ಬಿಲ್ಲವರ ಒಗ್ಗಟ್ಟಿಗೆ ಸಂದ ಜಯ ಹಾಗೂ ಸಮಾಜದ ಅಭಿವೃದ್ಧಿಗಾಗಿ ನಡೆಸುವ ಕಾರ್ಯಚಟುವಟಿಕೆಗಳಿಗಾಗಿ ಬ್ರಹ್ಮ ಶ್ರೀನಾರಾಯಣಗುರು ದೇವರ ಅನುಗ್ರಹಕ್ಕಾಗಿ ವಿಶೇಷ ಗುರು ಪೂಜೆ ಬಿಲ್ಲವ ಸಮಾಜದ ಸಮಸ್ತ ಸಂಘಟನೆಗಳ ಪರವಾಗಿ ಜೂನ್ 25ರಂದು ಸಂಜೆ 5.30ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜರುಗಲಿದೆ.
ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಗುರುದೇವರ ಮುಂದೆ ಸಂಕಲ್ಪ ಕೈಗೊಂಡು ದೀರ್ಘಕಾಲದಲ್ಲಿ ಪರಿಣಾಮ ಬೀರುವ ಶಿಕ್ಷಣ, ಉದ್ಯೋಗ ಮುಂತಾದ ಅವಕಾಶಗಳನ್ನು ಹೆಚ್ಚಿಸುವ ಹಾಗೂ ಅಭಿವೃದ್ಧಿಪಡಿಸುವಕಾರ್ಯಕ್ರಮಗಳ ಜತೆ ಬ್ರಹ್ಮ ಶ್ರೀ ನಾರಾಯಣಗುರು ಧರ್ಮ ಪರಿಪಾಲನೆಯ ತತ್ವಾದಾರ್ಶಗಳನ್ನು ಅನುಷ್ಠಾನಗೊಳಿಸಲು ಕಾರ್ಯಪ್ರವೃತ್ತರಾಗಬೇಕಾಗಿದೆ. ಈ ಬಗ್ಗೆ ಸಮಸ್ತ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳು ಪಕ್ಷಭೇದ ಮರೆತು ಶ್ರೀಕ್ಷೇತ್ರಕುದ್ರೋಳಿಯಲ್ಲಿ ಜತೆ