TOP STORIES:

ಮಂಗಳೂರಿನ ಅದ್ಭುತ ಕಲೆಗಾರ ಬಿ.ಎಸ್.ಎನ್.ಎಲ್ ಕಛೇರಿ ಕಾವಲುಗಾರ – ದಯಾನಂದ ಪಿ. ಅಂಚನ್


ಪ್ರತಿಭೆಗೆ ವಯಸ್ಸಿನ ಮೀತಿಯಾಗಲಿ ಮಾಡುವ ಕೆಲಸವಾಗಲಿ ಅಡ್ಡಿಯಾಗುವುದಿಲ್ಲ. ಆಸಕ್ತಿ ಇದ್ದರೆ ಸಾಕು ಸಮಯ ವ್ಯರ್ಥ ಮಾಡದೆಸಿಕ್ಕ ಬಿಡುವಿನ ಸಮಯದಲ್ಲಿ ಪ್ರತಿಭೆಯ ಅನಾವರಣ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ನಮ್ಮ ನಡುವೆಮಂಗಳೂರಿನ ಬಿ.ಎಸ್.ಎನ್. ಎಲ್ ಕಛೇರಿಯಲ್ಲಿ ಕಾವಲುಗಾರರಾಗಿ ಬಿಡುವಿನ ವೇಳೆಯಲ್ಲಿ ಅಲ್ಲೇ ಮೂಲೆಯಲ್ಲಿ ಖುರ್ಚಿಯಲ್ಲಿಕುಳಿತು ಬಿಳಿ ಹಾಳೆಯಲ್ಲಿ ಚಿತ್ರ ಬಿಡಿಸುತ್ತ, ಗೋಡೆಯಲ್ಲಿ ತಮ್ಮ ಮೊಬೈಲ್ ಮೂಲಕ ಶೇಡೋ ಪ್ಲೇ ಮಾಡುವ ವಿಶಿಷ್ಟ ಕಲಾವಿದಹಾಗೇ ಎಲ್ಲಾರಲ್ಲೂ ಪ್ರೀತಿಯಿಂದ ಮಾತನಾಡುವ ಅಪರೂಪದ ವ್ಯಕ್ತಿ ದಯಾನಂದ ಪಿ. ಅಂಚನ್. ಚಿಕ್ಕದಿರುವಾಗ ತಮ್ಮ ಮನೆಯ ಸಮೀಪದಲ್ಲಿದ್ದ ಗೋವಿಂದ ಪೈ ಅನ್ನುವವರು ಶೇಡೋ ಪ್ಲೇ ಮೂಲಕ ಗೋಡೆಯಲ್ಲಿ ಕೈಚಲನೆ ಬಳಸಿಬೆಳಕಿನ ನೆರಳಿನಲ್ಲಿ ಮೂಡಿಸುತ್ತಿದ್ದ ಹಕ್ಕಿಗಳು,ಪ್ರಾಣಿಗಳ, ಮನುಷ್ಯನನ್ನು ನೋಡುತ್ತಾ ನೋಡುತ್ತಾ ತಾವು ನಿಧಾನವಾಗಿಆಸಕ್ತಿಯಿಂದ ಸತತ ಪ್ರಯತ್ನ ಪಟ್ಟು ಶೇಡೋ ಪ್ಲೇ ಮೂಲಕ ಗಿಳಿ, ಬಾತುಕೋಳಿ, ಕೊಕ್ಕರೆ, ಮನುಷ್ಯ,ಸಿಂಹ ಹೀಗೆ ಕಲಿತರು ಹಾಗೂಮನಸ್ಸಿದ್ದರೆ ಹೇಗೆದರೂ ಕಲಿಯಬಹುದು ತಾವು ಮೊದಲು ಕೆಲಸ ಮಾಡುತ್ತಿದ್ದ ರೈಸ್ ಮಿಲ್ ನಲ್ಲಿ ಬರುತ್ತಿದ್ದ ಧೂಳಿನಲ್ಲೇ ಚಿತ್ರಬಿಡಿಸುತ್ತಾ ನಂತರ ಕಾಗದದ ಮೇಲೆ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದರು. ಅನೇಕ ವ್ಯಕ್ತಿಗಳ ಮುಖದ ಚಿತ್ರಗಳನ್ನು ಬಿಡಿಸಿದ್ದಾರೆ.

