ಜಿಲ್ಲಾ ರಾಜ್ಯೋತ್ಸವ ಪುರಸ್ಕ್ರತ ಫ್ರೆಂಡ್ಸ್ ಬಲ್ಲಾಳ್ಭಾಗ್ ಬಿರುವೆರ್ ಕುಡ್ಲ (ರಿ) ಪುತ್ತೂರು ಘಟಕ ದಿನಾಂಕ 30-08-2020 ರಂದು ಮಿತ್ತೂರು ಇಡ್ಕಿದು ಗ್ರಾಮದ ನಾರಾಯಣ ಪೂಜಾರಿ ಎನ್ನುವವರು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದು ಪ್ರಸ್ಥುತ ಕಿಡ್ನಿ ಸಮಸ್ಯೆಯಿಂದ ಕೂಡ ಬಳಲುತ್ತಿದ್ದು ಕೆ.ಎಸ್ ಹೆಗ್ಡೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರಿಗೆ ಚಿಕಿತ್ಸೆಗೆ ಆರ್ಥಿಕ ಸಹಾಯವನ್ನು ಘಟಕದ ಅಧ್ಯಕ್ಷರಾದ ಸುಧಾಕರ ಪೂಜಾರಿ ತಾರಿಗುಡ್ಡೆ ಇವರು ಹಸ್ತಾಂತರಿಸಿದರು.
ಈ ಸಮಯದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ, ಪ್ರಧಾನ ಕಾರ್ಯದರ್ಶಿ ಹರೀಶ ಶಾಂತಿ ಪುತ್ತೂರು, ಉಪಾಧ್ಯಕ್ಷರಾದ ಪ್ರವೀಣ್ ಸರ್ವೆದೋಳಗುತ್ತು, ಕೋಶಾಧಿಕಾರಿ ಕಮಲೇಶ್ ಸರ್ವೆದೋಳ ಗುತ್ತು, ವಲಯ ಸಂಚಾಲಕರಾದ ರಾಮಣ್ಣ ಪೂಜಾರಿ ಸರ್ವೆದೋಳ, ಚೇತನ್ ಕರ್ಕೇರ ಕಡಬ, ಸಂಯುಕ್ತ್ ಪೂಜಾರಿ ಪುತ್ತೂರು ಉಪಸ್ಥಿತರಿದ್ದರು. ಅದೇ ರೀತಿ ಸರ್ವ ರೀತಿಯಲ್ಲಿ ಸಹಕರಿಸಿದ ವಿಷು ಪೂಜಾರಿ ಬುಡೋಳಿ ಇವರಿಗೆ ಧನ್ಯವಾದಗಳು. ಸಹಕರಿಸಿದ ಎಲ್ಲಾ ಸದಸ್ಯರಿಗೆ ವಂದನೆಗಳು.