ಬಿರುವೆರ್ ಕುಡ್ಲ(ರಿ) ಉಡುಪಿ ಘಟಕ
ಸ್ಪಂದನ 19ನೇ ಸೇವಾ ಯೋಜನೆ
ಬ್ರಹಶ್ರೀ ನಾರಾಯಣಗುರು ಸ್ವಾಮಿಗಳ ವೇದವಾಕ್ಯವಾದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದಡಿಯಲ್ಲಿ ಅಶಕ್ತರ ಪಾಲಿನ ನಂದಾದೀಪವಾಗಿ ಸಮಾಜವನ್ನು ಸುಸ್ಥಿತಿಗೆ ತರುವ ಪಣವನ್ನು ತೊಟ್ಟಿರುವ ಶ್ರೀ ಉದಯ ಪೂಜಾರಿ ನೇತ್ರತ್ವದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಮಂಗಳೂರು ಕರ್ನಾಟಕ ಇದರ ಹೃದಯವಂತರು-2020 ಪ್ರಶಸ್ತಿ ಪುರಸ್ಕೃತ ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಇದರ ಅಂಗ ಸಂಸ್ಥೆಯಾದ ಬಿರುವೆರ್ ಕುಡ್ಲ ಉಡುಪಿ ಘಟಕದ 19ನೇ ಸೇವಾಯೋಜನೆಯಡಿಯಲ್ಲಿ ಸಹಾಯಧನವನ್ನು ದಿನಾಂಕ: 07.02.2021ನೇ ಅದಿತ್ಯವಾರದಂದು ಉಡುಪಿಯ ಪೆರಂಪಳ್ಳಿಯ ಅಶಕ್ತಕುಟುಂಬಕ್ಕೆ ಅವರ ವಿಶೇಷ 2 ಮಕ್ಕಳ ವೈದ್ಯಕೀಯ ನೆರವಿಗಾಗಿ ನೀಡಲಾಯಿತು.