ಸ್ಯಾಂಡಲ್ ವುಡ್ ನಟ , ಹಿನ್ನೆಲೆ ಗಾಯಕ , ಕನ್ನಡದ ರಾಜರತ್ನ, ನಟಸಾರ್ವಭೌಮ, ಕನ್ನಡದ ಕೋಟ್ಯಧಿಪತಿ, ಪವರ್ ಸ್ಟಾರ್ ಬಿರುದಾಂಕಿತ ಪುನೀತ್ ರಾಜ್ ಕುಮಾರ್ (46)ಅ. 29 ರ ಶುಕ್ರವಾರ ಬೆಳಗ್ಗೆ 11.30 ಕ್ಕೆ ವಿಧಿವಶರಾಗಿದ್ದಾರೆ.
ಲಘು ಹೃದಯಘಾತದಿಂದಾಗಿ 11 ಗಂಟೆಗೆ ಪುನೀತ್ ರಾಜ್ ಕುಮಾರ್ ಅವರನ್ನು ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾರೆ.
1975ರ ಮಾರ್ಚ್ 17 ರಂದು ದಿ. ಡಾ| ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಮಗನಾಗಿ ಕಿರಿಯ ಮಗ ಜನಿಸಿದ “ಲೋಹಿತ್” ಅವರು ಪುನೀತ್ ರಾಜ್ ಆಗಿ ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ಕಾಣಿಸಿಕೊಂಡಿದ್ದರು.
ಬೆಳಗ್ಗೆ ಜಿಮ್‍ನಲ್ಲಿ ವರ್ಕ್ ಔಟ್ ಮಾಡುತ್ತಿದ್ದಾಗ ಹೃದಯಾಘಾತಕ್ಕೊಳಗಾದ ಅವರನ್ನು ಕೂಡಲೇ ಸಮೀಪದ ರಮಣಶ್ರೀ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಪರಿಸ್ಥಿತಿ ತುಂಬಾ ಗಂಭೀರವಾಗಿದ್ದರಿಂದ ಅಲ್ಲಿಂದ ವಿಕ್ರಂ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅದರೇ ವೈದ್ಯರ ಎಲ್ಲಾ ಪ್ರಯತ್ನದ ನಂತರವೂ ಅಭಿಮಾನಿಗಳ ಪಾಲಿನ ನೆಚ್ಚಿನ ಅಪ್ಪು ಕೊನೆಯುಸಿರೆಳೆದಿದ್ದಾರೆ.
1975ರಲ್ಲಿ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಬಾಲನಟನಾಗಿ ಕಾಣಿಸಿಕೊಂಡಿದ್ದ ಅವರು ಮುಂದೆ 1983ರಲ್ಲಿ ಭಕ್ತ ಪ್ರಹ್ಲಾದ ಸಿನೆಮಾದಲ್ಲಿ ಅದ್ಭುತವಾಗಿ ನಟಿಸಿ ಗಮನ ಸೆಳೆದು ಪ್ರಶಸ್ತಿಗೂ ಭಾಜನರಾಗಿದ್ದರು.