ಮಂಗಳೂರು: ಪೇಜಾವರ ಕೆಂಜಾರು ಬಿಲ್ಲವ ಸಮಾಜ ಸೇವಾ ಮಂದಿರದಲ್ಲಿ ಮಾ.9ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ ಬಿಂಬದ ಪುನಃ ಪ್ರತಿಷ್ಠಾಪನೆ, ಕಲಶಾಭಿಷೇಕ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಬಿಂಬದ ಮೆರವಣಿಗೆ ಕುದ್ರೋಳಿಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಭಾನುವಾರ ವಿಜೃಂಬನೆಯಿಂದ ಜರುಗಿತು. ವಿವಿಧ ಭಜನಾ ತಂಡಗಳು ಮೆರವಣಿಗೆಯಲ್ಲಿಪಾಲ್ಗೊಂಡಿದ್ದವು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಕಾಟಿಪಳ್ಳ ನಾರಾಯಣ ಗುರು ಕಾಲೇಜಿನ ಅಧ್ಯಕ್ಷದಯಾನಂದ ಪೂಜಾರಿ, ಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಅಧ್