ಮಂಗಳೂರು: ಬಿ ಎಸ್ ಎನ್ ಡಿ ಪಿ ಸಂಘಟನೆ ವತಿಯಿಂದ 166 ನೇ ಜಯಂತ್ಯುತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಮಾಡಿದ ಶ್ರೇಷ್ಟ ಸಾಧನೆಗಾಗಿ ಕೊಡಮಾಡುವ ರಾಜ್ಯ ಮಟ್ಟದ ಪರಿವರ್ತನಾ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳು ವಿಶ್ವಮಾನ್ಯರು.ಅವರು ಜಾತಿ ಪದ್ದತಿಯನ್ನು ವಿರೋಧಿಸಿದವರು. ಸಂಘಟನೆ ಮೂಲಕ ಶಕ್ತಿ ಪಡೆದುಕೊಳ್ಳಿ ಎಂದು ಹೇಳಿ ಹಿಂದುಳಿದವರನ್ನು ಮೇಲೆತ್ತಲು ಶ್ರಮಿಸಿದವರು. ಅವರನ್ನು ಸಂಕುಚಿತ ಮನೋಭಾವದಿಂದ ನಾವು ಹೊರಬರಬೇಕಿದೆ.ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯಪೂಜಾರಿ ಅವರಲ್ಲಿ ಸಂಘಟನೆ ಮಾಡುವ ಶಕ್ತಿಯಿದೆ. ದೇಶದ ಒಳಿತಿಗಾಗಿ ಇವರ ಈ ಬಿರುವೆರ್ ಕುಡ್ಲ ನಿರಂತರವಾಗಿ ಸೇವೆ ಮಾಡುವಂತಾಗಲಿ ಎಂದರು.
ಗಣ್ಯರಿಂದ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯಪೂಜಾರಿ ಮತ್ತು ಪ್ರೊ. ಸಬಿನ ತಸ್ಲಿಮಾ ಅವರು ಪರಿವರ್ತನಾ ಶ್ರೀ ಪ್ರಶಸ್ತಿ ಪಡೆದರು.
ಬಿಜೆಪಿ ಅಧ್ಯಕ್ಷ ಸುದರ್ಶನ್ ಶುಭಕೋರಿದರು.ಪುರುಷೋತ್ತಮ್ ಚಿತ್ರಾಪುರ, ಜಿ.ಪಂ ಸದಸ್ಯೆ ಹಾಗೂ ರಾಜ್ಯ ಬಿ ಎಸ್ ಡಿ ಪಿ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ, ಗೀತಾಂಜಲಿ ಸುವರ್ಣ, ಡಾ.ಮಧುಬಾಲಾ,ಉದಯ ಪೂಜಾರಿ,ಶರತ್ ಚಂದ್ರ , ದ.ಕ ಜಿಲ್ಲಾ ಅಧ್ಯಕ್ಷ ಹೇಮಂತ್ ಪೂಜಾರಿ, ಚಿತ್ತರಂಜನ್ ಬೋಳಾರ್, ವಿ.ಸುದರ್ಶನ್, ಪದ್ಮರಾಜ್,ಕಾವೂರು ಚಂದ್ರಶೇಖರ್, ಶರತ್ ಚಂದ್ರ, ಪ್ರಕಾಶ್ ಕೋಟ್ಯಾನ್ ರಾಜ್ಯ ಉಪಾಧ್ಯಕ್ಷರು ಬಿ ಎಸ್ ಡಿ ಪಿ, ಮಹಿಳಾ ವಿಭಾಗದ ಪ್ರ.ಕಾ ಶೃತಿ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.