ನೆಟ್ಟಣಿಗೆ ,ಮುಳ್ಳೇರಿಯಾದ ರತ್ನಾಕರ್ , ನಿಶಾ ದಂಪತಿಗಳ ಮಕ್ಕಳಾದಂತಹಪ್ರತೀತಿ ಹಾಗೂ ಈಕೆಯ ಅಣ್ಣ ಪ್ರಥಮ್ ಇಬ್ಬರು ಕೂಡ ಬಹುಮುಖ ಪ್ರತಿಭೆಗಳಾಗಿದ್ದು ಕೊಂಡು ಹಲವಾರು ಸಂಘ-ಸಂಸ್ಧೆಗಳಲ್ಲಿ ತಮ್ಮಕಲಾ ಪ್ರತಿಭೆಯನ್ನು ಪ್ರದರ್ಶಿಸಿರುತ್ತಾರೆ.
ಹೆಸರು: ಪ್ರತೀತಿ ಪೂಜಾರಿ ನೆಟ್ಟಣಿಗೆ ಇವಳು ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಳ , ಇಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ..
ಮೊದಲೇ ಹೇಳಿದಂತೆ ಇವಳು ಬಹುಮುಖ ಪ್ರತಿಭೆಯಾಗಿದ್ದುಕೊಂಡು ತಮ್ಮ ಸಣ್ಣ ವಯಸ್ಸಿನಲ್ಲಿಯೇ ನೃತ್ಯ , ಭರತನಾಟ್ಯ , ಯಕ್ಷಗಾನ , ಸಂಗೀತ ದಲ್ಲಿ ಆಸಕ್ತಿ ವಹಿಸಿಕೊಂಡು ಹಲವಾರು ವೇದಿಕೆಯಲ್ಲಿ , ನೃತ್ಯ ಪ್ರದರ್ಶನ ಮಾಡಿದ್ದಾಳೆ.
ಭರತನಾಟ್ಯ ವನ್ನು ವಿದುಷಿ ವಿದ್ಯಾಲಕ್ಷ್ಮಿ ಕುಂಬ್ಲೆ ಇವರಿಂದ ಕಲಿಯುತ್ತಿದ್ದಾಳೆ. ಯಕ್ಷಗಾನವನ್ನು ಗುರುಗಳಾದ ಶಶಿಧರ ಬಜಾಕೆರೆ ಇವರಿಂದ ಅಭ್ಯಾಸಿಸುತ್ತಿದ್ದಾಳೆ. ಈಗಾಗಲೇ “ಗಿರಿಜಾ ಕಲಾಣ್ಯ” ಯಕ್ಷಗಾನದಲ್ಲಿ ಷಣ್ಮುಖ ನಾಗಿಯೂ, “ಮೆದಿನಿ ನಿರ್ಮಾಣ ಮಹಿಷಮರ್ದಿನೀ” ಯಕ್ಷಗಾನದಲ್ಲಿ ಯಕ್ಷನಾಗಿಯೂ ಅದ್ಬುತ ಪ್ರದರ್ಶನವನ್ನು ನೀಡಿರುವುದರ ಮುಖೇನವಾಗಿ ಇವಳ ಈ ಪಾತ್ರವನ್ನು ಮೆಚ್ಚಿ ಸಂಘಸಂಸ್ಥೆಯವರು ಅಭನಂದಿಸಿದ್ದಾರೆ.
ಇದಿಷ್ಟೇ ಅಲ್ಲದೇ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಸ್ಬರ್ಧೆಯಲ್ಲಿ ಸ್ವರ್ಧಿಸಿ , ಪ್ರತಿಯೊಂದು ಚಟುವಟಿಕೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದುಕೊಳ್ಳುತ್ತಾಳೆ. ಅಲ್ಲದೇ ಕಲಿಕೆಯಲ್ಲಿಯೂ ಮುಂದಿರುವ ಇವಳು ಆಟೋಟ ದಲ್ಲಿ ಭಾಗವಹಿಸಿ ಬಹುಮಾನ ತನ್ನದಾಗಿಸಿಕೊಂಡಿದ್ದಾಳೆ. Lock down ಸಮಯದಲ್ಲಿ ಒಂದು ವರ್ಷದಿಂದ online ನ ಸ್ಬರ್ಧೆಯಲ್ಲಿಯೂ ಭಾಗವಹಿಸಿರುತ್ತಾಳೆ. ಹೀಗೆ ಗಡಿನಾಡಿನ ಪ್ರತಿಭೆ ಪ್ರತೀತಿಯೂ ಇನ್ನು ಹೆಚ್ಚು ಹೆಚ್ಚು ಸಾಧನೆಯನ್ನು ಮಾಡುವಂತಾಗಲಿ ಶುಭವಾಗಲಿ.
ಹೆಸರು:ಪ್ರಥಮ್ ಪೂಜಾರಿ ನೆಟ್ಟಣಿಗೆ ಇವನು ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಇವನಿಗೆ ದೊಡ್ಡವನಾದ ಮೇಲೆ ಸೇನೆಗೆ ಸೇರಬೇಕೆಂಬ ಕನಸಿದೆ. ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಪ್ರಥಮ್ ಹಲವಾರು ವೇದಿಕೆಗಳಲ್ಲಿ, ನೃತ್ಯ, ಯಕ್ಷಗಾನ, ಕರಾಟೆ ಕಾರ್ಯಕ್ರಮ ಕೊಟ್ಟಿದ್ದಾನೆ.
ಆಟೋಟದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು.. ತಾಲೂಕು ಮಟ್ಟದಲ್ಲಿ ಭಾಗವಹಿಸಿದ್ದಾನೆ..7ನೇ ತರಗತಿಯಲ್ಲಿ ಶಾಲೆಯಲ್ಲಿ ಚಾಂಪಿಯನ್ ಶಿಪ್ ಪಡೆದು ಕೊಂಡಿದ್ದಾನೆ.. ಇನ್ನೂ ಹಲವಾರು ಚಟುವಟಿಕೆ ಯಲ್ಲೂ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾನೆ. Online ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದಾನೆ. ಇನ್ನು ಮುಂದೆಯು ಕೂಡ ಹೆಚ್ಚು ಹೆಚ್ಚು ಸಾಧನೆಯನ್ನು ಮಾಡುವಂತಾಗಲಿ.
ಕಲೆಯನ್ನು ಯಾರು ಪ್ರೀತಿಸುವರೋ , ಕಲೆ ಅವರಿಗೆ ತಾನಾಗಿಯೇ ಒಲಿದು ಬರುತ್ತದೆ.. ಅಂತೆಯೇ ಇಂದು ಈ ಇಬ್ಬರು ಕಲಾ ಪ್ರತಿಭೆಗಳನ್ನು ಪರಿಚಯಿಸುದರ ಜೊತೆಗೆ ಈ ಲೇಖನದ ಮೂಲಕ ಇವರ ಪ್ರತಿಭೆಗೆ ಪ್ರೋತ್ಸಾಹದ ಬೆಳಕಾಗುವ ಉದ್ದೇಶ ವಾಗಿದೆ.