ಭಾರತದ ರಸ್ತೆಗಳಲ್ಲಿ ಓಡಾಡುವ ಪ್ರತೀ ವಾಹನಗಳಿಗೆ ನೋಂದಣಿ ಸಂಖ್ಯೆ ಇರಬೇಕಾದ್ದು ಕಡ್ಡಾಯ. ಆದರೆ ರಾಷ್ಟ್ರಪತಿಗಳುಸಂಚರಿಸುವ ವಾಹನಕ್ಕೆ ಮಾತ್ರ ನೋಂದಣಿ ಸಂಖ್ಯೆ ಇಲ್ಲ
ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಗಳು ಸಮಯ, ತಂತ್ರಜ್ಞಾನಕ್ಕೆ ಅನುಗುಣವಾಗಿ ಕಾರುಗಳನ್ನು ಬದಲಿಸಿಕೊಳ್ಳುತ್ತಾರೆ. ರಾಷ್ಟ್ರಪತಿಗಳ ಕಾರು ತಯಾರಿಕೆ, ಮಾದರಿ ಮತ್ತು ನೋಂದಣಿ ಸಂಖ್ಯೆಗಳನ್ನು ಬಹಿರಂಗಪಡಿಸುವುದು ಮೊದಲ ಪ್ರಜೆಯ ಭದ್ರತೆಗೆಅಪಾಯ ಉಂಟುಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನೀಡಲಾಗುತ್ತದೆ. ಗೃಹ ಸಚಿವಾಲಯವು ಇದನ್ನು ಗೌಪ್ಯವಾಗಿರಿಸುತ್ತದೆ. ಈ ಕಾರುಗಳು ಪರವಾನಗಿ ನಂಬರ್ ಪ್ಲೇಟ್ ಹೊಂದಿರುವುದಿಲ್ಲ. ಸಂಖ್ಯೆಗಳ ಬದಲಿಗೆ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭವನ್ನುಪ್ರದರ್ಶಿಸುತ್ತವೆ.