ಮಂಗಳೂರಿನ ವೈಭವದ ದಸರಾ ಹಬ್ಬದ ರಂಗನ್ನು ಮತ್ತಷ್ಟು ಹೆಚ್ಚಿಸಲು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮಂಗಳೂರು ವಲಯ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಯೋಗದಲ್ಲಿ “ಮಂಗಳೂರು ದಸರಾ ವೈಭವ” ಶೀರ್ಷಿಕೆಯಡಿ ಆಯೋಜಿಸಲಾದ ರಾಜ್ಯ ಮಟ್ಟದ ಪೊಟೋಗ್ರಫಿ ಮತ್ತು ವಿಡಿಯೋಗ್ರಫಿ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಶ್ರೀ ಕ್ಷೇತ್ರ ಕುದ್ರೋಳಿ ದೇವಸ್ಥಾನದ ಸಾಂಸ್ಕ್ರತಿಕ ವೇದಿಕೆಯಲ್ಲಿ ಮಂಗಳವಾರ ನೆರವೇರಿತು.
ಶ್ರೀ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿ ರವಿ ಶಂಕರ್ ಮಿಜಾರ್, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೆಂದ್ರ ಪೂಜಾರಿ, ಎಸ್.ಕೆ.ಪಿ.ಎ ಮಂಗಳೂರು ವಲಯದ ಅಧ್ಯಕ್ಷ ಹರೀಶ್ ಅಡ್ಯಾರ್, ಕಾರ್ಯದರ್ಶಿ ಅಜಯ್ ಕುಮಾರ್, ಕೋಶಾಧಿಕಾರಿ ಅರ್ಜುನ್ ಆರ್., ಗೌರವಾಧ್ಯಕ್ಷ ಪದ್ಮನಾಭ್ ಸುವರ್ಣ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಲಾಶ್ರೀ, ಸಲಹಾ ಸಮಿತಿ ಸಂಚಾಲಕ ಕರುಣಾಕರ್ ಕಾನಂಗಿ, ಮಾಜಿ ಸಂಚಾಲಕರು ವಿಠ್ಠಲ ಚೌಟ, ಮಾಜಿ ಜಿಲ್ಲಾಧ್ಯಕ್ಷ ಲೋಕೇಶ್, ಮನೋಹರ್ ಸೋನ್ಸ್, ಉಪಾಧ್ಯಕ್ಷ ಶ್ರೀಕಾಂತ್ ತಿಲಕ್, ಪ್ರಭಾಕರ್, ಮಾಜಿ ಗೌರವಾಧ್ಯಕ್ಷ ವಸಂತ್ ರಾವ್ ಮೊದಲಾದವರು ಭಾಗವಹಿಸಿದ್ದರು.