ದಾನ ಕೊಟ್ಟ ಮೇಲೂ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಮಕ್ಕಳಿಗೆ ಭಾಗ ಕೊಡಬೇಕೆ..?
ಮದುವೆಯ ಸಮಯದಲ್ಲಿ ಪ್ರತ್ಯೇಕ ಆಸ್ತಿಯನ್ನು ಮಗಳಿಗೆ ನೀವು (ತಂದೆ) ಸ್ವಇಚ್ಛೆಯಿಂದ ದಾನ ಮಾಡಿದ್ದರೆ, ಅದನ್ನು ವಾಪಸ್ಪಡೆಯುವಂತಿಲ್ಲ. ಮಗಳಿಗೂ, ಮಗನಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕಿರುತ್ತದೆ.
ನಿಮ್ಮ ತಂದೆಯಿಂದ ನಿಮಗೆ ಬಂದಿದ್ದರೆ, ಅದು ನಿಮ್ಮ ಪ್ರತ್ಯೇಕ ಆಸ್ತಿಯಾಗುತ್ತದೆ. ಅದರಲ್ಲಿ ಮಗಳಿಗೆ ಭಾಗ ಕೊಡಬೇಕಿಲ್ಲ. ಆದರೆ, ಅಜ್ಜನಿಂದ ತಂದೆಗೆ ಬಂದು, ತಂದೆಯಿಂದ ನಿಮಗೆ ಬಂದಿದ್ದರೆ ಆಗ ಮಗಳಿಗೂ ಪಾಲು ಕೊಡಬೇಕು.