TOP STORIES:

FOLLOW US

ಬೆಳ್ಳಿ ಪರದೆಯ ಭರವಸೆಯ ನಾಯಕ ನಟ ಪ್ರಶಾಂತ್ ಪೂಜಾರಿ


ಬೆಳ್ಳಿ ಪರದೆಯ ಭರವಸೆಯ ನಾಯಕ ನಟ ಪ್ರಶಾಂತ್ ಪೂಜಾರಿ


ಹೆತ್ತವರಲ್ಲಿರುವ ಸಾಮಾನ್ಯ ಮನಸ್ಥಿತಿಯೆಂದರೆ, ತಮ್ಮ ಮಗು ಅವರು ಕನಸು ಕಂಡ ಜೀವನವನ್ನು ನಡೆಸಬೇಕೆಂಬುದು. ತಮಗೆ ಸಾಧಿಸಲು ಅಸಾಧ್ಯವಾದದ್ದನ್ನು ಮಕ್ಕಳು ಸಾಧಿಸಬೇಕೆನ್ನುವ ಆಶಯ.ಎಲ್ಲರಲ್ಲೂ ಒಂದಿಲ್ಲೊಂದು ಪ್ರತಿಭೆಯಿರುತ್ತದೆ; ಮಣ್ಣಿನೊಳಗಿನ ಚಿನ್ನದಂತೆ. ಸೂಕ್ಷ್ಮವಾಗಿ ಗಮನಿಸುವ ಪ್ರವೃತ್ತಿಯುಳ್ಳ ಶಿಕ್ಷಕರು ಅಥವಾ ಪೋಷಕರು ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಕಂಡುಹಿಡಿಯಬಲ್ಲರು. ಚಿತ್ರಕಲೆ, ಸಂಗೀತ, ಸಾಹಿತ್ಯ, ಕ್ರೀಡೆ ಇವುಗಳ ಹೊರತಾಗಿಯೂ ಮಗುವಿನಲ್ಲಿ ಎಲೆಮರೆಯಾಗಿರುವ ಅನೇಕ ಪ್ರತಿಭೆಗಳು ತಮಗೆ ದಕ್ಕಿದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ವಿವಿಧ ಕ್ಷೇತ್ರದಲ್ಲಿ ಸಾಧಕರಾಗಿ ಮಿಂಚುತ್ತಾರೆ. ತನ್ನ ತಾಯಿಯ ಆಶಯವನ್ನು ಈಡೇರಿಸಿಕೊಳ್ಳಬೇಕೆನ್ನುವ ಛಲದೊಂದಿಗೆ ಕಠಿಣ ಪರಿಶ್ರಮದೊಂದಿಗೆ ಮಾಡೆಲಿಂಗ್, ಕಿರುತೆರೆ ಬೆಳ್ಳಿತೆರೆಯಲ್ಲಿ ತನ್ನ ಅಮೋಘ ಅಭಿನಯದ ಮುಖೇನ ಗುರುತಿಸಿಕೊಂಡಿರುವ ಪ್ರಶಾಂತ್ ಪೂಜಾರಿ. ಇವರ
ಕಲಾಕ್ಷೇತ್ರದ ಕಿರು ಅವಲೋಕನ ಇಲ್ಲಿದೆ.

