ಮಂಗಳೂರಿನಲ್ಲಿ ಗೆಜ್ಜೆಗಿರಿ ಮೇಳದ ಉದ್ಘಾಟನೆಯ ಆಮಾಂತ್ರಣ ಪತ್ರಿಕೆ ಅನಾವರಣನವಂಬರ್ 27 ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜರಗುವ ಶ್ರೀ ಗೆಜ್ಜೆಗಿರಿ ಮೇಳದ ಉದ್ಘಾಟನೆ ಹಾಗೂ ದೇವರ ಪ್ರಥಮ ಸೇವೆಆಟದ ಆಮಂತ್ರಣ ಪತ್ರಿಕೆಯನ್ನು ಮಂಗಳೂರಿನ ಕುದ್ರೋಳಿಯ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳ ರಂಗ ಚಾಲನೆಕಾರ್ಯಕ್ರಮದಲ್ಲಿ ಶ್ರೀ ಬಿ. ಜನಾರ್ಧನ ಪೂಜಾರಿ ಅನಾವರಣ ಗೊಳಿಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಕೋಶಾಧಿಕಾರಿ ಪದ್ಮರಾಜ್ ಆರ್, ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ, ಟ್ರಸ್ಟಿಶೈಲೇಂದ್ರ ಸುವರ್ಣ, ಎಚ್ ಜನಾರ್ಧನ, ರಾಜೇಂದ್ರ ಚಿಲಿಂಬಿ, ಸುರೇಶ್ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು.