ಜೈ ಗುರುದೇವ
” ಒಂದೇ ಜಾತಿ.. ಒಂದೇ ಧರ್ಮ.. ಒಂದೇ ದೇವರು..
ಎನ್ನುವ ನೀತಿ ಸಂದೇಶವನ್ನು ಜಗತ್ತಿಗೆ ಸಾರಿದ ಜಗದ್ಗುರು ಶ್ರೀ ನಾರಾಯಣ ಗುರುಗಳ ಚರಣ ಸ್ಪರ್ಶಿಸುತ್ತಾ…
ಬಿಲ್ಲವ ಭವನ ಮುಂಬಯಿಯಲ್ಲಿ ದಿವಂಗತ ಜಯ. ಸಿ ಸುವರ್ಣರ ಮೂರ್ತಿ (ಪ್ರತಿಮೆ) ಪ್ರತಿಷ್ಠಾಪನೆ ಬಗ್ಗೆ ಬಿರುವೆರ್ ಕುಡ್ಲಸಂಘಟನೆ ಖಂಡನೆ.
ಬಿಲ್ಲವರ ಎಸೋಸಿಯೇಷನ್ ಮುಂಬಯಿ ಬಿಲ್ಲವ ಭವನದಲ್ಲಿ ಬಿಲ್ಲವ ಜನನಾಯಕ ದಿ. ಜಯ ಸುವರ್ಣರ ಪ್ರತಿಮೆಯನ್ನುಪ್ರತಿಷ್ಠಾಪನೆ ಮಾಡುವ ಬಗ್ಗೆ ಅವರ ಅನುಯಾಯಿಗಳ ಒಂದು ವರ್ಗ ಪಟ್ಟು ಹಿಡಿದು ಬಿಲ್ಲವರ ಎಸೋಸಿಯೇಷಷನ್ ಮುಂಬಯಿಸಂಸ್ಥೆಗೆ ಒತ್ತಾಯಿಸುತ್ತಿದೆ ಎಂಬ ವಿಷಯ ಸಾಮಾಜಿಕ ಜಾಲತಾಣದ ಮುಖೇನ ನಮ್ಮ ಸಂಘಟನೆಯ ಗಮನಕ್ಕೆ ಬಂದಿದೆ. ಇದನ್ನುಖಂಡಿಸಿ ಎಚ್ಚರಿಕೆಯ ಸೂಚನೆಯನ್ನು ಈ ಮೂಲಕ ನೀಡುತ್ತಿದ್ದೇವೆ.
ಬಿಲ್ಲವರ ಎಸೋಸಿಯೇಷನ್ ಮುಂಬಯಿ ಸಂಸ್ಥೆಯ ಹುಟ್ಟು ಬೆಳವಣಿಗೆಗೆ ನೂರಾರು ಜನನಾಯಕರ ನಿಸ್ವಾರ್ಥ ಸೇವೆ ಕೊಡುಗೆತ್ಯಾಗ ಅಪಾರ ಅವಿಸ್ಮರಣೀಯ ಎಂಬುದು ಅರಿವಿರಲಿ.
ದಿ. ಜಯ ಸಿ. ಸುವರ್ಣರು ನಮ್ಮ ಸಮಾಜದ ಧೀಮಂತ ನಾಯಕ ಮಾತ್ರವಲ್ಲದೆ ಬಿಲ್ಲವ ಸಮಾಜಕ್ಕೆ ಅವರ ಸೇವೆ ತ್ಯಾಗ ಕೊಡುಗೆಅಪಾರ.. ಈ ದೆಸೆಯಲ್ಲಿ ನಮಗೆಲ್ಲರಿಗೂ ಅಪಾರ ಹೆಮ್ಮೆ ಅಭಿಮಾನ ಗೌರವವಿದೆ.
ಆದರೇ…
ಬಿಲ್ಲವ ಭವನ ಯಾರೊಬ್ಬರ ಖಾಸಗಿ ಆಸ್ತಿ.. ಸ್ವತ್ತು.. ಸಂಪತ್ತು ಅಲ್ಲವೇ ಅಲ್ಲ. ಅದು ಸರ್ವ ಬಿಲ್ಲವ ಸಮಾಜ ಬಾಂಧವರ ಸಂಪತ್ತುಆಸ್ತಿ..
