ಮಹಾಗಣಪತಿ ಸೇವಾ ಟ್ರಸ್ಟ್
ಇತ್ತೀಚೆಗೆ ಶ್ರೀ ಕ್ಷೇತ್ರ ಶಿಬರೂರು ಕೊಡಮನಿತ್ತಯ ದೈವಸ್ಥಾನದ ಜಾತ್ರ ಮಹೋತ್ಸವದ ಸಂದರ್ಭ ಮಂಗಳೂರಿನ ಅಡ್ಯರ್ ಪದವಿನ ಅಂಬಿಕಾ ಸುರೇಶ್ ದಂಪತಿಯ ನಾಲ್ಕೂವರೆ ವರ್ಷದ ಮಗು ದರ್ಶನ್’ನ ಆರೋಗ್ಯದ ಸಮಸ್ಯೆ ರಕ್ತದ ಕ್ಯಾನ್ಸರ್ (ಬ್ಲಡ್ ಕ್ಯಾನ್ಸರ್)ನ ಚಿಕಿತ್ಸೆಗಾಗಿ ಸಂಗ್ರಹಿದ ಒಂದು ಲಕ್ಷ ಹದಿನೈದು ಸಾವಿರ 1,15,000/-ರೂಪಾಯಿಗಳನ್ನು ಇಂದು 10/01/2021 ಅಂಬಿಕಾರವರ ಅಡ್ಯರ್ ಪದವಿನ ಮನೆಯಲ್ಲಿ ಮಹಾಗಣಪತಿ ಸೇವಾ ಟ್ರಸ್ಟ್’ನ ವತಿಯಿಂದ ಮಗುವಿನ ತಾಯಿ ಅಂಬಿಕಾ’ರವರಿಗೆ ಹಸ್ತಾಂತರಿಸಲಾಯಿತು…
ಈ ಸಂದರ್ಭದಲ್ಲಿ ನಮ್ಮ ತಂಡದ ನಿರ್ವಾಹಕರು ಹಾಗೂ ಸದಸ್ಯರುಗಳಾದ… ಪ್ರದೀಪ್ ಪೂಜಾರಿ ತುಳುವೆ, ನರೇಶ್ ನಾಯಕ್, ನಿಕಿತಾ ಗಾಣಿಗ, ಸಂತೋಷ್ ಪೂಜಾರಿ, ಕುಮಾರಿ ಸ್ವಾತಿ, ಕುಮಾರಿ ದೀಪಾ, ಹಾಗೂ ಪ್ರಶಾಂತ್ ಪೂಜಾರಿ ಹಾಜಾರಿದ್ದರು.