ನವಚೇತನ ಸೇವಾ ಬಳಗ (ರಿ ) ತೋಡಾರು ವತಿಯಿಂದ 20 ನೇ ಸೇವಾ ಯೋಜನೆ
ಬಡವರ ಸೇವೆಯೇ ದೇವರ ಸೇವೆ
ಬಜಪೆಯ ಜೋಕಟ್ಟೆ ನಿವಾಸಿ ಚೇತನ್ ಇವರು ಜೋಕಟ್ಟೆ ರೈಲ್ವೆ ಟ್ರ್ಯಾಕ್ ನಲ್ಲಿ ಸಿಲುಕಿಕೊಂಡಿದ್ದ ಆಡು ಮರಿಯನ್ನು ರಕ್ಷಣೆಮಾಡಲು ಹೋಗಿ ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇವರಿಗೆ ನಮ್ಮ ತಂಡದವತಿಯಿಂದ ಭವತಿ ಭಿಕ್ಷಾಂ ದೇಹಿ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರ ನೆರವಿನಿಂದ ಸಂಗ್ರಹವಾದ ಹಣವನ್ನು ಇಂದುಚೇತನ್ ಇವರ ಮನೆಗೆ ತೆರಳಿ ಅವರ ಚಿಕ್ಕಮನ ಕೈಗೆ ಹಸ್ತಾಂತರ ಮಾಡಲಾಯಿತು ಹಾಗೂ ತಂಡ ಓರ್ವ ಸದಸ್ಯರಾದ ನವೀನ್ ಡಿಕೋಸ್ತ ಕಿನ್ನಿಗೋಳಿ ಇವರ ಮಗಳ ಹುಟ್ಟುಹಬ್ಬದ ಪ್ರಯುಕ್ತ ಚೇತನ್ ಇವರ ಚಿಕಿತ್ಸೆಗಾಗಿ ಅವರು ನೀಡಿದ 14,000/- ರೂ ಯನ್ನುಸಹ ಈ ಸಂದರ್ಭದಲ್ಲಿ ನೀಡಲಾಯಿತು ಒಟ್ಟು 38,000/- ರೂ ಯನ್ನು ಇವರ ಕೈಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿನಮ್ಮ ತಂಡದ ಉಪಾಧ್ಯಕ್ಷರಾದ ಸಂತೋಷ್ ಪೂಜಾರಿ ಹೊಕ್ಕಾಡಿಗೋಳಿ, ಪ್ರಧಾನ ಕಾರ್ಯದರ್ಶಿಯಾದ ರಕ್ಷಿತ್ ಬಂಗೇರಅಂಡಿಂಜೆ,ಜೊತೆ ಕಾರ್ಯದರ್ಶಿಯಾದ ಅಮಿತ್ ಕೋಟ್ಯಾನ್ ತೋಡಾರು, ಸದ್ಯಸರಾದ ದಿನಕರ್ ಪೂಜಾರಿ ಮಿಜಾರ್ಉಪಸ್ಥಿತರಿದ್ದರು.