TOP STORIES:

ಬಿಲ್ಲವರಿಂದಲೇ ಬಿಲ್ಲವರಿಗಾಗಿಯೇ ಬಿಲ್ಲವರಿಗೋಸ್ಕರವೇ ಸಿದ್ದವಾಗಿದೆ ಬಿಲ್ಲವಾಸ್ ವಾರಿಯರ್ಸ್..


ಬಿಲ್ಲವ ಸಮಾಜ ಬಂಧುಗಳೇ,

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬಿಲ್ಲವರು ಸಾಧನೆ ಮಾಡಿರದ ಕ್ಷೇತ್ರಗಳೇ ಇಲ್ಲ ಎಂದರೆ ತಪ್ಪಗಲಾರದು. ನಮ್ಮ ಸಮಾಜ ಬಂಧುಗಳ ಸಾಧನೆ, ಸಂಭ್ರಮಗಳು ಕೇವಲ ತುಳುನಾಡಷ್ಟೇ ಅಲ್ಲದೇ ಜಗತ್ತಿನ ಉದ್ದಗಲಕ್ಕೂ ಹಬ್ಬಿ ನಿಂತಿರುವಂಥದ್ದು. ಆದರೆ ಕೆಲ ಸಾಧಕರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದ ಕಾರಣ ಅಂಥವರನ್ನು ಗುರುತಿಸುವ ಜವಾಬ್ದಾರಿ ನಮ್ಮದು. ಸಾಧಕರ ಜೊತೆಗೆ ಸಂಕಷ್ಟದಲ್ಲಿರೋ ಸಮಾಜದ ಬಂಧುಗಳ ಬದುಕಿನ ಮೇಲೂ ಬೆಳಕು ಚೆಲ್ಲಬೇಕಾದ ಮತ್ತೊಂದು ಕಾರ್ಯವೂ ಅಗಬೇಕಿದೆ. ಕಷ್ಟದಲ್ಲಿರೋ ಬಿಲ್ಲವ ಬಂಧುಗಳಿಗೆ ನೆರವಿನ ಹಸ್ತ ಚಾಚುವ ಸಮಾಜಮುಖಿ ಉದ್ದೇಶವೂ ಇದೆ. ಅಂಥವರನ್ನು ಗುರುತಿಸಿ ಸಮಾಜದ ಮುಂದಿಟ್ಟರೆ ಅವರ ಬದುಕು ಹೊಸ ಬೆಳಕು ಕಾಣಬಹುದು ಅನ್ನೋ ನಂಬಿಕೆ ನಮ್ಮದು. ಹೀಗೆ ಬಿಲ್ಲವ ಸಮಾಜದ ಸಮಗ್ರ ವಸ್ತು-ವಿಚಾರಗಳ ಅನಾವರಣಕ್ಕೆ ನಾವು ಹೊಸ ವೇದಿಕೆಯೊಂದನ್ನು ಕಲ್ಪಿಸುತ್ತಿದ್ದೇವೆ. ..’ ಸದ್ಯದ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ನಮ್ಮವರನ್ನು ತಲುಪಲು ಮತ್ತು ನಮ್ಮವರ ಸಾಧನೆಯ ಜೊತೆಗೆ ಸಮಗ್ರ ಮಾಹಿತಿಗಳನ್ನು ಅನಾವರಣಗೊಳಿಸಲು ಬಿಲ್ಲವಾಸ್ ವಾರಿಯರ್ಸ್ ತಂಡ ನಿಮ್ಮೆದುರು ಬರುತ್ತಿದೆ. ಫೇಸ್ ಬುಕ್, ಇನ್ಸ್ಟಾಗ್ರಾಂ, ವೆಬ್ ಸೈಟ್ ಮೂಲಕ ನಮ್ಮ ಸಮಾಜ ಬಂಧುಗಳನ್ನು ತಲುಪುವ ಉದ್ದೇಶ ನಮ್ಮದು. ನಮ್ಮವರ ಸಾಧನೆ, ಅಭಿವೃದ್ಧಿ, ಸಂಕಷ್ಟ, ನೆರವು, ಗೆಲುವು, ಜವಾಬ್ದಾರಿ, ಪ್ರತಿಭೆ…ಹೀಗೆ ಎಲ್ಲವಕ್ಕೂ ಒಂದೇ ವೇದಿಕೆಯಾಗಲಿದೆ ‘ಬಿಲ್ಲವಾಸ್ ವಾರಿಯರ್ಸ್‌’ …ನಮ್ಮೊಳಗಿನ ಯಾವುದೇ ಕ್ಷೇತ್ರದ ವಾರಿಯರ್ಸ್‌ಗಳನ್ನೂ ಸಮಾಜದ ಮುಂದೆ ಪರಿಚಯಿಸುವ ಜೊತೆಗೆ ಅಧ್ಯಯನ, ಕಾರ್ಯ, ಕಲ್ಪನೆಗಳನ್ನು ಒಂದುಗೂಡಿಸಿ ಸಾಮಾಜಿಕ ತಾಣಗಳ ಮೂಲಕ ಸಮಾಜದ ಮುಂದಿಟ್ಟು ಫಲಿತಾಂಶ ಪಡೆಯುವ ಹಂಬಲ ನಮ್ಮದು..ಬಿಲ್ಲವ ಬಂಧುಗಳೇ ಕೈ ಜೋಡಿಸಿ, ನೀವೂ ಬರೆಯಿರಿ, ಮಾಹಿತಿ ಹಂಚಿಕೊಳ್ಳಿ…ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ,ಲೈಕ್ ಮಾಡಿ…

ಧನ್ಯವಾದಗಳು
ಟೀಂ ಬಿಲ್ಲವಾಸ್ ವಾರಿಯರ್ಸ್‌

ಫೇಸ್ ಬುಕ್, ಇನ್ಸ್ಟಾಗ್ರಾಂ, ವೆಬ್ ಸೈಟ್ ಲಿಂಕ್

Follow us on Instagram

Username: billavaswarriors
https://www.instagram.com/billavaswarriors

Follow Facebook Page:
https://m.facebook.com/billavawarriors/

www.billavasworriors.com


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »