ಬಂಗಾರಪ್ಪಾಜಿಯವರ ಸ್ಮರಣೋತ್ಸವದ ಅಂಗವಾಗಿ ಈ ಲೇಖನ.
ಎಸ್, ಬಂಗಾರಪ್ಪ ಅಂದರೆ ಸಾರೆಕೊಪ್ಪ ಬಂಗಾರಪ್ಪ ಅಂತ ಅರ್ಥ. ಸಾರೆಕೊಪ್ಪ ಎಂಬುದು ಅಂಚೆ ವಿಳಾಸ.
ಇವರ ಹುಟ್ಟೂರು ಶಿವಮೊಗ್ಗ* ಜಿಲ್ಲೆಯ *ಸೊರಬ* ತಾಲೂಕಿನ *ಕುಬಟೂರು* ಎಂಭ ಕುಗ್ರಾಮ. ಇವರ ತಂದೆಯ ಹೆದರು *ಕಲ್ಲಪ್ಪ.* ಮತ್ತು ತಾಯಿಯ ಹೆಸರು *ಕಲ್ಲಮ್ಮ* ಎಂದು. ಇವರಿಗೆ ಈ ಹೆಸರು ಬರಲು ಕಾರಣ *ಕಾರವಾರ* ಜಿಲ್ಲೆಯ *ಶಿರ್ಶಿ* ತಾಲೂಕಿನ *ಕದಂಭರು* ಆಳಿದ *ಬನವಾಸಿಯ* ಹತ್ತಿರ ಕೇವಲ ಮೂರು ಕಿ.ಮೀ. ದಲ್ಲಿ *ಗುಡ್ನಾಪುರ* ಎಂಬ ಹಳ್ಳಿ ಇದೆ. ಈ ಹಳ್ಳಿಯ ಪಕ್ಕದಲ್ಲಿ *ದೊಡ್ಡದಾದ ಕೆರೆಯೊಂದಿದೆ* ಸದಾ ವರ್ಷವಿಡೀ ನೀರಿನಿಂದ ತುಂಬಿರುವ ಈ ಕೆರೆಯ ಮಧ್ಯಭಾಗದಲ್ಲಿ *ಬಂಗಾರೇಶ್ವರ ದೇವಾಲಯವಿದೆ.* ಅಲ್ಲಿ *ಶಿವನ* ಅವತಾರ *ಬಂಗಾರೇಶ್ವರ* ನೆಲೆಸಿದ್ದಾನೆ.
*ಕಲ್ಲಪ್ಪ* ಮತ್ತು *ಕಲ್ಲಮ್ಮ* ದಂಪತಿಗಳಿಗೆ ಬಹಳ ದಿನವಾದರೂ ಗಂಡು ಸಂತಾನವಾಗುವುದಿಲ್ಲ ಆಗ ಮನೆದೇವರು *ಹುಚ್ಚುರಾಯೇಶ್ವರ ಸ್ವಾಮಿ {ಆಂಜನೇಯ ಸ್ವಾಮಿ}* ನೆನೆಯುತ್ತಾ ಈ ಬಂಗಾರೇಶ್ವರ ದೇವರಿಗೆ ಹರಕೆ ಹೊತ್ತರಂತೆ ಗಂಡು ಮಗು ಜನಿಸಿದರೆ ನಿನ್ನ ಹೆಸರೇ ನಾಮಕರಣ ಮಾಡುತ್ತೇವೆ ಅಂತ.ಆ ನಂತರದಲ್ಲಿ ಕಲ್ಲಮ್ಮನವರು ನವಮಾಸ ತುಂಬಿ ಮಗುವಿಗೆ ಜನ್ಮ ನೀಡಿದಾಗ ಗಂಡಯ ಮಗು ಆಗಿತ್ತಂತೆ ಹರಕೆಯ ಪ್ರಕಾರ ಆ ಗಂಡು ಮಗುವಿಗೆ *ಬಂಗಾರೇಶ್ವರನ* ಆಶಿರ್ವಾದದಿಂದ ಜನಿಸಿದ್ದಕ್ಕೆ *ಬಂಗಾರಪ್ಪ* ಎಂದು ನಾಮಕರಣ ಮಾಡಿದರಂತೆ. ಇವರೇ ನಾಡುಕಂಡ ಧೀಮಂತ ವ್ಯಕ್ತಿ , ಬಡವರ ಬಂಧು *ಈಡಿಗ ಸಮುದಾಯದ ಆಶಾಕಿರಣ ಬಂಗಾರಪ್ಪನವರು.*
ಅದೇ ರೀತಿಯಾಗಿ *ಬಂಗಾರಪ್ಪನವರ* ಸಹೋದರಿಯರು *ದೊಡ್ಡ ಕೆರಿಯಮ್ಮ* ಮತ್ತು *ಸಣ್ಣ ಕೆರಿಯಮ್ಮ* ಎಂದು. *ಬಂಗಾರೇಶ್ವರ* ದೇವಾಲಯದ ಪಕ್ಕ ಇರುವ *ಗುಡ್ನಾಪುರ* ಎಂಬ ಕುಗ್ರಾಮದ ಪಕ್ಕ ಕೆರೆ ಇದೆಯಲ್ಲ, ಅಲ್ಲಿ *ಬಂಗಾರೇಶ್ವರ ಸ್ವಾಮಿಯ ಜೊತೆಗೆ ಶಕ್ತಿಸ್ವರೂಪಿಣಿ ಆದಿಶಕ್ತಿ ಅಮ್ಮನಾಗಿ ಕೆರೆಯಲ್ಲಿರುವುದರಿಂದ ಕೆರೆಯಮ್ಮಳಾಗಿ ದರ್ಶನ ಕೊಡುತ್ತಿದ್ದಾಳೆ.*
ಆದ್ದರಿಂದ *ಬಂಗಾರಪ್ಪನವರ* ತಂದೆ ತಾಯಿ ತಮ್ಮ ಹೆಣ್ಣಮಕ್ಕಳಿಗೆ *ದೊಡ್ಡ ಕೆರೆಯಮ್ಮ,,, ಸಣ್ಣ ಕೆರೆಯಮ್ಮ* ಎಂದು ನಾಮಕರಣ ಮಾಡಿದ್ದಾರೆ.
