಪ್ರಬಲ ಅಧ್ಯಕ್ಷತೆಯಲ್ಲಿ ಮುನ್ನಡೆಸಿಕೊಂಡುಬರುತ್ತಿರುವ ಶ್ರೀಗುರುದೇವ ವಿವಿದ್ಧೋದ್ಧೇಶ ಸಹಕಾರ ಸಂಘ(ನಿ.) ಸಂಸ್ಥೆಯು ಪ್ರಸ್ತುತ 50 ಸಿಬ್ಬಂದಿಗಳ ಕುಟುಂಬಕ್ಕೆಅನ್ನದಾಸೋಹಿಯಾಗಿ, ಆಶ್ರಯದಾತವಾಗಿರುವಂತಹುದು ಸಾಕ್ಷಾತ್ ಸೌಭಾಗ್ಯವೇ ಸರಿ.

ಬೆಳ್ತಂಗಡಿ ಮಾಜಿ ಶಾಸಕರಾದ  ಸನ್ಮಾನ್ಯ ಶ್ರೀಯುತ ವಸಂತ ಬಂಗೇರರ ಬಲು ತೀರದ ನಿಕಟವರ್ತಿಯಾಗಿದ್ದು, ಸಭೆಸಮಾರಂಭಗಳಲ್ಲಿ ವಸಂತ ಬಂಗೇರರಿಂದಪದ್ಮನಾಭ ಮಾಣಿಂಜರವರು ಹುಲಿಯೆಂದೇ ಉಲ್ಲೇಖಿಸಿ ವರ್ಣನೆಗಳೊಗಾದಹೆಮ್ಮೆಯ  ಅಧಿಕಾರಿ. ಇವರು ಕೇವಲ ಕಟ್ಟುನಿಟ್ಟಿನ ಸರ್ಕಾರಿ ಅಧಿಕಾರಿಯಾಗಿರದೇ ಕೈ ಕೆಸರಾದರೆ ಬಾಯಿ ಮೊಸರೆಂಬ ಮಾತಿಗೆಪುಷ್ಟಿ ನೀಡುವಂತೆ ಉತ್ತಮ ಕೃಷಿಕನಾಗಿಯೂ ಪಳಗಿ ರಬ್ಬರ್,ಹಣ್ಣು ಹಂಪಲು, ಅಡಿಕೆ, ತೆಂಗು, ಗೇರು ಬೆಳೆಗಾರನಾಗಿ ಸಮಾಜದ

ಯುವಜನಾಂಗಕ್ಕೆ ಮಾದರಿ ಯಶಸ್ವಿ ಕೃಷಿಕರಾಗಿರುತ್ತಾರೆ.

ದೀಪದ ಪಾವಿತ್ರ್ಯವೂ ಲೋಕದ ಅಂಧಕಾರವನ್ನು ದೂರವಾಗಿಸಿ ಪ್ರಖರತೆಯ ಜ್ಯೋತಿ ನೀಡಿದಾಗ ಸಕಾರಾತ್ಮಕಬೆಳವಣಿಗೆಯಾಗುವುದು. ಹಾಗೇ ಇವರ ಹಿರಿತನದ ಸಾಧನೆಯ ಅನುಭವದ ಸಾರವು ಯುವಜನತೆಗೆ ಸ್ಪೂರ್ತಿಯಾಗಿ, ಮಾರ್ಗದರ್ಶಿಯಾಗಿ ಲೋಕಕ್ಕೆ ಮಾದರಿಯಾಗಲಿ, ಸಾಧನೆಯ ಗರಿ ಕೀರ್ತಿಪತಾಕೆ ಕಂಪು ಬಾನಂಗಳದ ಅಷ್ಟದಿಕ್ಕಿನಲ್ಲೂರಾರಾಜಿಸಲಿ, ಸಮಾಜಮುಖಿ ಕಲ್ಯಾಣದ ರೂಪುರೇಷೆಗಳು, ಆದರ್ಶ ಜೀವನದ ಮೌಲ್ಯಗಳು, ಪ್ರಾಮಾಣಿಕತೆ, ನೈತಿಕತೆ,

ಶಿಸ್ತು ಬದ್ಧತೆ ಪರರಿಗೆ ದಾರಿದೀಪವಾಗಲಿ. ದೈವ ದೇವರ ಕೃಪಾಕಟಾಕ್ಷವಿದ್ದು ಇನ್ನಷ್ಟು ಸಮಾಜ ಹಿತಚಿಂತನೆ ಅನಾವರಣವಾಗಲಿ,  ಮಿತಭಾಷಿಯಾಗಿ ಮಾತು  ಮಾಣಿಕ್ಯ, ಮೌನ ಬಂಗಾರವೆಂಬಂತೆ ಮಾತಿಗಿಂತ ಹೆಚ್ಚುತನ್ನ ಕೃತಿಗೆ ಒತ್ತು ಕೊಟ್ಟು ಅಚಲ ನಿರ್ಧಾರದದಿಟ್ಟ ಹೆಜ್ಜೆಯಿಂದ ಕಾರ್ಯ ಸಾಧಿಸುತ್ತ ಮಂದಸ್ಮಿತ ಭೂಷಣರಾಗಿ  ಗಮನಸೆಳೆದಿರುವ ಪಾದರಸದಂತಹ ಕ್ರಿಯಾಶೀಲ ವ್ಯಕ್ತಿತ್ವದಅಪರೂಪದ ನೆಚ್ಚಿನ ಜನಮನನಾಯಕನಿಗೆ ಪದಪುಂಜದೀ ಹೆಣೆದಿಹ ಅಭಿಮಾನಗೌರವದ ಪುಷ್ಪಾರ್ಚನೆ ಅರ್ಪಣೆಯಾಗಲಿ

ಶುಭಾಶಂಸನೆಗಳೊಂದಿಗೆ

ಅರ್ಚನಾ ಎಂ ಬಂಗೇರ ಕುಂಪಲ


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »