ಬಿರುವೆರ್ ಕುಡ್ಲ(ರಿ) ಬಜಪೆ ಘಟಕ
ಸ್ಪಂದನ 53 ನೇ ಸೇವಾ ಯೋಜನೆ
ಬ್ರಹಶ್ರೀ ನಾರಾಯಣಗುರು ಸ್ವಾಮಿಗಳ ವೇದವಾಕ್ಯವಾದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದಡಿಯಲ್ಲಿ ಅಶಕ್ತರ ಪಾಲಿನ ನಂದಾದೀಪವಾಗಿ ಸಮಾಜವನ್ನು ಸುಸ್ಥಿತಿಗೆ ತರುವ ಪಣವನ್ನು ತೊಟ್ಟಿರುವ *ಶ್ರೀ ಉದಯ ಪೂಜಾರಿ* ನೇತ್ರತ್ವದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಮಂಗಳೂರು ಕರ್ನಾಟಕ ಇದರ ಹೃದಯವಂತರು-2020 ಪ್ರಶಸ್ತಿ ಪುರಸ್ಕೃತ *ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ)* ಇದರ ಅಂಗ ಸಂಸ್ಥೆಯಾದ ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ 53ನೇ ಸೇವಾಯೋಜನೆಯಡಿಯಲ್ಲಿ ಸಹಾಯಧನವನ್ನು ದಿನಾಂಕ: 04.02.2021ನೇ ಗುರುವಾರದಂದು *ಪೋರ್ಕೊಡಿ ನಿವಾಸಿ ಭವಾನಿ ಶಂಕರ ಪೂಜಾರಿ ಇವರಿಗೆ ವೈದ್ಯಕೀಯ ನೆರವಿಗಾಗಿ ನೀಡಲಾಯಿತು.*
ಭವಾನಿ ಶಂಕರ ಪೂಜಾರಿ ಇವರಿಗೆ 28 ವರ್ಷ ಮಿತ್ಲ ಹೌಸ್ ಪೇಜಾವರ ಪೋರ್ಕೊಡಿ ನಿವಾಸಿಯಾಗಿರುವ ಇವರು ಲಂಗ್ಸ್ ನಲ್ಲಿ ನೀರು ತುಂಬಿ ಬಳಲುತ್ತಿದ್ದಾರೆ. ಅನೇಕ ವರ್ಷಗಳಿಂದ ಇವರಿಗೆ ಈ ಕಾಯಿಲೆ ಇರುವುದರಿಂದ ಇವರ ಆರ್ಥಿಕ ಪರಿಸ್ಥಿತಿ ತುಂಬ ಸಂಕಷ್ಟದಲ್ಲಿ ಇದೆ. ಇವರ ಕುಟುಂಬ ಅತಿ ಕಡುಬಡತನದಲ್ಲಿ ಇರುವುದರಿಂದ ಇವರ ಪರಿಸ್ಥಿತಿಯನ್ನು ಗಮನಿಸಿ ತಕ್ಷಣವೇ ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ ಮುಖಾಂತರ ಇವರಿಗೆ ಆಸ್ಪತ್ರೆಯ ಖರ್ಚಿಗೆ ಧನಸಹಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷರು ಪ್ರಶಾಂತ್ ಕುಮಾರ್ ಕೆಂಜಾರು ಕಾನ,ನಿರಂಜನ್ ಕರ್ಕೇರ ಪೋರ್ಕೊಡಿ, ಸಂದೇಶ್ ಶೆಟ್ಟಿ ಜೋಕಟ್ಟೆ, ಪ್ರಸಾದ್ ಬೈದ್ಯ, ರಮಾನಂದ ಪೂಜಾರಿ ಕಟೀಲು, ಅಖಿಲೇಶ್ ಅಮೀನ್ ಜೋಕಟ್ಟೆ, ಮನೀಶ್ ಪೂಜಾರಿ ಜೋಕಟ್ಟೆ ಉಪಸ್ಥಿತರಿದ್ದರು.