ಬಂಗಾರಪ್ಪನವರು ಈಡಿಗ ಜಾತಿಗೆ ಸೇರಿದವರು. ಈಡಿಗ ಜಾತಿಯ ಉಪಜಾತಿಯಾದ ದೀವರು ಸಮುದಾಯಕ್ಕೆ ಸೇರಿದವರು.ಇವರ ಧರ್ಮ ಪತ್ನಿಯ ಹೆಸರು *ಶಕುಂತಲ. ಇವರದು ಕಾರವಾರ ಜಿಲ್ಲೆಯ ಶಿರ್ಶಿ ತಾಲೂಕಿನ ಮಳಲಗಾಂವ್ಎಂಬ ಹಳ್ಳಿ.ಇವರದು ಸಹಿತ ಈಡಿಗ ಸಮುದಾಯದ ಉಪಜಾತಿ ನಾಯ್ಕ ಕುಟುಂಬದವರು.
ಬಂಗಾರಪ್ಪನವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
ಇವರ ಒಬ್ಬ ಪುತ್ರಿಯನ್ನು ಇದೇ ಸಮುದಾಯದ ಕನ್ನಡದ ಮುತ್ತು ಪದ್ಮಬೂಷಣ ಡಾ ! ರಾಜಕುಮಾರ ಅವರ ಪುತ್ರ ಶಿವರಾಜಕುಮಾರ ಮದುವೆಯಾಗಿದ್ದಾರೆ.
ಇನ್ನೋರ್ವ ಪುತ್ರಿ ಹೆಸರಾಂತ ದಿನಪತ್ರಿಕೆ ಪ್ರಜಾವಾಣಿಯ ಮಾಲಾಕರನ್ನು ಮಡದಿಯಾಗಿದ್ದಾರೆ.
ಬಂಗಾರಪ್ಪನವರು ತಮ್ಮ ರಾಜಕೀಯ ಅಕಾಂಕ್ಷೆಗೆ ಕಲಾವಿದರನ್ನು ಎಂದೂ ಬಳಸಿಕೊಳ್ಳಲಿಲ್ಲ. *ಡಾ ! ರಾಜ್* ಅವರನ್ನು ಒಂದು ದಿನವೂ ತಮ್ಮ ರಾಜಕೀಯ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಲಿಲ್ಲ.
ಮಿರಿ ಮಿರಿ ಮಿಂಚುವ ಶರ್ಟ್ ಬಿಳಿ ಪ್ಯಾಂಟ್ ಬಿಳಿ ಚಪ್ಪಲಿ ಅಥವಾ ಶೂ, ಕಣ್ಣಿಗೆ ಕೂಲಿಂಗ್ ಕನ್ನಡಕ, ಕೈಯಲ್ಲಿ ಕನ್ನಡಕ ಇಡುವ ಬಾಕ್ಸ್ ಇದು *ಬಂಗಾರಪ್ಪನವರ* ಸಾರ್ವಜನಿಕ ವಸ್ತ್ರ ಸಂಹಿತೆ. ವೇದಿಕೆ ಮೇಲಿರುವಾಗಲಂತೂ ದೂರದಲ್ಲಿ ನಿಂತು ನೋಡುವವರಿಗೆ ಗುರುತು ಹಿಡಿಯಲು *ಮಿಂಚು ಅಚ್ಚಕೆಂಪು, ತಿಳಿನೀಲಿ, ಅಚ್ಚನೀಲಿ,ಶರ್ಟ್ ದರಿಸುತ್ತಿದ್ದರು.
ಬಂಗಾರಪ್ಪನವರನ್ನು ಈ ದಿನ ಮನದಲ್ಲಿ ಸ್ಮರಿಸಿಕೊಳ್ಳುತ್ತಾ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಹಾರೈಸೋಣ.
ವಿಷಯ ಸಂಗ್ರಹ : ಆಂಜನೇಯ.ಟಿ.{ ಈಡಿಗ }
ಅಗಡಿ ಹಾವೇರಿ
9113604162