ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವ ಹಿನ್ನಲೆಯಲ್ಲಿ ಬಿಲ್ಲವ ಬ್ರಿಗೆಡ್ ನಿಂದ ಬೃಹತ್ ಬೈಕ್ ರಾಲಿ. ಬಿಲ್ಲವ ಬ್ರಿಗೆಡ್ ಬೈಕ್ ರಾಲಿಗೆ ಪೋಲಿಸರಿಂದ ತಡೆ.
ಗೊಂದಲದಿಂದ ಒಮ್ಮೆ ತಬ್ಬಿಬ್ಬಾದ ಬಿಲ್ಲವ ಬ್ರಿಗೆಡ್ ಹೋರಾಟವನ್ನು ಕೆಂಜಾರಿನಲ್ಲಿ ಪ್ರಾರಂಬಿಸಿದ್ದು. ಬಿಲ್ಲವರು ಬೈಕ್ ರಾಲಿ ಇಲ್ಲದೆ ಕಾಲ್ನಡಿಗೆಯಲ್ಲೇ ಕೆಂಜಾರಿನತ್ತ ಸಾಗಿದ ಬಿಲ್ಲವ ಬ್ರಿಗೆಡ್. ಮರವೂರಿನಿಂದ ಕೆಂಜಾರಿನವರೆ ಘೋಷಣೆ ಕೂಗುತ್ತಾ ಹೋರಾಟ ನಡೆಯಿತು.
ಈ ಸಂಧರ್ಭದಲ್ಲಿ ಮಾತಾಡಿದ ಸತ್ಯಜಿತ್ ಸುರತ್ಕಲ್ ”ಕೋಟಿ ಚೆನ್ನಯರ ಹೆಸರಿಡದಿದ್ದರೆ ಹೋರಾಟ ನಿಲ್ಲದು, ತುಳುನಾಡಿನ ಮಹಾಪುರುಷರಾದ ಕೋಟಿ ಚೆನ್ನಯರ ಹೆಸರಿಡಬೇಕು ರಾಜ್ಯ ಸರ್ಕಾರಕ್ಕೆ ತಲುಪಿಸಿದ ಮನವಿ ಪತ್ರ ಮೂಲೆ ಗುಂಪಾಗಿದೆ. ಕೇವಲ ಒಂದು ದಿನದ ಹೋರಾಟ ಅಲ್ಲ ಇದು ಗೆಲುವು ಸಿಗುವವರೆಗೆ ನಮ್ಮ ಹೋರಾಟ ನಡೆಯುತ್ತಿರುತ್ತದೆ. ಎಷ್ಟೇ ತಡೆ ಬಂದರೂ ಕೂಡ ನಾವು ಹಿಂಜರಿಯೋದಿಲ್ಲ. ಅದಾನಿ ಏರ್ ಪೋರ್ಟ್ ಕೋಟಿ ಚೆನ್ನಯರ ಏರ್ ಪೋರ್ಟ್ ಎಂದು ಹೆಸರು ಬದಲಾಯಿಸುವವರೆಗೆ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ಆಗ್ರಹಿಸಿದರು.