ಕರಾವಳಿ ಭಾಗ ಪ್ರತಿಭೆಗಳ ತವರುರೂ ಎನಿಸಿಕೊಂಡಿರುವುದು ಎರಡು ಮಾತಿಲ್ಲ ಸಿನಿಮಾ, ಕ್ರಿಡೆ, ನೃತ್ಯ, ಸಿನಿಮಾ ಡ್ಯಾನ್ಸ್, ರಾಜಕೀಯ ಹಾಗೂ ದೇಶ ವಿದೇಶದಲ್ಲೂ ಕರಾವಳಿಗರ ಹೆಸರೆ ಕೇಳಿಬರುವುದು. ಹಾಗೆಯೆ ಕರ್ನಾಟಕದಾದ್ಯಂತ ಮನೆಮಾತಗಿದ್ದ “ಎಕ್ಸ್ ಪ್ರೆಶನ್ ಕ್ವೀನ್” ಅನ್ವಿಷಾ ಪೂಜಾರಿ ನಮ್ಮ ಬಿಲ್ಲವ ಸಮಾಜದ ಹೆಮ್ಮೆಯ ಪ್ರತಿಭೆ.ಕಠಿಣವಾದ ಪರಿಶ್ರಮ, ಶ್ರದ್ದೆಯಿಂದ ಮಾತ್ರ ಯಾವುದೆ ಒಂದು ಸಾಧನೆ ಮಾಡಲು ಸಾಧ್ಯ, ಹಾಗೂ ಪ್ರತಿಭೆಗೆ ಇರುವ ಮನೆಯ ವಾತವರಣವು ಅಗತ್ಯವಾಗಿರುತ್ತದೆ. ವಾಮಂಜೂರು ನಿವಾಸಿ ಅನಿಲ್ ಕುಮಾರ್ ಮತ್ತು ಅನುಷಾ ದಂಪತಿಗಳ ಪುತ್ರಿ. ಅನ್ವಿಷಾ ಪೂಜಾರಿ ವಾಮಂಜೂರ್ ಇವರಿಗೂ ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ಮನೆಯವರ ಪ್ರೋತ್ಸಾಹದಿಂದ ಈ ಮಟ್ಟಕ್ಕೆ ಏರಿದ್ಡಾರೆ.
ನೃತ್ಯ, ಯಕ್ಷಗಾನ, ಭರತನಾಟ್ಯ, ಸಿನಿಮಾ ಡ್ಯಾನ್ಸ್, ಯೋಗ, ರಂಗೋಲಿ, ಕೀ ಭೊರ್ಡ್ ಅಭ್ಯಾಸ ಮಾಡಿ ಸುಮಾರು 200 ಕ್ಕೂ ಹೆಚ್ಚು ಶೋ ಹಾಗೂ ಸ್ಪರ್ದೆಗಳಿಗೆ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿದ್ದಾರೆ.‘ಉಡುಪಿ ಕಿಡ್ಸ್ ಟ್ಯಾಲೆಂಟ್, ದೈಜಿ ವರ್ಲ್ಡ್ ಮಾಧ್ಯಮ ನಡೆಸಿದ “ಜೂನಿಯರ್ ಮಸ್ತಿ ಸೀಸನ್ 2″ ರಿಯಾಲಿಟಿ ಶೋ ಗೆ ಆಯ್ಕೆ, ಮಂಗಳೂರಿನ ಫಾರಂ ಪಿಜ್ಜಾ ಮಾಲ್ ಏರ್ಪಡಿಸಿದ ‘ಮಾಡೆಲ್ಲಿಂಗ್ ಮ್ಯಾಕ್ಸ್ ಮಾಡೆಲ್ಲಿಂಗ್ ” ನಲ್ಲಿ ‘ಮ್ಯಾಕ್ಸ್ ಮಂಗಳೂರು ಸೂಪರ್ ಕಿಡ್ಸ್’ ಟ್ರೋಫಿಯನ್ನು ಹಾಗೂ ‘Mangalore Little Princess’ ಟ್ರೋಫಿ ಗಳಿಸಿದ್ದಾರೆ.