ಬಾಲ್ಯದಲ್ಲಿಯೇ ನ್ರತ್ಯ ಮತ್ತು ಅಭಿನಯದ ಗೀಳನ್ನು ಅಂಟಿಸಿಕೊಂಡಿರುವ ಪ್ರಶಾಂತ್ ಪೂಜಾರಿ ಶಾಲಾ ದಿನಗಳಲ್ಲಿಯೇ ನ್ರತ್ಯ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳ ಸರಮಾಲೆಯನ್ನು ತನ್ನ ಮುಡಿಗೆರಿಸಿಕೊಂಡವರು. ತನ್ನಲ್ಲಿರುವ ಹವ್ಯಾಸಕ್ಕೆ ಹೊಸ ರೂಪ ಕೊಡಲು ಹವಣಿಸುತ್ತಾ ಮಾಡೆಲಿಂಗ್ ಕ್ಷೇತ್ರದಲ್ಲೂ ತನ್ನ ಪ್ರತಿಭೆಯನ್ನು ಬಿತ್ತರಿಸುತ್ತಾ ತಾನು ಕಲಿಯುತ್ತಿರುವ ಕಾಲೇಜಿನಲ್ಲಿ *”ಬೆಸ್ಟ್ ಮಾಡೆಲ್ ಆಫ್ ದ ಇಯರ್”* ಕಿರೀಟವನ್ನು ಮುಡಿಗೆರಿಸಿಕೊಂಡಿರುವರು.ತನ್ನ ಕಾಲೇಜ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಬಳಿಕ ಕಂಪನಿ “ಸೆಕ್ರೆಟರಿ ಕೋರ್ಸ್” ಮಾಡುತ್ತಿರುವ ಸಂಧರ್ಭ ತಾಯಿಯ ಆಕಸ್ಮಿತ ಅಗಲುವಿಕೆಯಿಂದಾಗಿ ಕೋರ್ಸ್ ಪೂರ್ಣಗೊಳಿಸಲಾದೆ ಮನೆ ಜವಾಬ್ಧಾರಿಯ ನಿಮಿತ್ತ ಜಿಮ್ ಟ್ರೈನರ್ ಆಗಿ ಕಾರ್ಯ ನಿರ್ವಹಿಸುತ್ತಿರುವುದು ಅನಿವಾರ್ಯವಾಯಿತು. ತನ್ನ ಮಗ ಚಿತ್ರರಂಗದಲ್ಲಿ ಮಿನುಗಬೇಕೆನ್ನುವ ತಾಯಿಯ ಹಂಬಲ ಆಶಯವನ್ನು ಹೇಗಾದರೂ ಮಾಡಿ ಈಡೇರಿಕೊಳ್ಳಬೇಕೆನ್ನುವ ಛಲದೊಂದಿಗೆ ಅದಕ್ಕಾಗಿ ಅವಿರತವಾಗಿ ಶ್ರಮಿಸತೊಡಗಿದರು.
ಜಿಮ್ ಟ್ರೈನಿಂಗ್ ಮಾಡುವ ಜೊತೆ ಜೊತೆಯಲ್ಲಿ ಮಾಡೆಲಿಂಗ್ ಕೂಡ ಮಾಡುತ್ತಾ ಅಭಿನಯ ಕಲೆಯನ್ನು ಕಲಿತುಕೊಂಡರು. ಇವರ ಪರಿಶ್ರಮದ ಪಲಶ್ರುತಿಯಾಗಿ 2015 ರಲ್ಲಿ ಪ್ರಥಮ ಬಾರಿಗೆ ಬಾಡಿ “ಮಾಸ್ ಗೈನರ್” ಜಾಹೀರಾತಿನಲ್ಲಿ ಕೆಲಸ ಮಾಡುವ ಆವಕಾಶ ದೊರೆಯಿತು. ನಂತರ 2017ರಲ್ಲಿ ಬಿಲ್ಲವರ ಅಸೋಶಿಯೇಷನ್ ಮುಂಬಯಿ ಪ್ರಸ್ತುತಿಯಲ್ಲಿ ಜರಗಿದ “ಮಿಸ್ಟರ್ ಅಂಡ್ ಮಿಸ್ ಬಿಲ್ಲವ 2017” ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸ್ಟರ್ ಬಿಲ್ಲವ 2017 ಕಿರೀಟ ಸೇರಿದಂತೆ ಮಿಸ್ಟರ್ ಅಂಡ್ “ಮಿಸ್ ಕರ್ನಾಟಕ 2017” ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ರನ್ನರ್ ಅಪ್ ಕಿರೀಟವನ್ನು ಮುಡಿಗೆರಿಸಿಕೊಂಡರು ತದನಂತರ 2018ರಲ್ಲಿ ರುದ್ರ ಎಂಟರ್ ರ್ಟೈನ್ಮೆಂಟ್
