ಬಿಲ್ಲವ ಸೇವಾ ಸಮಾಜ (ರಿ) ಗರೊಡಿ, ಇದರ 2021-22 ನೇ ಸಾಲಿನ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪ್ರತಿಭಾ ಪುರಸ್ಕಾರಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂಘದ ಅಧ್ಯಕ್ಷರಾದ ಶ್ರೀ ಭರತೇಶ್ ಅಮೀನ್ ಅಧ್ಯಕ್ಷತೆಯಲ್ಲಿ ಕಂಕನಾಡಿ ಗರೋಡಿಬಳಿಯಿರುವ ಸಂಘದ ಸಭಾ ಭವನದಲ್ಲಿ ಇತ್ತಿಚೆಗೆ ನಡೆಯಿತುಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಂಕನಾಡಿ ಕ್ಷೇತ್ರದ ಅಧ್ಯಕ್ಷರು ಶ್ರೀ ಕೆ. ಚಿತ್ತರಂಜನ್, ಕುವೈಟ್ಬಿಲ್ಲವ ಸಂಘದ ಸಲಹೆಗಾರರಾದ ಶ್ರೀ ಸತೀಶ್ ಕುಂದರ್, ಸೌದಿ ಅರೇಬಿಯಾದ ಮಂಗಳೂರು ಅಸೋಸಿಯೇಶನ್ ದಮ್ಮಾಮ್ಇದರ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್, ಸೈಂಟ್ ಆಗ್ನೇಸ್ ಕಾಲೆೇಜ್ ಮಂಗಳೂರು ಇದರ ಪ್ರಾಧ್ಯಾಪಕರಾದಡಾ। ಅರುಣ್ ಉಳ್ಳಾಲ್, ಸರ್ವಜ್ಞ ಅಕಾಡೆಮಿಯ ಸ್ಥಾಪಕರಾದ ಶ್ರೀ ಸುರೇಶ್ ಕುಮಾರ್ ಮುಂತಾದ ಗಣ್ಯರು ಸಂದರ್ಭೋಚಿತವಾಗಿಮಾತನಾಡಿದರು. ಹಾಗೂ ಸಂಘದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷರಾದ ಶ್ರೀ ಭರತೇಶ್ ಅಮೀನ್ ರವರು ಸಂಘ ನಡೆದು ಬಂದ ದಾರಿ ಹಾಗೂ ತನ್ನ ಒಂದು ವರ್ಷದ ಅಧಿಕಾರದಅವಧಿಯಲ್ಲಿ ನಡೆದ ಕಾರ್ಯಕ್ರಮಗಳು ಹಾಗೂ ಮುಂದಿನ ಅವಧಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತಮ್ಮೆಲ್ಲರ ಸಹಕಾರಅಗತ್ಯವೆಂದು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು. ಸಭಾ ಕಾರ್ಯಕ್ರಮದ ವೇಧಿಕೆಯಲ್ಲಿ ಕರ್ನಾಟಕ ಸರಕಾರದ “ಸಹಕಾರಿ ರತ್ನ” ಪ್ರಶಸ್ತಿ ವಿಜೇತ. ಆತ್ಮಶಕ್ತಿ ವಿವಿಧೋದ್ದೆಶ ಸಹಕಾರಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್, ಸರ್ವಜ್ಞ ಅಕಾಡೆಮೆಯ ಸ್ಥಾಪಕರಾದ ಶ್ರೀ ಸುರೇಶ್ ಕುಮಾರ್ ಮತ್ತು ಜಿಲ್ಲಾರಾಜೋತ್ಸವ ಪ್ರಶಸ್ತಿ ಪುರಸ್ಕೃತ ಡಾ। ಅರುಣ್ ಉಳ್ಳಾಲ್ ಇವರನ್ನು ವೇದಿಕೆಯಲ್ಲಿದ್ದ ಗಣ್ಯರಿಂದ ಸನ್ಮಾನಿಸಲಾಯಿತು.ಈ ಸಾಲಿನ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಶ್ರೀ ಜಯ ಪೂಜಾರಿಯವರು ಮತ್ತು ಲೆಕ್ಕಪತ್ರವನ್ನು ಕೋಶಾಧಿಕಾರಿ ಶ್ರೀಪದ್ಮನಾಭ ಮರೋಳಿಯವರು ಓದಿ ಸಭೆಗೆ ತಿಳಿಸಿದರು.
ಉಪಾಧ್ಯಕ್ಷೆ ಶ್ರೀಮತಿ ಮಮತರವರು ನಿರ್ಣಯ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಜಯ ಪೂಜಾರಿಯವರು ಸ್ವಾಗತವನ್ಮುಹಾಗೂ ಜೊತೆ ಕಾರ್ಯದರ್ಶಿ ಶ್ರೀ ನರೇಶ್ ರವರು ಧನ್ಯವಾದವನ್ನು ಮತ್ತು ವಿದ್ಯಾರ್ಥಿ ವೇತನ ವಿತರಣಾ ಮತ್ತು ಪ್ರತಿಭಾ ಪುರಸ್ಕಾರಸನ್ಮಾನ ಕಾರ್ಯಕ್ರಮವನ್ಮು ವಿದ್ಯಾ ರವರು ಸಮಿತಿ ಸಂಚಾಲಕರಾದ ಶ್ರೀ ರಮಾನಂದ ಕೆ ನೆರವೇರಿಸಿದರು ಹಾಗೂ ಶ್ರೀ ಭಾಸ್ಕರ್ಕೊಟ್ಯಾನ್ ರವರು ಕಾರ್ಯಕ್ರಮ ನಿರ್ವಹಿಸಿದರು