TOP STORIES:

FOLLOW US

ನಾರಾಯಣ ಗುರು ಸ್ತಬ್ಧ ಚಿತ್ರದ ನಿರಾಕರಣೆ: ಬಿಲ್ಲವ ಸಂಘ (ರಿ.) ಉರ್ವ- ಅಶೋಕನಗರ ಜಿಲ್ಲಾಧಿಕಾರಿಗೆ ಮನವಿ


ಬಿಲ್ಲವ ಸಂಘ (ರಿ.) ಉರ್ವ- ಅಶೋಕನಗರ ರಿಂದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ನಾರಾಯಣಗುರುಗಳ ಸ್ತಬ್ಧ ಚಿತ್ರದ ನಿರಾಕರಣೆಯ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗೆ ಮನವಿ ನೀಡಿದರು.

ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಮಹಾ ಸಂದೇಶವನ್ನು ವಿಶ್ವಕ್ಕೆ ಸಾರಿದ ವಿಶ್ವಮಾನದ, ಜಗದ್ಗುರು, ಬ್ರಹ್ಮಶ್ರೀ ನಾರಾಯಣಗುರು, ಕೇರಳದಲ್ಲಿ ಅಮಾನುವ ಸ್ಥಿತಿಯಲ್ಲಿ ಜನಸಾಮಾನ್ಯರು ಪ್ರಾಣಿ ಸದೃಶ್ಯ ಜೀವನವನ್ನು ನಡೆಸುತ್ತು, ಕಷ್ಟ ಸಂಕಷ್ಟಗಳಲ್ಲಿ ದಿಕ್ಕು ಕಾಣದೆ ತೊಳಲಾಡುತ್ತಿರುವಾಗ ಅವರ ಬಾಳಿಗೆ ದಾರಿ ದೀಪವಾದವರು ವಿದೇಶವುಳ್ಳ, ಸುಸಂಸ್ಕೃತ ಕೌಟುಂಬಿಕ ಹಿನ್ನೆಲೆಯುಳ್ಳ ಉತ್ತಮ ಸಮಾಜದ ನಿರ್ಮಾಣಕ್ಕೆ ಉತ್ತಮ ಆಗತ್ಯ ಎಂಬುದನ್ನು ಮನಗಂಡು ‘ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ’ ಎಂಬ ಸಂದೇಶವನ್ನು ಶಿಕ್ಷಣ ಲೋಕಕ್ಕೆ ಸಾರಿದ ನಾರಾಯಣ ಗುರುಗಳು ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದವರು.

ಸಕಲ ಮತಗಳ ಪರಮ ಉದ್ದೇಶವು ಒಂದೇ ಎನ್ನುವ ಸತ್ಯವನ್ನು ಅರಿತು, ಎಲ್ಲ ಧರ್ಮಗಳ ತಿರುಳು ಒಂದೇ ಸಾಧನೆಯ ಮಾರ್ಗಗಳು ಭಿನ್ನವಾದುವುಗಳನ್ನೇ, ಸರ್ವಧರ್ಮಗಳವರು ಅನ್ನೋನ್ಯವಾಗಿ ಸಹೋದರತ್ವದಿಂದ ಬಾಳಬೇಕೆ ಆಶಯವನ್ನು – ಮೊತ್ತವರು ಬ್ರಹ್ಮಶ್ರೀ ನಾರಾಯಣ ಗುರುಗಳು, ಇಂತಹ ಮಹಾನ್ ಯುಗಪುರುಷ ಮಂಗಳೂರಿನ ಕುದ್ರೋಳಿಯಲ್ಲಿ ಶ್ರೀ ಗೋಕರ್ಣನಾಥ ದೇವಾಲಯವನ್ನು ಸ್ಥಾಪಿಸಿ, ದೀನದಲಿತರಿಗೆ ದೇವರನ್ನು ಆರಾಧಿಸುವ ಭಾಗ್ಯವನ್ನು ಕರುಣಿಸಿದ ದೇವಪುರುಷ ಜನವರಿ 21, 2022ರಂದು ನವದೆಹಲಿಯಲ್ಲಿ ಜರಗುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇರಳ ರಾಜ್ಯ ಕಳುಹಿಸಿರುವ ಸ್ತಬ್ಧ ಚಿತ್ರದಲ್ಲಿ ಮಹಿಳೆಯರ ಸುರಕ್ಷತೆಯ ವಿಷಯದೊಂದಿಗೆ ಜಟಾಯು ಪಕ್ಷಿಯ ಪ್ರತಿಮೆ ಮತ್ತು ನಾರಾಯಣಗುರುಗಳ ಪ್ರತಿಮೆ ಒಳಗೊಂಡಿದ್ದು.

ಇದರಲ್ಲಿ ಮಹಾನ್ ಮರುಷ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ತಿರಸ್ಕರಿಸಿರುವುದು ವಿಷಾದನೀಯ. ಇದನ್ನು ಪುನರ್ ಪರಿಶೀಲಿಸಿ, ಸಂಬಂಧಪಟ್ಟ ಆಯ್ಕೆ ಸಮಿತಿಗೆ ಒತ್ತಡ ಹೇರಿ ಗಣರಾಜ್ಯೋತ್ಸವದಂದು ಬಹಶ್ರೀ ನಾರಾಯಗುರುಗಳ ಸಚಿತ್ರವನ್ನು ಪ್ರದರ್ಶಿಸಲು ಕೇಂದ್ರ ಸರಕಾರವು ಆದೇಶ ನೀಡುವಂತೆ ತಾವು ಪ್ರಯತ್ನಿಸಬೇಕೆಂದು ಈ ಮೂಲಕ ಮಾನ್ಯ ಜಿಲ್ಲಾಧಿಕಾರಿಗೆ ಮನವಿ ನೀಡಿದರು.


Share:

More Posts

Category

Send Us A Message

Related Posts

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »

ಉಜಿರೆ ಕನ್ಯಾಡಿ ಸರ್ಕಾರಿ ಶಾಲೆಗೆ 1.65 ಲಕ್ಷ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ


Share       ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಬೆಂಗಳೂರಿನ ಬಿಟ್ಸ್  & ಬೈಟ್ ಐಟಿ ಕಂಪನಿಯ ಶ್ರೀ ಪ್ರಕಾಶ್ ರಾವ್ ಇವರು ನೀಡಿದ ಒಂದು ಲಕ್ಷ ಅರವತ್ತೈದು ಸಾವಿರ


Read More »