ಮಂಗಳೂರು: ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಸ್ಥಾನದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಗಮನದಲಿಟ್ಟುಕೊಂಡು ಪ್ರತಿ ವರ್ಷದಂತೆ ದಸರಾವನ್ನು ಆಚರಿಸಲಿದ್ದು, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಹೇಳಿದ್ದಾರೆ.ಈ ಬಗ್ಗೆ ದಾಯ್ಡಿವಲ್ಡ್ ಜೊತೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ವೈಭವದ ದಸರಾ ಆಚರಣೆಗೆ ಜನರ ಬೇಡಿಕೆ ಇದ್ದು, ಕೊರೊನಾ ಸೃಷ್ಟಿಸಿದ ಆರ್ಥಿಕ ಸಂಕಷ್ಟ, ಆತಂಕದಿಂದ ಹೊರಬರಲು ಚಿಂತನೆ ನಡೆಸುತ್ತಿದ್ದು, ಈ ಬಾರಿಯೂ ಪ್ರತಿವರ್ಷದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಆದರೆ, ವೈಭವದ ಶೋಭಾಯಾತ್ರೆಗೆ ಸರಕಾರದ ಮಾರ್ಗಸೂಚಿಗಾಗಿ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ.
ಇನ್ನು ಸರ್ಕಾರದಿಂದ ಮೈಸೂರು, ಮಡಿಕೇರಿ ದಸರಕ್ಕೂ ಕೂಡಾ ಅವಕಾಶ ದೊರಕಿದ್ದಲ್ಲಿ ಮಂಗಳೂರಿನಲ್ಲಿಯೂ ಅದ್ಧೂರಿ ದಸರಾ ನಡೆಯಲಿದೆ ಎಂದು ತಿಳಿಸಿದರು.