ಆಯೋಜಿಸಿದ “ಮಿಸ್ಟರ್ ಅಂಡ್ ಮಿಸ್ ಕರಾವಳಿ 2018” ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿರುವ ಪ್ರಶಾಂತ್ ಪೂಜಾರಿ ಅವರಿಗೆ “ಜೈ ಹನುಮಾನ್”, “ವಿಷ್ಣು ದಶವತಾರ” “ಮಹಾಕಾಲಿ’ ಮುಂತಾದ ಹಲವಾರು ಕನ್ನಡ ಧಾರಾವಾಹಿಗಳಲ್ಲಿ ವಿವಿಧ ಪಾತ್ರದಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ತನಗೆ ದಕ್ಕಿದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರು.
ಆಕರ್ಷಕ ಮೈಕಟ್ಟು ಹಾಗೂ ದೇಹದಾರ್ಡ್ಯವನ್ನು ಹೊಂದಿರುವ ಇವರು ಆನ್ ಫ್ರೆಂಡ್ ಹಿಂದಿ ಚಲನ ಚಿತ್ರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿ ಜನಮನ್ನಣೆ ಪಡೆದರು. ಇದರ ಜೊತೆಗೆ ಅಂಡ್ ಟಿವಿ ಯಲ್ಲಿ ಪ್ರಸಾರಗೊಳ್ಳುತ್ತಿದ್ದ “ಲಾಲ್ ಇಶ್ಕ್” ಧಾರಾವಾಹಿಯಲ್ಲಿ ನಿರಂತರ 22 ಕಂತುಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ಮಾತ್ರವಲ್ಲದೆ “ಹೈವಾನ್”, ಹಿಂದಿ ಧಾರಾವಾಹಿ ಸೇರಿದಂತೆ ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗುತ್ತಿದ್ದ “ಇಮ್ಲಿ”,
“ಮೇರೆಸಾಯಿ”, “ದೇವಿ” “ಲವ್ ಕುಶ್”
ಸೋನಿ ಟೀವಿಯ “ಹೀರೊ” ಮತ್ತು “ಅಲ್ಲಾದೀನ್”, ಸಬ್ ಟೀವಿ ಯ ” ಆಪ್ಕಾ ಟೈಮ್ ಬಿ ಆಯೇಗಾ”, ಝೀ ಟೀವಿಯ ” ನಮಕ್ ಇಶ್ಕ್ ಕಾ” ಕಲರ್ಸ್ ಚಾನೆಲ್ ನ “ಶಾದಿ ಮುಬಾರಕ್” ಸೇರಿದಂತೆ “ಜೀಜಾಮಾತ” ಮರಾಠಿ ಧಾರಾವಾಹಿಯಲ್ಲೂ ವಿವಿಧ ಪಾತ್ರಗಳ ಮುಖೇನ ಅಭಿನಯಿಸಿದ ಕೀರ್ತಿಗೆ ಬಾಜನರಾಗಿದ್ದಾರೆ. ನಾಮಾಂಕಿತ ನಿರ್ದೇಶಕ ಶ್ರೀಖಾಂತ್ ಬಶೀರ್ ಹಾಗೂ ಹಿಂದಿ ಚಲನಚಿತ್ರ ನಟ ಸಲ್ಮಾನ್ ಖಾನ್ ಪ್ರಾಡಕ್ಷನ್ ನ ವೆಬ್ ಸೀರಿಸ್ ನಲ್ಲೂ ಕೆಲಸ ಮಾಡಿದ ಅನುಭವವುಳ್ಳ ಪ್ರಶಾಂತ್ ಇವರು 2019ರಲ್ಲಿ ಮಂಗಳೂರು ಯೂನಿವರ್ಸಟಿ ಮತ್ತು ವಿಬ್ನೋರ್ ಇಂಟರ್ ನ್ಯಾಷನಲ್ ಸ್ಕೂಲ್ ವಾಶಿ ಆಯೋಜಿಸಿದ ಫ್ಯಾಷನ್ ಶೋ ಮತ್ತು ಡಾನ್ಸ್ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2018ರಲ್ಲಿ ಉದಯ ಪೂಜಾರಿ ಬಳ್ಳಾಲ್ ಬಾಗ್ ಸಾರಥ್ಯದ “ಬಿರ್ವೆರ್ ಕುಡ್ಲ” ನೇತೃತ್ವದಲ್ಲಿ ಮಿಸ್ಟರ್ ಆಂಡ್ ಮಿಸ್ ಮಂಗಳೂರು ಸೌಂದರ್ಯ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿದ ಶ್ರೇಯಸ್ಸಿಗೆ ಪಾತ್ರರಾಗಿರುವ ಪ್ರಶಾಂತ್ ಪೂಜಾರಿ ಪ್ರಸ್ತುತ “ಅಕ್ಷರ ಧಾಮ”, “ಗುಲ್ಕಂದಾ ಟೇಲ್ಸ್”, ರುಧ್ರ ಕಾಲ್” ಮುಂತಾದ ವೆಬ್ ಸೀರಿಸ್ ನಲ್ಲಿ ವ್ಯಸ್ತವಾಗಿದ್ದಾರೆ.
ಇಷ್ಟೆಲ್ಲಾ ಸಾಧನೆಯ ಕೀರ್ತಿಗೆ ಬಾಜನರಾಗಿರುವ ಪ್ರಶಾಂತ್ ಪೂಜಾರಿ ಇವರು ಡೊಂಬಿವಲಿ ಪೂರ್ವ ನಿವಾಸಿ ಮೂಲತಃ ಬೇಗಾರ್ ಕೈಮರ ಶೃಂಗೇರಿ ತಾಲೂಕಿನ ಕುಮಾರ ಐತ ಪೂಜಾರಿ ಮತ್ತು ಉಡುಪಿ ತಾಲೂಕು ಹಾವಂಜೆ ಇರ್ಮಾಡಿ ಬೆಟ್ಟು ದಿ. ಶಕುಂತಲಾ ಪೂಜಾರಿ ಇವರ ಸುಪುತ್ರರಾಗಿ ಜನಿಸಿ ಗುರುನಾನಕ ಇಂಗ್ಲಿಷ್ ಸ್ಕೂಲ್ ಕೊಲಬಾ ಇಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ವನ್ನು ಪೂರೈಸಿ ಸೈ0ಟ್ ಕ್ಲೇವಿಯರ್ಸ್ ಕಾಲೇಜಿನಲ್ಲಿ ಸಿ ಎಸ್ ಟಿ ಪದವಿಯನ್ನು ಪೂರ್ಣಗೋಳಿಸಿದ್ದಾರೆ. ಧರ್ಮ ಪ್ರೊಡಕ್ಷನ್ ನಿರ್ಮಾಣದ ಆಯನ್ ಮುಖರ್ಜಿ ನಿರ್ದೇಶನದ ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಮತ್ತು ನಾಗರ್ಜುನ್ ಇವರು ಪ್ರಮುಖ ಭೂಮಿಕೆಯಲ್ಲಿರುವ “ಬ್ರಹ್ಮಾಸ್ತ್ರ”
ಹಿಂದಿ ಚಲನಚಿತ್ರದಲ್ಲಿ ಪ್ರಶಾಂತ್ ಪೂಜಾರಿ ಅಭಿನಯಿಸಿದ್ದು ಇವರ ನಟನಾ ಪ್ರತಿಭೆಗೆ ಹೊಸ ಆಯಾಮ ನೀಡಿದೆ.
ಕಿರುತೆರೆ ಚಿತ್ರರಂಗದಲ್ಲೇ ತನ್ನ ಭವಿಷ್ಯವನ್ನು ರೂಪಿಸಿ ತುಳುನಾಡು ಹಾಗೂ ತನ್ನ ಮಾತಾಪಿತರ ಕೀರ್ತಿಯನ್ನು ಬೆಳಗಿಸಬೇಕು ಎನ್ನುವ ಇವರು ಸರಳ ಸೌಮ್ಯ ವ್ಯಕ್ತಿತ್ವದೊಂದಿಗೆ ಸಾವಿರಾರು ಅಭಿಮಾನಿ ಬಳಗದೊಂದಿಗೆ ಗುರುತಿಸಿಕೊಂಡಿದ್ದಾರೆ.
ಉದಯೋನ್ಮುಖ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಅವರಿಗೂ ಹೊಸ ವೇದಿಕೆಗಳನ್ನು ದಕ್ಕಿಸಿಕೊಡುವಲ್ಲಿ ಬಲು ಆಸಕ್ತಿಯನ್ನು ಹೊಂದಿರುವ ಪ್ರಶಾಂತ್ ಪೂಜಾರಿ ಇವರಿಗೆ ಹಿಂದಿ ಮಾತ್ರವಲ್ಲದೆ ತುಳು ಕನ್ನಡ ಚಿತ್ರರಂಗದಲ್ಲೂ ಉತ್ತಮ ಅವಕಾಶಗಳು ಒದಗಿ ಬರಲಿ ಎಂಬ ಆಶಯ ನಮ್ಮದು.
ಸಂಪರ್ಕ
ಪ್ರಶಾಂತ್ ಪೂಜಾರಿ
9619617990
Email: poojariprashant10@gmail.com

