ಉಡುಪಿ : ನಾರಾಯಣಗುರು ಅರ್ಬನ್ ಕೋ–ಆಪರೇಟಿವ್ ಬ್ಯಾಂಕ್ ಲಿ, ಉಡುಪಿ, ಇದರ 2021 – 2022 ನೇ ಸಾಲಿನ 20ನೇಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ಸೆಪ್ಟೆಂಬರ್ 11, ಭಾನುವಾರ ಬಿಲ್ಲವರ ಸೇವಾ ಸಂಘ (ರಿ), ಬನ್ನಂಜೆ ಉಡುಪಿ ಇದರಶಿವಗಿರಿ ಸಭಾಂಗಣದಲ್ಲಿ ಅಧ್ಯಕ್ಷರಾದ ಹರಿಶ್ಚಂದ್ರ ಅಮೀನ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ವಾರ್ಷಿಕ ಸಾಮಾನ್ಯ ಸಭೆಯನ್ನು ಬ್ಯಾಂಕಿನ ಮಾರ್ಗದರ್ಶಕರಾದ ಎಸ್ ಕೆ ಸಾಲ್ಯಾನ್ ,ರಾಮಚಂದ್ರ ಕಿದಿಯೂರು ಮತ್ತು ಸೂರ್ಯಪ್ರಕಾಶ್ ಜಂಟಿಯಾಗಿ ಉದ್ಘಾಟಿಸಿ ಶುಭ ಹಾರೈಸಿದರು. ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ ಹರಿಶ್ಚಂದ್ರ ಅಮೀನ್ ಅವರು ಸರ್ವಸದಸ್ಯರುಗಳನ್ನು ಸ್ವಾಗತಿಸಿ ನಮ್ಮ ಬ್ಯಾಂಕ್ಭಾರತೀಯ ರಿಸರ್ವ್ ಬ್ಯಾಂಕಿನ ಮಾನ್ಯತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ನಮ್ಮ ಬ್ಯಾಂಕ್ ಅಧುನಿಕ ಸೌಲಭ್ಯಗಳಾದ ಕೋರ್ಬ್ಯಾಂಕಿಂಗ್ ,ಆರ್ ಟಿ ಜಿ ಎಸ್ / ನೆಪ್ಟ್ , ಸಿ ಟಿ ಎಸ್ ಚೆಕ್ ಕ್ಲಿಯರಿಂಗ್, ಸೇಫ್ ಲಾಕರ್ ಸೌಲಭ್ಯಗಳನ್ನು ಒಳಗೊಂಡಿದೆ . ಗ್ರಾಹಕರಐದು ಲಕ್ಷದವರೆಗಿನ ಠೇವಣಿಗಳಿಗೆ ಡಿ ಐ ಸಿ ಜಿ ಸಿ. ವಿಮಾ ಸೌಲಭ್ಯವನ್ನು ಹೊಂದಿದೆ . ಸ್ವಸಹಾಯ ಗುಂಪಿನ ಸದಸ್ಯರಿಗೆ ಅತ್ಯಂತಕಡಿಮೆ ಬಡ್ಡಿಯ ಸಾಲವನ್ನು ನೀಡುತ್ತಿದ್ದು ಚಿನ್ನಾಭರಣ ಈಡಿನ ಸಾಲ, ಗೃಹ ನಿರ್ಮಾಣ ಸಾಲ, ಅಡಮಾನ ಸಾಲ , ಭದ್ರತಾ ಸಾಲ , ವೈಯಕ್ತಿಕ ಸಾಲ , ವಾಹನ ಸಾಲ ವೇತನಾಧಾರಿತ ಸಾಲ ಹಾಗೂ ವ್ಯಾಪಾರ ಅಭಿವೃದ್ಧಿ ಸಾಲಗಳನ್ನು ವಾಣಿಜ್ಯ ಬ್ಯಾಂಕಿನ ಬಡ್ಡಿ ದರಕ್ಕೆಸ್ಪರ್ಧಾತ್ಮಕವಾಗಿ ನೀಡಲಾಗುತ್ತದೆ .ಗ್ರಾಹಕರ ಠೇವಣಿಗೆ ಅತ್ಯಧಿಕ ಬಡ್ಡಿಯನ್ನು ನೀಡುತ್ತಿದ್ದು ಹಿರಿಯ ನಾಗರಿಕರಿಗೆ 0.5% ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಗ್ರಾಹಕರ ಹಾಗೂ ಆಡಳಿತ ಮಂಡಳಿಯ ಸಹಕಾರ ಸಿಬ್ಬಂದಿಗಳ ನಗುಮೊಗದ ಸೇವೆ ಸದಸ್ಯರಪ್ರೋತ್ಸಾಹದಿಂದ ನಮ್ಮ ಬ್ಯಾಂಕ್ ಉತ್ತಮ ಲಾಭವನ್ನು ಕಾಣುವಂತಾಗಿದೆ ಎಂದರು.
ಉಪಾಧ್ಯಕ್ಷರಾದ ವಿಜಯಾ ಜಿ ಬಂಗೇರ ಪ್ರಾಸ್ತಾವಿಕದ ಮೂಲಕ ವೇದಿಕೆಗೆ ಬರಮಾಡಿಕೊಂಡರು. ನಿರ್ದೇಶಕರಾದ ಕೆ. ಜಯಕುಮಾರ್, ಪ್ರಭಾಕರ ಬಂಗೇರ ಬಿ.ಬಿ. ಪೂಜಾರಿ, ನವೀನ್ ಅಮೀನ್, ಆನಂದ ಜತ್ತನ್ನ, ಡಿ.ಆರ್ ರಾಜು, ಶೇಕರ ಬಿ ಪೂಜಾರಿ, ರಮೇಶ್ ಕೆ ಕೋಟ್ಯಾನ್ ,ಅಶೋಕ್ ಕುಮಾರ್ ,ಅರಣ್ ಜತ್ತನ್ನ ವೃತ್ತಿಪರ ನಿರ್ದೇಶಕರಾದ ಬಾಸ್ಕರ ಪೂಜಾರಿ ಹಾಗೂ ಕೃಷ್ಣಬಿಲ್ಲವ ಸಭೆಯಲ್ಲಿ ಉಪಸ್ಥಿತರಿದ್ದರು.
ಸದಸ್ಯರಾದ ಗುರದತ್ ಅಮೀನ್ , ಕಟಪಾಡಿ ಶಂಕರ್ ಪೂಜಾರಿ, ರಮೇಶ್ ಬಂಗೇರ ,ಶೇಖರ್ ಕೋಟ್ಯಾನ್ ಮತ್ತು ಸುಲೋಚನಾದಾಮೋದರ್ ಇವರು ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿ ಬ್ಯಾಂಕನ್ನು ಲಾಭದತ್ತ ಮುನ್ನಡೆಸಿದ ಆಡಳಿತಮಂಡಳಿಯನ್ನು ಅಭಿನಂದಿಸಿದರು.
ಬ್ಯಾಂಕಿನ ನಿರ್ದೇಶಕರಾದ ಶಕುಂತಲ ಶ್ರೀನಿವಾಸ್ ಪ್ರಾರ್ಥಿಸಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಶನ್ ಫೌಸ್ಟಿನ್ಆಲ್ವರವರು ಬ್ಯಾಂಕಿನ 19ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ವರದಿಯನ್ನು ವಾಚಿಸಿದರು. ನಿರ್ದೇಶಕ ಶಿವಾಜಿ ಸುವರ್ಣಅವರು ಧನ್ಯವಾದವಿತ್ತರು.