ಮಂಗಳೂರು:ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ದಸರಾ ಮೆರವಣಿಗೆ ಇಲ್ಲದೆ ಮಂಗಳೂರು ದಸರಾ ಸಂಪನ್ನಗೊಂಡಿತು.
ಸಂಜೆ 6.30ಕ್ಕೆ ವಿಸರ್ಜನಾ ಪೂಜೆ ನಡೆದು ಬಳಿಕ 8.30 ರಿಂದ ಗಣಪತಿ,ಆದಿಶಕ್ತಿ ನವದುರ್ಗೆಯರ ಮಣ್ಣಿನ ಮೂರ್ತಿಗಳನ್ನು ಕ್ಷೇತ್ರಕ್ಕೆ ಒಂದು ಪ್ರದಕ್ಷಿಣೆ ಹಾಕಿ ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು. ಮಧ್ಯರಾತ್ರಿ 12 ಗಂಟೆಗೆ ಶಾರದಾ ಮಾತೆಯ ಮೂರ್ತಿಯನ್ನು ಕೇತ್ರದ ಮುಖ್ಯದ್ವಾರದವರೆಗೂ
ಮೆರವಣಿಗೆಯಲ್ಲಿ ಕೊಂಡೊಯ್ಯದ್ದು ಕ್ಷೇತ್ರಕ್ಕೆ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಕ್ಷೇತ್ರದ ದೇವರುಗಳಾದ ಗೋಕರ್ಣನಾಥ ಹಾಗೂ ಅನ್ನಪೂರ್ಣೇಶ್ವರಿಯ ಬಲಿ ಮೂರ್ತಿಯ ಅವಭೃತ ಸ್ನಾನ ನಡೆಯಿತು,ಕ್ಷೇತ್ರದ ಪುಷ್ಕರಣಿಯಲ್ಲಿ ಶಾರದಾ ಮಾತೆಗೆ ಪೂಜೆ ಸಲ್ಲಿಸಿ ಬೆಳಗ್ಗಿನ ಜಾವ 2 ಗಂಟೆ ವೇಳೆಗೆ ಪುಷ್ಕರಣಿಯಲ್ಲಿ ಶಾರದಾ ಮಾತೆಯ ಮೂರ್ತಿಯನ್ನು ವಿಸರ್ಜಿಸಲಾಯಿತು.ಈ ಮೂಲಕ ಈ ಬಾರಿಯ ಮಂಗಳೂರು ಸರಳ ದಸರಾ ಸಂಪನ್ನಗೊಂಡಿತು.