ಕೋವಿಡ್ -19 ಗೆ ಕಾರಣವಾಗುವ ಸಾರ್ಸ್-ಕೋವ್-2 ನ ಓಮಿಕ್ರಾನ್ ರೂಪಾಂತರ ಪತ್ತೆಯಾಗಿದ್ದು, ಆತಂಕ ಮೂಡಲು ಕಾರಣವಾಗಿದೆ. ಹೊಸದಾಗಿ ಪತ್ತೆಯಾದ ಕೊರೋನಾ ವೈರಸ್ ರೂಪಾಂತರದ ವಿರುದ್ಧ ಲಸಿಕೆ ಕಾರ್ಯ ನಿರ್ವಹಿಸುತ್ತದೆಯೇ ಅಥವಾ ಇಲ್ಲವೇ ಎಂಬುದು ಇದೀಗ ಹಲವರಲ್ಲಿ ಪ್ರಶ್ನೆ ಮೂಡಲು ಕಾರಣವಾಗಿದೆ.
ಹೆಚ್ಚಿನ ಜನರು ಕೋವಿಡ್-19 ಎರಡು ಡೋಸ್ ಲಸಿಕೆ ಪಡೆದಿದ್ದಾರೆ ಹಾಗೂ ಹಲವರಿಗೆ ಭಾಗಶಃ ಲಸಿಕೆ ನೀಡಲಾಗಿರುವುದರಿಂದ ಇದು ಕುತೂಹಲಕಾರಿ ಪ್ರಶ್ನೆಯಾಗಿದೆ.
ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು, ಸಾರ್ಸ್-ಕೋವ್-2 ವಿರುದ್ಧ ಲಸಿಕೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಮೊದಲು ನೋಡೋಣ. ಹೆಚ್ಚಿನ ಲಸಿಕೆಗಳು ವೈರಸ್‌ನ ಸ್ಪೈಕ್ ಪ್ರೋಟೀನ್ ಪ್ರದೇಶವನ್ನು ಗುರಿಯಾಗಿರಿಸಿಕೊಳ್ಳುತ್ತವೆ. ಇದು ಮಾನವ ಜೀವಕೋಶವನ್ನು ಪ್ರವೇಶಿಸಲು ಬಳಸುವ ಕೊರೋನ ವೈರಸ್ ನ ಭಾಗವಾಗಿದೆ.
ಸಾರ್ಸ್-ಕೋವ್-2 ನ ಸ್ಪೈಕ್ ಪ್ರೋಟೀನ್ ಅನ್ನು ಗುರುತಿಸಲು ಮತ್ತು ವೈರಸ್ ದೇಹವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಅದರ ಮೇಲೆ ದಾಳಿ ಮಾಡಲು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯನ್ನು ತರಬೇತಿ ಮಾಡುವ ಮೂಲಕ ಲಸಿಕೆಗಳು ಕಾರ್ಯನಿರ್ವಹಿಸುತ್ತವೆ.
ಓಮಿಕ್ರಾನ್ ರೂಪಾಂತರದಲ್ಲಿ ಕಂಡುಬರುವ ಅಂಶವೆಂದರೆ ಅದರ ಸ್ಪೈಕ್ ಪ್ರೋಟೀನ್ 30ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ. ಸ್ಪೈಕ್ ಪ್ರೋಟೀನ್‌ನ ರಿಸೆಪ್ಟರ್-ಬೈಂಡಿಂಗ್ ಡೊಮೇನ್ ಅಥವಾ ಆರ್ ಬಿ ಡಿ ಎಂದು ಕರೆಯಲ್ಪಡುವ ಈ ಹತ್ತು ರೂಪಾಂತರಗಳು ಕಂಡು ಬರುತ್ತವೆ. ಆರ್ ಬಿ ಡಿ ಎಂಬುದು ಸ್ಪೈಕ್ ಪ್ರೋಟೀನ್‌ನ ಭಾಗವಾಗಿದ್ದು, ಅದು ಮಾನವ ಜೀವಕೋಶಕ್ಕೆ ಅಂಟಿಕೊಳ್ಳುತ್ತದೆ.