ಮಾಡುವ ಕಾಯಕದೊಂದಿಗೆ ಹವ್ಯಾಸವನ್ನು ಬಿಡದೆ ಅನೇಕ ವರ್ಷಗಳಿಂದ ಮುಂದುವರಿಸಿಕೊಂಡು ಹೋಗುತ್ತಿರುವ ದಯಾನಂದಪಿ.ಅಂಚನ್.ವೃತ್ತಿಯಲ್ಲಿ ತಾವು ಮಂಗಳೂರಿನಲ್ಲಿರುವ ಬಿ.ಎಸ್.ಎನ್.ಎಲ್ ಕಛೇರಿಯಲ್ಲಿ ಬೆಳಗ್ಗೆ ಕಾವಲುಗಾರರು ಆದರೆಹವ್ಯಾಸವಾಗಿ ಅಧ್ಬುತವಾಗಿ ಚಿತ್ರಗಳನ್ನು ಬಿಡಿಸುವ ಕಲಾ ಆರಾಧಕರು.ಯಾರು ಆಶ್ಚರ್ಯವೆಂದರೆ ಚಿತ್ರಕಲೆ,ಶೇಡೋ ಪ್ಲೇಯಾರಲ್ಲೂ ಕಲಿಯದೆ ತಾವೇ ಸ್ವತಃ ಆಸಕ್ತಿಯಿಂದ ಅನೇಕ ವರ್ಷಗಳ ಪರಿಶ್ರಮದಿಂದ ಕಲಿತುಕೊಂಡು ತಮ್ಮ ಹವ್ಯಾಸವನ್ನುಉದ್ಯೋಗದ ಜೊತೆಗೆ ಬೆಳೆಸುತ್ತಾ ಅಧ್ಬುತವಾಗಿ ವಿವಿಧ ವ್ಯಕ್ತಿಗಳ,ಹಲವು ಸಾಧಕರ ಮುಖಗಳ ಚಿತ್ರಗಳನ್ನು ಬಿಡಿಸುತ್ತಾ, ಮೊಬೈಲ್ಬೆಳಕಿನಲ್ಲೇ ಗೋಡೆಗಳ ಮೇಲೆ ಹಕ್ಕಿ,ಹುಲಿ, ಮನುಷ್ಯ ಮಾತಾನಾಡುವುದು ರೀತಿ ಶೇಡೋ ಪ್ಲೇ ಮಾಡಿ ತೋರಿಸುವ ಸರಳ ವ್ಯಕ್ತಿದಯಾನಂದ ಪಿ. ಅಂಚನ್

ಯಾರೇ ಅವರನ್ನು ಮಾತನಾಡಿಸಿ ಅವರ ಕಲೆಯ ಬಗ್ಗೆ ಕೇಳಿದಾಗ ಪ್ರೀತಿಯಿಂದ ಬಿಡಿಸಿದ ಚಿತ್ರಗಳನ್ನು ,ಶೇಡೋ ಪ್ಲೇ ತೋರಿಸಿಅಚ್ಚರಿ ಪಡಿಸುತ್ತಾರೆ. ಸಾಧಿಸಲು ಛಲ ಹಾಗೂ ಶ್ರದ್ಧೆ ಇದ್ದರೆ ಸಾಕು. ಸ್ವಂತ ತಾವೇ ಆಸಕ್ತಿಯಿಂದ ಕಲಿತು ಇಂದಿಗೂ ಉಳಿಸಿಕೊಂಡುಬಂದಿರುವ ಅವರ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಪ್ರೇರಣೆ ನೀಡುವಂತದ್ದು ಹಾಗೂ ಇಂತಹ ಎಲೆಮರೆಯ ಕಾಯಿಯಂತಿರುವಅನೇಕರನ್ನು ಗುರುತಿಸಿ ಅವರಿಗೆ ಇನ್ನಷ್ಟು ಪ್ರೋತ್ಸಾಹಿಸೋಣ. ಯಾವಾಗಲಾದರೂ ಬಿ.ಎಸ್.ಎನ್.ಎಲ್ ಮಂಗಳೂರಿನ ಕಛೇರಿಗೆಹೋದಾಗ ಅಲ್ಲೇ ಹೊರಗೆ ಕುಳಿತು ಸಮಯ ಸಿಕ್ಕಾಗ ಎಳೆಎಳೆಯಾಗಿ ಚಿತ್ರವನ್ನು ಬಿಡಿಸುತ್ತಾ ಅದರಲ್ಲೇ ಖುಷಿ ಪಡುವ ದಯಾನಂದಪಿ. ಅಂಚನ್ ಅವರನ್ನು ಮಾತನಾಡಿಸಲು ಮರೆಯದಿರಿ.


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »