“ಭವಿಷ್ಯದ ನಾಯಕ ವಿವೇಕ್ ರಾಜ್ ಪೂಜಾರಿ“
ಕೆಲವರ ಪ್ರಬುದ್ಧತೆ ಅವರ ವಯಸ್ಸನ್ನೂ ಮೀರಿ ಬೆಳೆದಿರುತ್ತದೆ. ಅಂತಹ ವ್ಯಕ್ತಿಗಳ ಸಾಲಲ್ಲಿ ಬರುತ್ತಾರೆ “ಪನಾಮಾಕಾರ್ಪೋರೇಷನ್” ನ ಮಾಲಕರು “ವಿವೇಕ್ ರಾಜ್ ಪೂಜಾರಿ“.
ಕೊರೊನಾ ಎರಡನೇ ಅಲೆಯು ಹೆಚ್ಚಾದ ದಿನದಿಂದ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಹೆಚ್ಚಿನ ಕುಟುಂಬಗಳು ಸಂಕಷ್ಟದಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ 3000ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಕಿಟ್ ಮಾನವೀಯತೆಯನ್ನುಮೆರೆದಿದ್ದಾರೆ ಒಂದು ಕಿಟ್ ನಲ್ಲಿ ಸುಮಾರು 800 ರೂ. ವರೆಗಿನ ಅಗತ್ಯ ವಸ್ತುಗಳಿದ್ದು ಒಂದು ಮನೆಯವರಿಗೆ 15 ದಿನಗಳವರೆಗೆಬಳಸಬಹುದು. ಯಾರೇ ಆಗಲಿ ಕಿಟ್ ನ ಅಗತ್ಯವಿದ್ದಲ್ಲಿ ಯಾವುದೇ ಸಂಕೋಚವಿಲ್ಲದೆ ನನ್ನನ್ನು ನೇರವಾಗಿ ಸಂಪರ್ಕಿಸಬಹುದುಎಂದು ಹೇಳಿದ್ದಾರೆ. ಕಳೆದ ವರ್ಷದ ಲಾಕ್ ಡೌನ್ ಸಂದರ್ಭದಲ್ಲೂ 10000ಕ್ಕಿಂತ ಹೆಚ್ಚು ಕಿಟ್ ಹಾಗೂ 1000 ವಲಸೆ ಕಾರ್ಮಿಕರಿಗೆಅಗತ್ಯ ವಸ್ತುಗಳನ್ನು ವಿತರಿಸಿದ್ದಾರೆ. ಅಷ್ಟೇ ಅಲ್ಲದೆ ಬೀದಿ ಬದಿ ವ್ಯಾಪಾರಿಗಳಿಗೆ ಮಳೆ ಮತ್ತು ಬಿಸಿಲಿನಿಂದ ರಕ್ಷಣೆಗೆ ಛತ್ರಿ, ತಳ್ಳುಗಾಡಿಗಳನ್ನು ನೀಡುವುದರ ಜೊತೆಗೆ ನೈರ್ಮಲ್ಯ ಮತ್ತು ಸುರಕ್ಷತೆಯ ಬಗ್ಗೆ ತಿಳುವಳಿಕೆ, ಮತ್ತು ತಮ್ಮ ತಳ್ಳುಗಾಡಿಗಳನ್ನುನಿಗದಿಪಡಿಸಿದ ಜಾಗದಲ್ಲಿ ನಿಲ್ಲಿಸಿ ವಾಹನ ಸಂಚಾರ ಮತ್ತು ದಾರಿಹೋಕರಿಗೆ ಅನುಕೂಲವಾಗುವಂತೆ ಮಾಡುವ ಬಗ್ಗೆ ಮಾಹಿತಿಯನ್ನುನೀಡಿದ್ದಾರೆ.
ಯುವಕರಾದರೂ ಇವರ ವಿನಯತೆ, ಸೇವಾ ಮನೋಭಾವ, ನೊಂದ ಹೃದಯಗಳಿಗೆ ಸ್ಪಂದಿಸುವ ರೀತಿ ನಿಜಕ್ಕೂ ಅದ್ಭುತ. ರಾಜಕೀಯ ಪಕ್ಷವನ್ನು ಕೇವಲ ಸೇವೆಯ ವೇದಿಕೆಯಾಗಿ ಕಾಣುವ ಇವರು ಯಾವುದೇ ಧರ್ಮ, ಜಾತಿ ನೋಡದೆ ಪಕ್ಷಾತೀತವಾಗಿ ಈಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಚಾರಕ್ಕೆ ವಿಮುಖರಾಗಿ ಜನರ ಸೇವೆ ಮಾಡುತ್ತಾ ಬಂದಿದ್ದಾರೆ.