ಬಿರುವೆರ್ ಕುಡ್ಲ(ರಿ) ಬಜಪೆ ಘಟಕ
ಸ್ಪಂದನ 55 ನೇ ಸೇವಾ ಯೋಜನೆ
ಬ್ರಹಶ್ರೀ ನಾರಾಯಣಗುರು ಸ್ವಾಮಿಗಳ ವೇದವಾಕ್ಯವಾದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದಡಿಯಲ್ಲಿ ಅಶಕ್ತರ ಪಾಲಿನ ನಂದಾದೀಪವಾಗಿ ಸಮಾಜವನ್ನು ಸುಸ್ಥಿತಿಗೆ ತರುವ ಪಣವನ್ನು ತೊಟ್ಟಿರುವ ಶ್ರೀ ಉದಯ ಪೂಜಾರಿ ನೇತ್ರತ್ವದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಮಂಗಳೂರು ಕರ್ನಾಟಕ ಇದರ ಹೃದಯವಂತರು-2020 ಪ್ರಶಸ್ತಿ ಪುರಸ್ಕೃತ ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಇದರ ಅಂಗ ಸಂಸ್ಥೆಯಾದ ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ 55ನೇ ಸೇವಾಯೋಜನೆಯಡಿಯಲ್ಲಿ ಎಕ್ಕಾರು ನಿವಾಸಿ ಪ್ರೇಮ ಇವರಿಗೆ wheelchair ಹಸ್ತಾಂತರ ಮಾಡಲಾಯಿತು.
ಎಕ್ಕಾರು ಕೆಂಚಗುಡ್ಡೆ ನಿವಾಸಿಯಾಗಿರುವ ಪ್ರೇಮ ಇವರು ಕಳೆದ ಕೆಲವು ದಿನಗಳಿಂದ ತಲೆಯಲ್ಲಿ ರಕ್ತ ಹೆಪ್ಪು ಗಟ್ಟಿ ಆಸ್ಪತ್ರೆಯಲ್ಲಿ ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದು ಮನೆಗೆ ಬಂದಿರುತ್ತಾರೆ. ಇವರು ಈಗ ನಡೆದುಕೊಂಡು ಹೋಗುವ ಪರಿಸ್ಥಿತಿಯಲ್ಲಿ ಇಲ್ಲ. ಇವರಿಗೆ wheelchair ನ ಅಗತ್ಯವಿತ್ತು. ಇದನ್ನು ಗಮನಿಸಿದ ಎಕ್ಕಾರು ಗ್ರಾಮ ಪಂಚಾಯತ್ ನ ಸದಸ್ಯರಾದ ಶ್ರೀ ಅನಿಲ್ ಕುಲಾಲ್ ಎಕ್ಕಾರು ಇವರು ಬಿರುವೆರ್ ಕುಡ್ಲ ಬಜಪೆ ಘಟಕಕ್ಕೆ ಇವರಿಗೆ ಸಹಾಯಮಾಡುವಂತೆ ಮನವಿಯನ್ನು ಮಾಡಿದರು. ಇವರ ಮನವಿಗೆ ತಕ್ಷಣವೇ ಸ್ಪಂದಿಸುವ ಭರವಸೆ ಕೊಟ್ಟು, ತಾ: 17.02.2021ರಂದು ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ ಸದಸ್ಯರು ಪ್ರೇಮ ಇವರ ಮನೆಗೆ ತೆರಳಿ WHEELCHAIR ಅವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಪೆರ್ಮುದೆ ವಲಯದ ಸಂಚಾಲಕರು ಶ್ರೀ ಕೀರ್ತನ್ ಅಮಿನ್ ಪೆರ್ಮುದೆ, ಸಹಸಂಚಾಲಕರು ಜೀವರಾಜ್ ಕೋಟ್ಯಾನ್ ಪೆರ್ಮುದೆ, ಶ್ರೀ ಸಂದೇಶ್ ಶೆಟ್ಟಿ ಜೋಕಟ್ಟೆ, ಎಕ್ಕಾರು ಗ್ರಾಮ ಪಂಚಾಯತ್ ಸದಸ್ಯರು ಶ್ರೀ ಅನಿಲ್ ಕುಲಾಲ್ ಎಕ್ಕಾರು, ಘಟಕದ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ರಮಾನಂದ ಪೂಜಾರಿ ಕಟೀಲು, ಬಿರುವೆರ್ ಕುಡ್ಲ ಬಜಪೆ ಘಟಕದ ಎಕ್ಕಾರು ವಲಯದ ಪ್ರಮುಖರಾದ ಶ್ರೀ ಕಿರಣ್ ಪೂಜಾರಿ ಎಕ್ಕಾರು, Auto ಬೋಜ ಪೂಜಾರಿ ಸುದರ್ಶನ್ ಪೂಜಾರಿ, ಶಂಕರ್ ಪೂಜಾರಿ, ನಾಗೇಶ್ ಪೂಜಾರಿ ಉಪಸ್ಥಿತರಿದ್ದರು.
ತುರ್ತು ಸೇವಾಯೋಜನೆಯ WHEELCHAIR ಸಿದ್ಧ ಪಡಿಸಿದ ಪರಿ:
ಬಿರುವೆರ್ ಕುಡ್ಲ ಬಜಪೆ ಘಟಕಕ್ಕೆ ಮನವಿ ಬಂದ ಕೂಡಲೇ ನಮ್ಮ ಘಟಕದ ಅಧ್ಯಕ್ಷರು ಶ್ರೀ ಪ್ರಶಾಂತ್ ಕುಮಾರ್ ಕೆಂಜಾರು ಕಾನ ಇವರು ತಕ್ಷಣವೇ ಒಂದು WHEELCHAIRನ್ನು ಗುರುತಿಸಿ, ಅದನ್ನು ಹೊಸ ರೂಪಕ್ಕೆ ತರುವಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಉಪಾಧ್ಯಕ್ಷರು ಶ್ರೀ ಚಂದ್ರ ಪೂಜಾರಿ ಪೆರಾರ ಮತ್ತು ಬಿರುವೆರ್ ಕುಡ್ಲ ಬಜಪೆ ಘಟಕದ ಸಕ್ರಿಯ ಸದಸ್ಯರು ಶ್ರೀ ಸಂದೇಶ್ ಶೆಟ್ಟಿ ಜೋಕಟ್ಟೆ ಇವರು ಸೇರಿ ಖುದ್ದಾಗಿ ಕೆಲಸ ಮಾಡಿ WHEELCHAIR ಕೊಡುವಲ್ಲಿ ನೆರವಾಗಿರುತ್ತಾರೆ. ಇವರಿಗೆ ಧನ್ಯವಾದಗಳು.
ಪ್ರಕಟಣೆ: ಬಿರುವೆರ್ ಕುಡ್ಲ ಬಜಪೆ ಘಟಕ