ವ್ಯಕ್ತಿ ಪೂಜೆ.. ಮೂರ್ತಿ ಪೂಜೆಯಿಂದ ಸದಾ ದೂರ ಸರಿದು ಸರ್ವ ಸಮಾಜದ ಏಳಿಗೆಗೆ ಹೋರಾಡಿ ಜಗದ್ಗುರುವಾಗಿ ಕೀರ್ತಿಶೇಷರಾದ ಶ್ರೀ ನಾರಾಯಣ ಗುರುಗಳೇ ತಮ್ಮ ಮೂರ್ತಿಯನ್ನಿಟ್ಟು ಪೂಜಿಸಿ ಅಂದಿಲ್ಲ. ಆದರೂ ನಾವಿಂದು ಸಮಾಜದ ಸರ್ವಜನರ ಒಮ್ಮತದಿಂದ ಅವರ ಮೂರ್ತಿಯನ್ನಿಟ್ಟು ಎಲ್ಲೆಡೆ ಅವರನ್ನು ಪೂಜಿಸಿ ಆರಾಧಿಸಿಕೊಂಡು ಗೌರವಿಸುತ್ತಾ ಬಂದಿರುತ್ತೇವೆ. ಅದು ಬಿಟ್ಟು ಅವರ ಪ್ರತಿಮೆಯ ಸಮ್ಮುಖದಲ್ಲಿ ಸಾಮಾನ್ಯ ಜನನಾಯಕನೊಬ್ಬನ ಪ್ರತಿಮೆ ಪ್ರತಿಷ್ಠಾಪಿಸಿ ಪೂಜಿಸುವುದು ಎಷ್ಟುಸರಿ?????
ನಿಮಗೆ ಜಯ ಸುವರ್ಣರ ನಾಯಕತ್ವ ವ್ಯಕ್ತಿತ್ವ ಸ್ಫೂರ್ತಿ ಪ್ರೇರಣೆ ನೀಡಿದ್ದರೆ ನೀವೂ ಅವರ ಪ್ರತಿಮೆಯನ್ನು ನಿಮ್ಮ ಮನೆಯಲ್ಲಿಟ್ಟುಪೂಜಿಸಿ ಆರಾಧಿಸಿ..ಇದರಿಂದ ಯಾರಿಗೂ ಯಾವುದೇ ಅಭ್ಯಂತರವಿಲ್ಲ. ಆದರೇ ಸಮಾಜ ಭಾಂಧವರ ಬಿಲ್ಲವ ಭವನದಲ್ಲಿ ಖಂಡಿತಾಅಲ್ಲಾ.
ಪ್ರಸ್ತುತ ಬಡತನದಿ ಬಳಲುವ ಸೂರಿಲ್ಲದೆ ಒಂದು ಹೊತ್ತಿನ ತುತ್ತಿಗೂ ತತ್ತರಿಸಿ ಕಣ್ಣೀರಿಡುವ ಸಾವಿರಾರು ಬಡ ಪರಿವಾರಕುಟುಂಬಗಳು ನಮ್ಮ ಬಿಲ್ಲವ ಸಮಾಜದಲ್ಲಿದ್ದಾರೆ….
ಅವರ ನೋವಿಗೆ ಕಷ್ಟಕ್ಕೆ ಸ್ಪಂದಿಸಿ ಜನಸೇವೆ ಮಾಡಿ.. ಅದು ಬಿಟ್ಟು ಮೂರ್ತಿ ಪ್ರತಿಮೆ ಎಂದು ಕಿಚ್ಚಾಡಬೇಡಿ..
ಜಯ ಸುವರ್ಣರ ಸೇವೆ ಸಮಾಜ ಗುರುತಿಸಿದರೆ ಒಮ್ಮತದ ನಿರ್ಧಾರದಿಂದ ಅವರ ಪ್ರತಿಮೆ ಪ್ರತಿಷ್ಠಾಪನೆ ಎಲ್ಲಿಯೂ ಆಗಬಹುದು.