ಸ್ಪೈಕ್ ಪ್ರೊಟೀನ್‌ಗಳು ಕೊರೊನಾ ವೈರಸ್‌ನ ಏಕೈಕ ಭಾಗವಲ್ಲ. ಅದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಗುರುತಿಸುತ್ತದೆ ಮತ್ತು ಗುರಿಯಾಗಿಸಬಹುದು. ಹಿಂದಿನ ಸೋಂಕು ಅಥವಾ ವ್ಯಾಕ್ಸಿನೇಷನ್‌ಗೆ ಪ್ರತಿಯಾಗಿ ದೇಹದಲ್ಲಿ ಬೆಳೆಯುವ ಪ್ರತಿಕಾಯಗಳು ಮತ್ತು ಟಿ ಕೋಶಗಳು ನಿರ್ದಿಷ್ಟ ಕೋಶಗಳು ಮತ್ತು ರೋಗಕಾರಕಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅವು ಇನ್ನೂ ರೂಪಾಂತರಿತ ಸಾರ್ಸ್-ಕೋವ್-2 ವಿರುದ್ಧ ರಕ್ಷಣೆ ನೀಡುತ್ತವೆ.
ಇನ್ನು ದಕ್ಷಿಣ ಆಫ್ರಿಕಾದಲ್ಲಿ ಈಗ ಇರುವ ಪರಿಸ್ಥಿತಿ ನೋಡಿದ್ರೆ ಅದು ತೀವ್ರವಾಗಿದೆ ಎಂದೆನಿಸುವುದಿಲ್ಲ. ಯಾಕೆಂದ್ರೆ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಹೆಚ್ಚಿನ ಜನರು ಲಸಿಕೆ ಹಾಕಿಸಿಕೊಂಡಿಲ್ಲ ಎಂಬ ಬಗ್ಗೆ ತಿಳಿದು ಬಂದಿದೆ.
ಲಸಿಕೆ ಹಾಕಿದ ಇನ್ನೂ ಡೆಲ್ಟಾ ರೂಪಾಂತರದ ಸೋಂಕಿಗೆ ಒಳಗಾದ ಸಂದರ್ಭದಲ್ಲಿ, ಕೋವಿಡ್ -19 ರೋಗಿಗಳು ಸಾಯುವ ಸಾಧ್ಯತೆ ಒಂಬತ್ತು ಪಟ್ಟು ಕಡಿಮೆ ಎಂದು ವರದಿಯಾಗಿದೆ. ಲಸಿಕೆ ಹಾಕದವರಿಗೆ ಹೋಲಿಸಿದರೆ ಸಂಪೂರ್ಣವಾಗಿ ಲಸಿಕೆ ಪಡೆದ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆ ಮೂರು ಪಟ್ಟು ಕಡಿಮೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ನೀವು ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದರೆ ಹಾಗೂ ಡೆಲ್ಟಾ ಸೋಂಕಿಗೆ ಒಳಗಾಗಿ, ಚೇತರಿಸಿಕೊಂಡಿದ್ದರೆ ನಿಮ್ಮ ದೇಹದಲ್ಲಿ ಅತ್ಯಂತ ಪರಿಣಾಮಕಾರಿಯಾದ ಪ್ರತಿಕಾಯ ರೂಪುಗೊಂಡಿರುತ್ತದೆ ಎಂದು ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ವೈರಾಲಜಿ ಪ್ರೊಫೆಸರ್ ಡೇವಿಡ್ ಮ್ಯಾಥ್ಯೂಸ್ ತಿಳಿಸಿದ್ದಾರೆ.
ಆದರೆ, ಇನ್ನೂ ಕೂಡ ಲಸಿಕೆ ಹಾಕದವರಿಗೆ ಮಾತ್ರ ಇದು ಭಯಾನಕವಾಗಿ ಕಾಡಬಹುದು. ಯಾಕೆಂದರೆ ಅವರು ಒಮಿಕ್ರಾನ್ ರೂಪಾಂತರದ ವಿರುದ್ಧ ನೈಸರ್ಗಿಕ ಅಥವಾ ಲಸಿಕೆ ಹಾಕಿದ ಪ್ರತಿಕಾಯವನ್ನು ಹೊಂದಿಲ್ಲ. ಹಾಗಾಗಿ ಇದು ಹೆಚ್ಚು ಸಾಂಕ್ರಾಮಿಕ ಎಂದು ಹೇಳಲಾಗುತ್ತದೆ.
ಒಮಿಕ್ರಾನ್ ರೂಪಾಂತರವು ನಿರೀಕ್ಷಿಸಿದಂತೆ ವೇಗವಾಗಿ ಹರಡಿದರೆ, ಈ ವೈರಸ್ ಲಸಿಕೆ ಹಾಕದ ಜನರಿಗೆ ಸೋಂಕು ತಗುಲಲು ಕಾರಣವಾಗಬಹುದು ಮತ್ತು ಹಲವಾರು ಮಂದಿ ಆಸ್ಪತ್ರೆಯತ್ತ ಮುಖ ಮಾಡಲು ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
Source: Kannada Duniya