ದೇಶಪ್ರೇಮ ಎಂಬುವುದು ಪ್ರತಿಯೊಬ್ಬ ಭಾರತೀಯನ ಎದೆಯ ಬಡಿತದಲ್ಲೂ ಇದೆ. ಅತೀ ಚಿಕ್ಕ ವಯಸ್ಸಿನಲ್ಲೇ ನೇಣಿಗೆ ಕೊರಳೊಡ್ಡಿದ ಭಗತ್ ಸಿಂಗ್ ರವರ ದೇಶಪ್ರೇಮ ಅಪಾರವಾದದ್ದು. ತನ್ನ ಪ್ರಾಣವನ್ನೆ ದೇಶಕ್ಕಾಗಿ ಮುಡಿಪಾಗಿಟ್ಟ ಯೋಧರ ದೇಶಪ್ರೇಮ.
ಹಗಲು-ರಾತ್ರಿ ಎನ್ನದೆ, ಬೆವರು ಸುರಿಸಿ ದುಡಿದು ದೇಶಕ್ಕೆ ಅನ್ನವನ್ನು ನೀಡುವ ರೈತನ ದೇಶಪ್ರೇಮ. ಗಡಿಯಲ್ಲಿ ವೀರ ಯೋಧ ನಾಡಿನಲ್ಲಿ ಖಾಕಿ ಯೋಧ ಎನ್ನುವ ಹಾಗೆ ಪೋಲಿಸ್ ರ ದೇಶಪ್ರೇಮ.
ಹೀಗೆಯೇ ಪ್ರತಿಯೊಬ್ಬ ಭಾರತೀಯನಲ್ಲೂ ದೇಶಪ್ರೇಮವು ಅಚಲವಾಗಿದೆ. ಓಟ್ಟೊಟ್ಟಿಗೆ ದೇಶವು ಇನ್ನಷ್ಟು ಬಲಿಷ್ಠವಾಗಬೇಕಿದೆ. ಹೀಗೆ ದೇಶವು ಬಲಿಷ್ಠ ಆಗಬೇಕಾದರೆ ನಾವು ಸ್ವತಂತ್ರರಾಗಬೇಕು,ಸ್ವವಲಂಭಿಯಾಗಬೇಕು. ನಾವು ಸ್ವತಃ ಸ್ವವಲಂಬಿಯಾದರೆ ದೇಶವನ್ನು ಬಲಿಷ್ಠಗೊಳಿಸಬಹುದು ಮತ್ತು ಆಗ ಮಾತ್ರ ಆತ್ಮರ್ನಿಭರತೆಯ ಕನಸು ನನಸಾಗಲು ಸಾಧ್ಯ.
ದೇಶಪ್ರೇಮ ಮತ್ತು ಆತ್ಮನಿರ್ಭರತೆಯ ಕುರಿತಾದ ಹಾಗೂ ಭಾರತ ಸರ್ಕಾರದ ಮಿನಿಸ್ಟ್ರೀ ಆಫ್ ಇನ್ಫಾರ್ಮೇಷನ್ ರವರು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಶಾರ್ಟ್ ಫಿಲ್ಮ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕಿರುಚಿತ್ರ.
ಇದೆ ಪರಿಕಲ್ಪನೆಯನ್ನು ಇಟ್ಟುಕೊಂಡು ಯುವವಾಹಿನಿ ಮಾಣಿ ಘಟಕದ ಅರ್ಪಿಸುವ, ರಾಜೇಶ್ ಎಸ್ ಬಲ್ಯ ರವರ ಕಥೆ-ಚಿತ್ರಕಥೆ-ನಿರ್ದೇಶನದ ಈ ಕಿರುಚಿತ್ರಕ್ಕೆ ಶಿವರಾಜ್ ಪಿ.ಆರ್ ರವರು ಕೂಡ ಚಿತ್ರ ಕಥೆ ಜೊಡಿಸಿದ್ದಾರೆ. ಕಿರುಚಿತ್ರಕ್ಕೆ ಸಂಭಾಷಣೆಯನ್ನು ಪ್ರಶಾಂತ್ ಅನಂತಾಡಿ ಬರೆದಿದ್ದಾರೆ. ಪ್ರವೀಣ್ ಸಾಲ್ಯಾನ್ ಮತ್ತು ವಿಕ್ರಮ್ ಬಿಳಿಯೂರು ಅವರು ಇಡೀ ಕಿರುಚಿತ್ರದ ಕಣ್ಣುಗಳಂತೆ ಶೂಟಿಂಗ್ ಮಾಡಿದ್ದಾರೆ. ಸಂಕಲನವನ್ನು ದೀಕ್ಷಿತ್ ಮತ್ತು ಪೋಸ್ಟರ್ ಡಿಸೈನ್ ನ್ನು ಚರಣ್ ಅನಂತಾಡಿ ಮಾಡಿದ್ದು, ಮಿತುನ್ ರಾಜ್ ವಿದ್ಯಾಪುರ ಕಿರುಚಿತ್ರಕ್ಕೆ ಅಧ್ಬುತ ಸಂಗೀತ ಸಂಯೋಜಿಸಿದ್ದಾರೆ. ಮತ್ತು ಈ ಕಿರುಚಿತ್ರಕ್ಕೆ ರಮೇಶ್ ಪೂಜಾರಿ ಮುಜಲ,ಹರೀಶ್ ಪೂಜಾರಿ ಬಾಕಿಲ ಮತ್ತು ಶಿವರಾಜ್ ಪಿ.ಆರ್ ರವರು ನಿರ್ಮಾಪಕರಾಗಿದ್ದಾರೆ.
ತುಳುಚಿತ್ರರಂಗ ಹಾಗೂ ಕನ್ನಡ ಸಿನಿಮಾರಂಗದಿಂದಲೂ “ಆತ್ಮವಂದನಾ” ಕಿರುಚಿತ್ರಕ್ಕೆ ಎಲ್ಲೆಡೆಯಿಂದ ಭಾರಿ ಪ್ರಶಂಸೆ ಸಿಕ್ಕಿದೆ. ಆಗೋಸ್ಟ್ 22 ರಂದು ಯೂಟ್ಯೂಬ್ ನಲ್ಲಿ ಬಿಡುಗಡೆಗೊಳ್ಳಲಿದೆ.