ತುಪ್ಪ ಸೇವನೆಯಿಂದ ಬೊಜ್ಜು ಬರುತ್ತದೆ ಎಂದು ಅದನ್ನು ದೂರವಿಡದಿರಿ. ನಿಯಮಿತ ಪ್ರಮಾಣದಲ್ಲಿ ಅದನ್ನು ಸೇವಿಸುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ನಿತ್ಯ ತುಪ್ಪ ಸೇವಿಸುವುದರಿಂದ ದೇಹದ ಕಾಂತಿ ಹೆಚ್ಚುತ್ತದೆ. ನಿಮ್ಮ ಮುಖಕ್ಕೆ ವಿಶೇಷ ಹೊಳಪು ಸಿಗುತ್ತದೆ.
ಇದು ಜೀವಕೋಶಗಳ ಪೋಷಣೆ ಮಾಡಿ ತ್ವಚೆಯ ಒಣಗುವಿಕೆಯನ್ನು ನಿವಾರಿಸುತ್ತದೆ.
ತುಪ್ಪ ನಿಯಮಿತವಾಗಿ ಸೇವಿಸುವುದರಿಂದ ಸಂಧಿವಾತದ ನೋವು ಕಡಿಮೆಯಾಗುತ್ತದೆ. ಮಲಬದ್ಧತೆ ಹಾಗೂ ಪೈಲ್ಸ್ ನಂಥ ಸಮಸ್ಯೆಗಳು ದೂರವಾಗುತ್ತವೆ. ನೆನಪಿನ ಶಕ್ತಿ ಹೆಚ್ಚಲು ನೆರವಾಗುತ್ತದೆ.
ಕೂದಲು ಉದುರುವಿಕೆ ಕಡಿಮೆಯಾಗಿ ನಿಮ್ಮ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ. ಮಕ್ಕಳಿಗೆ ನಿತ್ಯ ಬಿಸಿ ಅನ್ನಕ್ಕೆ ಒಂದು ಚಮಚ ತುಪ್ಪ ಹಾಕಿ ಕೊಡುವುದರಿಂದ ಮಕ್ಕಳು ಆರೋಗ್ಯವಂತರಾಗಿ ಬೆಳೆಯುತ್ತಾರೆ ಮಾತ್ರವಲ್ಲ ಅವರ ಬುದ್ಧಿ ಶಕ್ತಿಯೂ ಚುರುಕಾಗುತ್ತದೆ.
ಡಯಟ್ ಮಾಡುವವರು ನಿತ್ಯ ಖಾಲಿ ಹೊಟ್ಟೆಗೆ ತುಪ್ಪ ಸೇವಿಸುತ್ತಾರೆ. ಇದರಿಂದ ದೇಹತೂಕವೂ ಕಡಿಮೆಯಾಗುತ್ತದೆ. ಕ್ಯಾನ್ಸರ್ ನಂಥ ಮಹಾಮಾರಿ ಬರದಂತೆಯೂ ಇದು ನೋಡಿಕೊಳ್ಳುತ್ತದೆ.