ಕೇರಳದ ಕಾಸರಗೋಡು ಪೈವಳಿಕೆ ಪಂಚಾಯತಿನ ಬಾಯಾರು ಗ್ರಾಮದ ಬಳಿ ಚಿಪ್ಪಾರು ವಿಷ್ಣುಮೂರ್ತಿ ದೇವಸ್ಥಾನದ ಹೋಗುವ ದಾರಿ ಮಧ್ಯೆ ಸಿಗುವ ಶ್ರಿ ಧರ್ಮಶ್ರಿ ಗುರು ಮಂತ್ರ ಚಾವಡಿ ಬಾಯಾರು (ಶ್ರೀ ಶಕ್ತಿ ಪೀಠಂ ), ಇದು ಶ್ರೀ ಶಾರದಾತನಯವರ ಸಾಧನಾ ಕ್ಷೇತ್ರ.
ಸಾಧಾರಣ 600 ವರ್ಷಗಳ ಇತಿಹಾಸವಿರುವ ಸ್ಥಾನದ ಮನೆ ಹಾಗು ಗುಡ್ಡ ಮನೆ ಪರಂಪರೆಯ ಮಂತ್ರವಾದ ಕುಟುಂಬದಲ್ಲಿ ಜನಿಸಿದ ಶಾರದಾತನಯ ಕುಕ್ಕಾಜೆ ಶ್ರೀ ಧರ್ಮಶ್ರೀ ಗುರು ತನಿಯಪ್ಪ ಪೂಜಾರಿಯವರಿಂದ ದೀಕ್ಷೆ ಪಡೆದವರು. ಪ್ರಸ್ತುತ ಸ್ಥಾನದ ಮನೆ ಪಾವನ ಭೂಮಿಯ ಪುಣ್ಯ ಮಣ್ಣಿನಲ್ಲಿ ಜಗನ್ಮಾತೆಯ ಪ್ರೇರಣೆ ಎಂಬಂತೆ ಶ್ರೀ ಧರ್ಮಶ್ರೀ ಗುರು ಮಂತ್ರ ಚಾವಡಿ( ಶ್ರೀ ಶಕ್ತಿ ಪೀಠಂ) ಬಾಯಾರು ಎಂಬ ಗುರು ಸದನವನ್ನು ನಿರ್ಮಿಸಿ,
ನೊಂದು ಬೆಂದು ಬಂದ ಜನರ ಜೀವನದ ಸರ್ವ ಸಮಸ್ಯೆಗಳನ್ನು ಪರಿಹರಿಸಿ ಬೇಗುದಿಯನ್ನು ನೀಗಿಸಿ ನಂಬಿದ ಜನರ ಮನೆಯ ಆಶಾಕಿರಣವಾಗಿ, ಸದಾ ಆರಾಧ್ಯ ದೇವತೆ ಧೂಮಾವತಿ ದುರ್ಗಾ ಶಕ್ತಿ ಮತ್ತು ಆಂಜನೇಯ ಸ್ವಾಮಿಯ ಆರಾಧನೆಯೊಂದಿಗೆ ಬಡಜನರಿಗೆ ದಾರಿದೀಪವಾಗಿದ್ದಾರೆ.
ನಿರಂತರ ಜಪತಪ ಅನುಷ್ಟಾನ ಕ್ಷೇತ್ರಕ್ಕೆ ಶರಣಾಗಿ ಬಂದು ಭಕ್ತರ ಸಮಸ್ಯೆಗೆ ಜ್ಯೋತಿಷ್ಯ ನೋಡಿ ಸಮರ್ಥ ಪರಿಹಾರ ಸ್ವಾರ್ಥ ಭಾವನೆಯಿಲ್ಲದೆ ನಡೆಯುತ್ತಿರುವುದು ಇಲ್ಲಿಯ ವಿಶೇಷತೆ.
Contact:
ಶ್ರಿ ಧರ್ಮಶ್ರಿ ಗುರು ಮಂತ್ರ ಚಾವಡಿ ಬಾಯಾರು ಶ್ರೀ ಶಕ್ತಿ ಪೀಠಂ
+91 97469 89205