ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ದೇಶ ವಿದೇಶಗಳಲ್ಲಿ ತನ್ನ ಸೇವಾ ಮನೋಭಾವನೆಯ ಮೂಲಕ ಸಮಾನ ಮನಸ್ಕರೊಂದಿಗೆ ಕಟ್ಟಿಕೊಂಡ ಸಂಸ್ಥೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ).
ಕಳೆದ ಆರು ವರ್ಷದಿಂದ ಹಲವಾರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಸಂಸ್ಥೆಯು ಜಿಲ್ಲೆಯಲ್ಲಿ ಮಾತ್ರವಲ್ಲದೇ ಹೊರ ದೇಶದಿಂದ ಕೂಡ ಅಸಹಾಯಕರ ಕಣ್ಣೊರೆಸುವ ಕೆಲಸ ಮಾಡುತ್ತಿದೆ.
ಸಂಸ್ಥೆಯು ಒಂದು ಕೋಟಿ ಎಂಬತ್ತು ಲಕ್ಷಕ್ಕೂ ಮಿಕ್ಕಿ, ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಮತ್ತು ಬಡಜನರಿಗೆ, ದೀನದಲಿತರಿಗೆ ಹಣದ ಸಹಾಯ ಹಸ್ತವನ್ನು ನೀಡಿದೆ.
ಸಂಸ್ಥೆಯ ಸ್ಥಾಪಕಾಧ್ಯಕ್ಷರು ಶ್ರೀ ಉದಯ್ ಪೂಜಾರಿ ಬಳ್ಳಾಲ್ ಭಾಗ್ ಈಗಾಗಲೇ ಅತೀ ಶೀಘ್ರದಲ್ಲಿ ಮಂಗಳೂರಿನ ಜನತೆಗೆ ಉಚಿತ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ನೀಡುವರಿದ್ದಾರೆ.
ಸುಸಜ್ಜಿತವಾದ ಈ ಅಂಬ್ಯುಲೆನ್ಸ್ ನಲ್ಲಿ ಓಕ್ಸಿಜನ್ ವ್ಯವಸ್ಥೆಯೊಂದಿಗೆ ಮಂಗಳೂರಿನಲ್ಲಿ ಉಚಿತವಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.