ಮಂಗಳೂರು ಘಟಕದ ಮಾಜಿ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಯವರು ಯುವವಾಹಿನಿ (ರಿ) ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷರಾಗಿ ಆಯ್ಕೆ
ಇಂದು ಜರಗಿದ ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಉಪಾಧ್ಯಕ್ಷರ ಚುನಾವಣೆಯಲ್ಲಿ ಹರೀಶ್ ಕೆಪೂಜಾರಿ ಯವರು ಜಯಗಳಿಸಿದರು. ಸಂಜೆ ಜರಗಿದ ಯುವವಾಹಿನಿ ಕೇಂದ್ರ ಸಮಿತಿಯ ಮಹಾ ಸಭೆಯಲ್ಲಿ ದ್ವಿತೀಯ ಉಪಾಧ್ಯಕ್ಷರಆಯ್ಕೆಯನ್ನು ಅಧಿಕೃತವಾಗಿವಾಗಿ ಘೋಷಿಸಲಾಯಿತು.
ಬಹಳ ಸೌಹಾರ್ದತೆಯಿಂದ ಜರಗಿದ ಚುನಾವಣೆಯಲ್ಲಿ ಮತದಾರರು ಸಂಭ್ರಮದಿಂದ ಮತ ಚಲಾಯಿಸಿದರು. ಚುನಾವಣೆಯಲ್ಲಿಭಾಗವಹಿಸಿದ ಸ್ಪರ್ಧಿಗಳು ಪರಸ್ಪರ ಅಭಿನಂದಿಸಿದರು. ಪ್ರಜಾಪ್ರಭುತ್ವ ಮೂಲ ಸ್ವರೂಪದ ಮಾದರಿಯಲ್ಲಿ ಇಂದು ಜರಗಿದಚುನಾವಣೆ ಬಹಳ ಶಿಸ್ತಿನಿಂದ ಯುವವಾಹಿನಿಯ ತತ್ವ ಆದರ್ಶಗಳಂತೆ ಜರಗಿದೆ.
ಶ್ರೀ ಗೋಕರ್ಣನಾಥ ಕ್ಷೇತ್ರ, ಗೆಜ್ಜೆಗಿರಿ, ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ, ಬ್ರಹ್ಮ ಶ್ರೀ ನಾರಾಯಣ ಗುರುದೇವರ ತಪೋಭೂಮಿಶಿವಗಿರಿ ತೀರ್ಥಾಟನೆ, ಮುಂತಾದ ಧಾರ್ಮಿಕ ಚಟುವಟಿಕೆ ಗಳಲ್ಲಿ ಹಾಗೂ ಯುವವಾಹಿನಿಯ ಶಿಕ್ಷಣ, ಯುವಜನ ಜಾಗ್ರತಿ ಪ್ರಗತಿಮುಂತಾದ ಅನೇಕ ಸಾಮಾಜಿಕ ಅಭಿವೃದ್ಧಿ ಚಟುವಟಿಕೆ ಗಳಲ್ಲಿ ಕ್ರಿಯಾಶೀಲವಾಗಿ ನಿಸ್ವಾರ್ಥ ವಾಗಿ ಕೆಲಸ ಮಾಡಿರುತ್ತಾರೆ. ಅಭಿನಂದನೆಗಳು ಪ್ರಾಮಾಣಿಕ ಸಮಾಜ ಪರ ಸೇವಕ ಹರೀಶ್ ಕೆ ಪೂಜಾರಿ ಯವರಿಗೆ.