ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿ ಆಚರಣೆಯ ಶುಭದಿನದಂದು ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಜಂಕ್ಷನ್ ಗುರುಗಳ ಭಾವಚಿತ್ರ ಸಮೇತ ಪುಷ್ಪಾರ್ಚನೆ ನೆರವೇರಿತು.
ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಇದರ ಹಲವು ವರ್ಷಗಳ ಪ್ರಯತ್ನದಿಂದಾಗಿ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆ ಹಾಗು ಜೆ.ಪಿ.ನಗರ ಮುಖ್ಯ ರಸ್ತೆ ಸೇರುವ ಜಂಕ್ಷನ್ ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಾಮಫಲಕ 2019 ರಲ್ಲಿ ಅನಾವರಣಗೊಂಡಿತು.
ಇಂದು ಜಗತ್ತಿನಾದ್ಯಂತ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿ ಆಚರಣೆಯ ಶುಭದಿನದಂದು ಈ ಜಂಕ್ಷನ್ ನಲ್ಲಿ ನಾಮಫಲಕದ ಮುಂಬಾಗದಲ್ಲಿ ಬೆಳಿಗ್ಗೆ 7.30ಕ್ಕೆ ಸರಿಯಾಗಿ ಗುರುಗಳ ಭಾವಚಿತ್ರ ಸಮೇತ ಪುಷ್ಪಾರ್ಚನೆಯನ್ನು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಂದ ನೆರವೇರಿಸಲಾಯಿತು.