‘ಶೂದ್ರಶಿವ’ ಶೀರ್ಷಿಕೆ ಅನಾವರಣ
ರುದ್ರ ಥಿಯೇಟರ್ ಮಂಗಳೂರು ಅವರ ಹೊಸ ಪಯಣ, ರಂಗಕರ್ಮಿ ವಿದ್ದು ಉಚ್ಚಿಲ್ ರಂಗ ನಿದೇರ್ಶನದಲ್ಲಿ ಕುದ್ರೋಳಿ ಶ್ರೀಗೋಕರ್ಣನಾಥ ದೇವಳದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ, ತತ್ವಗಳು ಮತ್ತವರ ಬದುಕಿನ ಕುರಿತು ನಾಟಕ ‘ಶೂದ್ರಶಿವ’ ಶೀರ್ಷಿಕೆಯನ್ನು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರದಿವ್ಯಹಸ್ತದಲ್ಲಿ ಅನಾವರಣಗೊಂಡಿತು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಈಗಾಗಲೇ ರಂಗಭೂಮಿಯ ನುರಿತ 21 ಕಲಾವಿದರು ಮತ್ತು ತಂತ್ರಜ್ಞರನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂದರ್ಶನದ ಮೂಲಕ ಆಯ್ಕೆ ಮಾಡಿ ತಂಡ ಕಟ್ಟಲಾಗಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್ ಮಾರ್ಗದರ್ಶನದಲ್ಲಿ, ವಿದ್ದು ಉಚ್ಚಿಲ್ ಅವರ ಸಂಪೂರ್ಣರಂಗನಿರ್ದೇಶನದಲ್ಲಿ 40 ದಿನಗಳ ರಂಗ ತರಬೇತಿ ಬಳಿಕ ತಿರುಗಾಟ ಆರಂಭಗೊಳ್ಳಲಿದೆ….