ಪಾಲಡ್ಕ ಗ್ರಾಮದ ಕೇಮಾರು ಹೋಂಡೆಲುವಿನ ಅಸಹಾಯಕ ವೃದ್ಧ ದಂಪತಿಗಳಾದ ಸುಶೀಲ-ದೂಜ ಪೂಜಾರಿ ಯವರಿಗೆಯವರಿಗೆ ಯುವವಾಹಿನಿ ರಿ. ಮೂಡಬಿದಿರೆಯ ಘಟಕದ ವತಿಯಿಂದ ಸ್ಟೀಲ್ ಕಪಾಟು ನೀಡಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ರಿ ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ, ಬ್ರಹ್ಮ ಶ್ರೀ ಗುರುನಾರಾಯಣ ಸಂಘ ಪಾಲಡ್ಕ ದ ಅಧ್ಯಕ್ಷರಾದ ಸುಧಾಕರ್ ಅಮೀನ್, ಮಾಜಿ ಅಧ್ಯಕ್ಷರಾದ ನಾರಾಯಣ ಪೂಜಾರಿ ಕೋರಗಲ್ಲು, ಯುವವಾಹಿನಿ ರಿ ಮೂಡುಬಿದಿರೆ ಘಟಕದ ಸ್ಥಾಪಕ ಅಧ್ಯಕ್ಷರಾದ ರಾಜೇಶ್ ಡಿ. ಕೋಟ್ಯಾನ್,ಆರೋಗ್ಯ ನಿರ್ದೇಶಕರಾದ ಪಾವನ ಸಂತೋಷ್ ಸಾಲ್ಯಾನ್, ಸ್ಪೂರ್ತಿ ವಿಶೇಷ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿಗಾರ್, ಮೂಡುಬಿದಿರೆ ಕುಮಾರ್ ಎಲೆಕ್ಟ್ರಿಕಲ್ ನ ಪ್ರವೀಣ್ ಮತ್ತು ಅಶೋಕ್ ಈ ಸಮಯದಲ್ಲಿ ಉಪಸ್ಥಿತಿಯಲ್ಲಿ ಇದ್ದರು. ಸ್ಟಿಲ್ ಕಪಾಟಿನ ಸಾಗಾಟಕ್ಕೆ ವಾಹನ ವ್ಯವಸ್ಥೆಯನ್ನು ನೀಡಿದ ಕುಮಾರ್ ಪೂಜಾರಿ ಇರುವೈಲ್ ಇವರಿಗೆ ತಮಗೆ ಎಲ್ಲರಿಗೂ ಧನ್ಯವಾದಗಳು.





