ದಾಖಲೆ ನಿರ್ಮಿಸಿದ ಮೂರರ ಪೋರಿ
ಕಾರ್ಕಳದ ಮುದ್ದು ಪುಟಾಣಿ ಮೃದಿನಿ ಕೋಟ್ಯಾನ್. ತನ್ನ ಎಳೆಯ ವಯಸ್ಸಿನಲ್ಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನಪ್ರತಿಭೆಯ ಮೂಲಕ ಹೆಸರನ್ನು ದಾಖಲಿಸುವ ಮೂಲಕ ಸಾಧನೆ ಮಾಡಿದ್ದಾಳೆ.
ಆಟ ಆಡುವ ವಯಸ್ಸಲ್ಲೇ ಸಾಧನೆ ಮಾಡಿರುವ ಪುಟಾಣಿಯು ಧೀರಜ್ ಸಾಲ್ಯಾನ್ ಹಾಗೂ ನಿರೀಕ್ಷಾ ಧೀರಜ್ ಇವರ ಮುದ್ದಿನಮಗಳು.. ಅಜ್ಜಿ ಪ್ರೇಮ ಅಂಚನ್‌ರ ಮುದ್ದಿನ ಮೊಮ್ಮಗಳು.
ಕೇವಲ ಎರಡೂವರೆ ವರ್ಷಕ್ಕೆ ಮನುಷ್ಯನ ದೇಹದ 14 ಭಾಗಗಳು, ಆರು ಪ್ರಾಣಿಗಳ ಹೆಸರು, ಏಳು ರಾಷ್ಟ್ರಗಳ ಚಿಹ್ನೆ, ಆರು ಬಣ್ಣ, 1 ರಿಂದ 10 ಸಂಖ್ಯೆ, 3 ರೈಮ್ಸ್, ಭಜನೆ, ಇಂಗ್ಲಿಷ್ ನಲ್ಲಿ ‘ಎ‘ ಅಕ್ಷರದಿಂದ ‘ಯು‘ ವರೆಗೆ ಹಾಗೂ ಇನ್ನಿತರ ಪದಗಳನ್ನು ಹೇಳುವ ಮೂಲಕದಾಖಲೆ ನಿರ್ಮಿಸಿದ್ದಾಳೆ.