ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕರಾವಳಿಯ ಯುವಕರ ನೆಚ್ಚಿನ ಸಂಘಟನೆಯಾದ ಬಿರುವೆರ್ ಕುಡ್ಲ ಇದರ ಸ್ಥಾಪಕ ಅಧ್ಯಕ್ಷರಾದ *ಉದಯ್ ಪೂಜಾರಿ* ಇವರಿಗೆ ಪ್ರತಿಷ್ಠಿತ BSNDP ( ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘ) ಸಂಘಟನೆ ವತಿಯಿಂದ ರಾಜ್ಯಮಟ್ಟದ ಪ್ರತಿಷ್ಠಿತ ಪರಿವರ್ತನಾ ಶ್ರೀ ಪ್ರಶಸ್ತಿ ಲಭಿಸಿದೆ.ಕರ್ನಾಟಕದ ಕರಾವಳಿ, ಬೆಂಗಳೂರು, ಮುಂಬೈ ಮಹಾನಗರ ಹಾಗೂ ದುಬೈ ನಗರಗಳಲ್ಲಿ ಮನೆಮಾತಾಗಿರುವ ಬಲಿಷ್ಠ ಯುವಪಡೆಯ ಬಿರುವೆರ್ ಕುಡ್ಲ ಸಂಘಟನೆಯನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸಿ, ಯುವಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹಕೊಟ್ಟು, ಸಮಾಜದ ಕಷ್ಟದಲ್ಲಿರುವ ಜನತೆಯ ಕೈಹಿಡಿಯುತ್ತಿರುವ ಸಂಘಟನೆಯಾಗಿದ್ದು, ಪ್ರಶಸ್ತಿ ಲಭಿಸಿದ್ದು ಸಂಘದ ಸದಸ್ಯರಲ್ಲಿ ಸಂತಸವನ್ನುಂಟುಮಾಡಿದೆ. ಇನ್ನಷ್ಟು ಈ ಸಂಘಟನೆ ಬೆಳೆಯಲಿ.