✒️ಬರಹ :ಪ್ರಭಾಕರ ಬೆಳುವಾಯಿ

 

www.billavaswarriors.com


Share:

More Posts

Category

Send Us A Message

Related Posts

ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಬೆಸ್ಟ್ ಚೇರ್ಮನ್ ಅವಾರ್ಡ್


Share       ಮಲ್ಟಿ ಸ್ಟೇಟ್ ಸಹಕಾರಿ ಬ್ಯಾಂಕ್ ಗಳಲ್ಲಿ  ಒಂದಾದ ಮುಂಬೈಯ ಪ್ರತಿಷ್ಠಿತ *ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರ ದಕ್ಷ  *ಬೆಸ್ಟ್ ಚೇರ್ಮನ್* ಪ್ರಶಸ್ತಿಯನ್ನು *ಭಾರತ ಸರಕಾರದ ಜನರಲ್ ಮಿನಿಸ್ಟ್ರಿ ಆಫ್ ಕಮ್ಯುನಿಕೇಶನ್ಸ್


Read More »

ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ


Share       ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿ ಎಚ್. ಡಿ ಕೋರ್ಸ್ ವರ್ಕ್ ನ ಸಲುವಾಗಿ ಜಯ ಸುವರ್ಣರ ಕುರಿತು ಶೋಧ ಪ್ರಬಂಧವನ್ನು


Read More »

ಬೆಳ್ತಂಗಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರರ ಹೆಸರಿಡಲು ಮನವಿ


Share       ಬೆಳ್ತಂಗಡಿ: 5 ಬಾರಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿ, ಕಳೆದ 50 ವರ್ಷದಲ್ಲಿ ಕ್ಷೇತ್ರದ ಬಡ ಜನತೆಯ ಧ್ವನಿಯಾಗಿ ಕೆಲಸ ಮಾಡಿ ಇಹಲೋಕ ತ್ಯಜಿಸಿದ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸ್ಥಾಪನೆಗೆ ಕಾರಣಕರ್ತರು ಹಾಗೂ


Read More »

ಚಿರನಿದ್ರೆಗೆ ಜಾರಿದ ಮಾಜಿ ಶಾಸಕ ಕೆ. ವಸಂತ ಬಂಗೇರ ಮೇ9 ರಂದು (ನಾಳೆ) ಬೆಳಿಗ್ಗೆ ಹಳೆಕೋಟೆ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನ


Share       ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಐದು ಬಾರಿ ಶಾಸಕರಾಗಿ ತಾಲೂಕಿನ ಅಭಿವೃದ್ಧಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದ ನೇರ ನಡೆನುಡಿಯ, ದಿಟ್ಟ ಹೋರಾಟಗಾರ, ಭ್ರಷ್ಟಾಚಾರಿಗಳಿಗೆ ದುಃಸ್ವಪ್ನರಾಗಿದ್ದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು


Read More »

ಬಿಲ್ಲವ ಸಮಾಜದ ಭರವಸೆಯ ಸೂರ್ಯ ಜನ್ಮದಿನದ ಸಲುವಾಗಿ ನುಡಿ ಬರಹ


Share       ಎರಡು ವರ್ಷಗಳ ಹಿಂದೆ ಜಯ ಸುವರ್ಣರ ಕುರಿತು ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ಅವರ ಮಗ ಸೂರ್ಯಕಾಂತ್ ಸುವರ್ಣರನ್ನು ಸಂದರ್ಶನ ಮಾಡಲು ಗೊರೆಗಾವ್‍ನಲ್ಲಿರುವ ಜಯ ಸುವರ್ಣರ ಕಚೇರಿಗೆ ಮೊದಲ ಬಾರಿ ಭೇಟಿ ನೀಡಿದ್ದೆ. ಜಯ ಸುವರ್ಣರನ್ನೇ


Read More »

ಕಿನ್ನಿಗೋಳಿ: ಬುಡಸಹಿತ ಧರೆಗುರುಳಿದ ಅವಳಿ ವೀರರನ್ನು ತೊಟ್ಟಿಲು ಕಟ್ಟಿ ತೂಗಿದ್ದ ತಾಕೊಡೆ ಮರ ಇನ್ನು ನೆನಪು ಮಾತ್ರ


Share       ಕಾಂತಬಾರೆ – ಬೂದಬಾರೆ ಆಡಿ ಬೆಳೆದುದಕ್ಕೆ ಸಾಕ್ಷಿಯಾಗಿದ್ದ ಮರ ಇನ್ನು ನೆನಪು ಮಾತ್ರ ಮೂಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ- ಬೂದ ಬಾರೆ ಜನ್ಮಕ್ಷೇತ್ರ ಕಾಂತಬಾರೆ – ಬೂದಬಾರೆ ಆಡಿ ಬೆಳೆದುದಕ್ಕೆ ಸಾಕ್ಷಿಯಾಗಿದ್ದ ಮರ


Read More »