ಅದು ಬಿಟ್ಟು ಹಣ ಅಂತಸ್ತಿನ ಪ್ರಭಾವದಿಂದ ತಮ್ಮ ಮನೋ ಇಚ್ಚಿತದಂತೆ ಬಿಲ್ಲವ ಸಮಾಜದ ಆಸ್ತಿ ಸಮುದಾಯಭವನದಲ್ಲಿಯಲ್ಲಿಯಂತೂ ಆಗಲು ನಮ್ಮ ಸಂಘಟನೆ ಖಂಡಿಸಿ ವಿರೋಧಿಸುತ್ತಿದೆ.
ನಮ್ಮ ಸಂಘಟನೆಗೆ ಯಾರೊಂದಿಗೂ ವೈಯುಕ್ತಿಕ ದ್ವೇಷವಿಲ್ಲ..
ಜಯ ಸುವರ್ಣರಂತಹ ನೂರಾರು ನಾಯಕರು ಬೆಳೆದು ಬರಲಿ… ಬೆಳೆದು ನಿಲ್ಲಲು ಯುವ ನಾಯಕರಿಗೆ ಅವಕಾಶ ಮಾಡಿ ಕೊಡಿಅದು ಬಿಟ್ಟು ಅವರನ್ನೇ ಮಹಾತ್ಮರನ್ನಾಗಿ ಪೂಜಿಸುವುದನ್ನು ಈಗಲಾದರೂ ಬಿಟ್ಟು ಬಿಡಿ.
ಈ ನಿಟ್ಟಿನಲ್ಲಿ ಬಿಲ್ಲವ ಭವನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಖಂಡಿಸುವಲ್ಲಿ ಬಿರುವೆರ್ ಕುಡ್ಲ ಸಂಘಟನೆಯೊಂದಿಗೆ ತವರೂರ ಇನ್ನೂಕೆಲವು ಸಮಾಜಪರ ಇನ್ನೂ ಹಲವು ಸಂಘ ಸಂಸ್ಥೆ ಸಂಘಟನೆಯು ನಮ್ಮೊಂದಿಗಿದ್ದು ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ
ಯಾವುದೇ ಪ್ರತಿಭಟನೆ ಹೋರಾಟಕ್ಕೂ ಸಿದ್ದರಿದ್ದೇವೆ ಎಂಬ ಸಾಂಕೇತಿಕ ಎಚ್ಚರಿಕೆಯ ಸೂಚನೆಯನ್ನು ಪ್ರತಿಮೆ ಪ್ರತಿಷ್ಠಾಪನೆಯಬೇಡಿಕೆಯಿತ್ತ ಚೇಲಾಗಳಿಗೆ ನೀಡುತ್ತಿದ್ದೇವೆ.
ಯಾವುದೇ ಆತುರದ ನಿರ್ಧಾರ ನಿರ್ಣಯ ಕೈಗೊಂಡು ಮುಂದೆ ಆಗುವ ಅನಾಹುತ ಮುಜುಗರಕ್ಕೆತಾವು ಒಳಗಾಗದಿರಿ… ನೆನಪಿಡಿ.
ವ್ಯಕ್ತಿ ಪೂಜೆ.. ಮೂರ್ತಿ ಪೂಜೆಯನ್ನು ಬದಿಗಿರಿಸಿ ಸಮಾಜದ ಕಣ್ಣೀರೋರೆಸುವ ಕಾರ್ಯಕ್ಕೆ ಪಣ ತೊಡೋಣ..
ಬಿಲ್ಲವ ಭವನದಲ್ಲಿ ಜಗದ್ಗುರು ಶ್ರೀ ನಾರಾಯಣ ಗುರುಗಳ ಪ್ರತಿಮೆ ಒಂದೇ ಸಾಕು. ಅನ್ಯತಾ ಯಾವ ಜನನಾಯಕನ ಪ್ರತಿಮೆಪ್ರತಿಷ್ಠಾಪನೆಯ ಅಗತ್ಯವೇ ಇಲ್ಲ…
ಜೈ ಗುರುದೇವ.. ಜೈ ಬಿಲ್ಲವ
ಸದಾ ನಿಮ್ಮೊಂದಿಗೆ,
️ಉದಯ ಪೂಜಾರಿ ಬಳ್ಳಾಲ್ ಬಾಗ್
(ಬಿರುವೆರ್ ಕುಡ್ಲ )
ಜೈ ಬಿರುವೆರ್ ಕುಡ್ಲ