ದಿನಾಂಕ: 25.07.2021 ನೇ ಭಾನುವಾರ ಬಿರುವೆರ್ ಕುಡ್ಲ ಬಜಪೆ ಘಟಕ ಸ್ಪಂದನ ತಂಡದ ವತಿಯಿಂದ ಸುಂಕದಕಟ್ಟೆ ನಿವಾಸಿಜಗದೀಶ್ ಆಚಾರ್ಯ ಇವರಿಗೆ ವೈದ್ಯಕೀಯ ನೆರವಿಗಾಗಿ ಸಹಾಯಧನ ನೀಡಲಾಯಿತು
ಕಂದಾವರ ಪಂಚಾಯತ್ ಕೊಳಂಬೆ ಗ್ರಾಮದ ಸುಂಕದಕಟ್ಟೆ ದೇವಸ್ಥಾನದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕುಟುಂಬದಯಜಮಾನರಾದ ಜಗದೀಶ ಆಚಾರ್ಯ ಅವರು ಸುಮಾರು ಒಂದು ತಿಂಗಳ ಮುಂಚೆ ಮರದ ಕೆಲಸ ಮಾಡುತ್ತಿರುವಾಗ ಆಯ ತಪ್ಪಿಕೆಳಗೆ ಬಿದ್ದು ಕಾಲಿಗೆ ಗಾಯ ಆಗಿದ್ದು, ಕಾಲಿಗೆ ರಾಡ್ ಅಳವಡಿಸಲಾಗಿದೆ. ಇಡೀ ಕುಟುಂಬವು ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆಹಾಗೂ ಸ್ಟೀಲ್ ರಾಡ್ ತೆಗೆದು ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು ಮತ್ತು ರಾಡ್ ಇದ್ದ ಜಾಗದಲ್ಲಿ ಇನ್ಪೆಕ್ಷನ್ ಆಗಿರುತ್ತದೆ ಮತ್ತಷ್ಟು ದಿನ ಕಳೆದರೆಜಾಸ್ತಿ ಆಗುವ ಸಂಭವವಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಇವರು ಬಿರುವೆರ್ ಕುಡ್ಲ ಬಜಪೆ ಘಟಕಕ್ಕೆ ಮನವಿಯನ್ನುನೀಡಿರುತ್ತಾರೆ. ಇವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಇವರಿಗೆ ದಿನಾಂಕ25/07/2021 ರಂದು ಬಿರುವೆರ್ ಕುಡ್ಲ ಬಜಪೆ ಘಟಕ ಸ್ಪಂದನ ತಂಡದಿಂದ ಧನಸಹಾಯ ನೀಡಲಾಯಿತು. ಲಾಕ್ ಡೌನ್ಸಮಯದಲ್ಲಿ ಇವರಿಗೆ ದಿನನಿತ್ಯದ ಆಹಾರ ಸಾಮಗ್ರಿ ಕಿಟ್ಟನ್ನು ಇವರಿಗೆ ಎರಡು ತಿಂಗಳ ಹಿಂದೆ ಘಟಕದಿಂದ ನೀಡಲಾಗಿತ್ತು. ತುಂಬಾಕಷ್ಟದಲ್ಲಿರುವ ಇವರ ಕುಟುಂಬ ದಾನಿಗಳ ನಿರೀಕ್ಷೆಯಲ್ಲಿದೆ.
ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ಕೆಂಜಾರು ಕಾನ, ಪ್ರಸಾದ್ ಆಚಾರ್ಯಪಡುಪೆರಾರ, ಉಪಾಧ್ಯಕ್ಷರಾದ ಚಂದ್ರ ಪೂಜಾರಿ, ದಿನೇಶ್ ಕೆ ಬಂಗೇರ, ಕಾರ್ಯಾಧ್ಯಕ್ಷರಾದ ಗಣೇಶ್ ಪೂಜಾರಿ ಬಜಪೆ, ಸಂಘಟನಾಕಾರ್ಯದರ್ಶಿ ಶಿವಾನಂದ್ ಕಟೀಲು, ಸದಸ್ಯರಾದ ಮಹೇಂದ್ರ ಪೂಜಾರಿ ಶಾಂತಿಗುಡ್ಡೆ ಉಪಸ್ಥಿತರಿದ್ದರು.