ಮಂಗಳೂರು ಮೂಲದ ಪ್ರತಿಭಾ ದಯಾ ಕುಕ್ಕಾಜೆ “ದಿ ಬ್ಯೂಟಿ ಬ್ಲೊಗ್” ಎಂಬ ಇನ್ ಸ್ಟಾ ಗ್ರಾಂ ಪೇಜ್ ನಲ್ಲಿ ಬಹು ಬೇಡಿಕೆಯ ಮೆಕಪ್ ಆರ್ಟಿಸ್ಟ್ ಆಗಿರುವ ಇವರು, ಕೆಲವು ದಿನಗಳ ಹಿಂದೆ ಕನ್ನಡ ಕೋಗಿಲೆ ಅಕೀಲಾ ಪಜಿಮಣ್ಣು ಹಾಗೂ ನಟಿ ಸಪ್ತ ಪವೂರ್ ಅವರಿಗೆ ವಾರಗಳ ಹಿಂದೇಷ್ಟೆ ಶಾರದ ದೇವಿಯ ವೇಷಧಾರಿಗಳಾಗಿ ಮೆಕಪ್ ಮಾಡಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಸುದ್ದಿ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಲಕ್ಷಗಟ್ಟಲೆ ಜನರಿಂದ ಮನ್ನಣೆ ಪಡೆದಿದೆ ಬಾರಿಯ ವಿಶೇಷ.
ಉತ್ಸಾಹೀ ಮೆಕಪ್ ಆರ್ಟಿಸ್ಟ್ ಆಗಿರುವ ಪ್ರತಿಭಾ ದಯಾ ಕುಕ್ಕಾಜೆ ಅವರು ದೇವಿಯ ವೇಷಧಾರಿ ಮಾಡಲು ಬೆಂಗಳೂರು ಮೂಲದ ಸೌಮ್ಯ ಆಯ್ಕೆ ಮಾಡಿ, ದೇವಿ ರೂಪದಲ್ಲಿ ಕಂಗೊಳಿಸುತ್ತಿರುವ ಈ ದೇವಿ ಅವತಾರದ ಈ ವೈಭವ ಎಲ್ಲರ ಕಣ್ಮನ ಸೆಳೆಯುತ್ತಿದೆ ಫೋಟೋ ಈಗ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್ ಆಗಿದೆ. ದೇವಿ ಅವತಾರದ ಈ ವೈಭವ ಎಲ್ಲರ ಕಣ್ಮನ ಸೆಳೆಯುತ್ತಿದೆ..!
ಖ್ಯಾತ ಫೋಟೊ ಜರ್ನಲಿಸ್ಟ್ ದಯಾ ಕುಕ್ಕಾಜೆ ಯವರ ದಯಾ ಕುಕ್ಕಾಜೆಯವರ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ಡಾರೆ.
ಮಾಡೆಲ್ ಸೌಮ್ಯ ಅವರೊಂದಿಗೆ ಮಾತನಾಡುತ್ತ ಈ ಅವಕಾಶವು ಅದ್ಭುತವಾಗಿದ್ದು, ಬಣ್ಣ, ಚಿತ್ರ ಎಲ್ಲವೂ ಕೂಡಾ ವಿಶೇಷವಾಗಿ ಮೂಡಿಬಂದಿದೆ ಎಂದು ಫೊಟೋಶೂಟ್ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನ ಪ್ರತಿಭಾ ದಯಾ ಕುಕ್ಕಾಜೆ ಅವರು ಖ್ಯಾತ ಫೋಟೊ ಜರ್ನಲಿಸ್ಟ್ ದಯಾ ಕುಕ್ಕಾಜೆ ಯವರ ಧರ್ಮ ಪತ್ನಿಯಾಗಿದ್ದಾರೆ. ಇವರು ಅನೇಕ ವರ್ಷ ಗಳಿಂದ ಮೆಕಪ್ ಆರ್ಟಿಸ್ಟ್ ಆಗಿ ವೃತ್ತಿಯಲ್ಲಿ ತೊಡಗಿದ್ದಾರೆ.