ಇವರು ಜ಼ಿ ಕನ್ನಡದ ಆಯೊಜಿಸಿದ್ದ ಡ್ಯಾನ್ಸ್ ಕರ್ನಾಟಕ ಹಾಗೂ ಡ್ರಾಮ ಜೂನಿಯರ್ ನಲ್ಲಿ ಭಾಗವಹಿಸಿ, ಕರ್ನಾಟಕದ ಮನೆ ಮಾತಾಗಿರುವ ಅನ್ವಿಷಾ, ಡ್ಯಾನ್ಸ್ ಕರ್ನಾಟಕದಲ್ಲಿ “ಎಕ್ಸ್ ಪ್ರೆಶನ್ ಕ್ವೀನ್” ಎಂದೇ ಖ್ಯಾತಿ ಪಡೆದ್ದಿದಾರೆ. ಡ್ಯಾನ್ಸ್ ಕರ್ನಾಟಕದಲ್ಲಿ ಖ್ಯಾತ ನೃತ್ಯ ಸಂಯೋಜಕರಾದ ಶಶಿ ಮಾಸ್ಟರ್ ಮತ್ತು ರಾಹುಲ್ ಇವರಿಂದ ತರಬೇತಿಯನ್ನು ಪಡೆದ್ದಿದ್ದಾರೆ.ಹಾಗೂ ತುಳು ಸಿನಿಮಾಗಳಾದ ಜಬರ್ದಾಸ್ತ್ ಶಂಕರ, ಪೆಪ್ಪೆರೆ ಪೆರೆರೆರೆ, ಚಿತ್ರರಂಗದ ಖ್ಯಾತ ನಟರಾದ ನವೀನ್ ಡಿ ಪಡಿಲ್ ಜೊತೆಗೆ ನಟಿಸುವ ಮೂಲಕ ತುಳು ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ.
ಅನ್ವಿಷಾ ಮಂಗಳೂರಿನ ಶುಭೋದಯ ವಿದ್ಯಾಲಯ, ಮೂಡುಶೆಡ್ಡೆಯಲ್ಲಿ ೫ ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೇವಲ ತನ್ನ ಪ್ರತಿಭೆಯ ಜತೆಗೆ ವಿದ್ಯಾಭ್ಯಾಸದಲ್ಲೂ ಭೇಶ್ ಎನಿಸಿಕೊಂಡಿದ್ದಾರೆ.
ಇವರಿಗೆ ಕರ್ನಾಟಕ ಸರ್ಕಾರದ ”ಜಿಲ್ಲಾ ಅಸಾಧಾರಣ ಪ್ರತಿಭೆ”, ಕರ್ನಾಟಕ ಕಲಾಶ್ರಿ, ತುಳುನಾಡ ರಕ್ಷಣಾ ವೇದಿಕೆಯಿಂದ ತೌಳವ ಕುಮಾರಿ, ಜೆ ಸಿ ಮಡಾಂತ್ಯಾರ್ ಸಾಧನಶ್ರಿ ಸೇವ ಪುರಸ್ಕಾರ್, ಕರ್ನಾಟಕ ಪ್ರತಿಭ ರತ್ನ, ವೀರಕೇಸರಿ ಬೆಳ್ತಂಗಡಿ ವತಿಯಿಂದ ಕಲಾ ಸೇವಾರತ್ನ ಪುರಸ್ಕಾರ. ಮುಂತಾದ ಹಲವು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಅನ್ವಿಷಾ ಪೂಜಾರಿ ವಾಮಂಜೂರು ಹೀಗೆ ತನ್ನ ಸಾಧನೆಯನ್ನು ಮುಂದುವರಿಸುತ್ತಾ ದೇಶ ವಿದೇಶದಲ್ಲೂ ಹೆಸರು ಗಿಟ್ಟಿಸಿಕೊಳ್ಳಲಿ, ಹಾಗೂ ನಮ್ಮ ತುಳುನಾಡಿನ ಹಾಗು ಬಿಲ್ಲವ ಸಮಾಜದ ಹೆಮ್ಮೆಯಾಗಲಿ.
ಬರಹ: ಪುಷ್ಪರಾಜ್ ಪೂಜಾರಿ