ಯುಎಇ: ಮಕ್ಕಳ ಪ್ರತಿಭೆಗೆ ಸೂಕ್ತ ಸಮಯದಲ್ಲಿ ಪ್ರೋತ್ಸಾಹ ನೀಡಿದರೆ ಮುಂದೆ ಜನ ಮನದ ಮೆಚ್ಚುಗೆಗೊಂದು ಮುನ್ನುಡಿಯಾಗುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವೊಂದು ಇಲ್ಲಿದೆ. ಈ ಇಬ್ಬರು ಬಾಲ ಪ್ರತಿಭೆಗಳು ಸಂಗೀತದಲ್ಲಿ ಆಸಕ್ತಿ ಬೆಳೆಸಿದ್ದು ಇವರ ಮನೆಯವರು ಹಾಗೂ ಬಂಧು ಮಿತ್ರರು ನೀಡಿದ ಪ್ರೋತ್ಸಾಹದಿಂದಾಗಿ ಇದೀಗ ಯೂಟ್ಯೂಬ್ ಚಾನೆಲ್ ನಲ್ಲಿ ಭಕ್ತಿ ಪ್ರಧಾನ ಅಲ್ಬಂ ಸಾಂಗ್ ಹಾಡಿ ಸ್ವತಃ ಅಭಿನಯಿಸುವ ಮೂಲಕ ಸ್ವದೇಶ ಹಾಗೂ ವಿದೇಶದ ಸಂಗೀತ ಪ್ರೇಮಿಗಳ ಪ್ರೋತ್ಸಾಹಕ್ಕೆ ಪಾತ್ರರಾಗಿದ್ದಾರೆ. ದುಬೈಯ ಕಿರಣ್ ಸಿದ್ದು ಪೂಜಾರಿ ಮತ್ತು ಶ್ರೀಮತಿ ಅಂಬಿಕಾ ಕಿರಣ್ ಅವರ ಮಕ್ಕಳಾದ ದಿಯಾ ಕಿರಣ್ ಹಾಗೂ ದಿಶಾ ಕಿರಣ್ ಎಂಬ ಬಾಲ ಪ್ರತಿಭೆಗಳೇ ಈ ರೀತಿ ಜನ ಮೆಚ್ಚಿಗೆಗೆ ಪಾತ್ರರಾದವರು.
ಅಕ್ಷಯ ಯೂಟ್ಯೂಬ್ ಚಾನೆಲ್ ಮೂಲಕ ಇವರ ಧ್ವನಿಯಲ್ಲಿ ಮೂಡಿ ಬಂದಿರುವ”ಕೊಲ್ಲೂರ ಮೂಕಾಂಬಿಕೆ” ಎಂಬ ಭಕ್ತಿಪ್ರಧಾನ ಗೀತೆ ಇಂದು ಸಂಗೀತ ಲೋಕಕ್ಕೊಂದು ಕೊಡುಗೆಯಾಗಿದೆ.
ದಾಶು ಕೋಟ್ಯಾನ್ ಸಾಹಿತ್ಯ ಹಾಗೂ ಸಂಕಲನ ನಿರ್ವಹಿಸಿದ ಈ ಭಕ್ತಿಗೀತೆಯನ್ನು ಬಾಲಪ್ರತಿಭೆಗಳಾದ ದಿಯಾ ಕಿರಣ್ ಹಾಗೂ ದಿಶಾ ಕಿರಣ್ ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಾರೆ. ಅನೀಶ್ ಎಸ್.ಕಿನ್ನಿಗೋಳಿ ಛಾಯಾಗ್ರಹಣ ನಡೆಸಿದ್ದಾರೆ.
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಈ ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಿದ್ದರು. ಈ ಸಂದರ್ಭದಲ್ಲಿ ಕಿರಣ್ ಸಿದ್ಧು ಪೂಜಾರಿ, ಶ್ರೀಮತಿ ಅಂಬಿಕಾ ಕಿರಣ್,ಕುಮಾರಿ ದಿಯಾ, ಕುಮಾರಿ ದಿಶಾ,ಮಾಸ್ಟರ್ ದ್ರಿಷನ್, ವೈಶಾಲಿ ಕಿಶೋರ್,ದಾಶು ಕೋಟ್ಯಾನ್, ಅನಿಷ್ ಕಿನ್ನಿಗೋಳಿ, ಗಣೇಶ್ ಪಂಜ, ಗಣೇಶ್ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು.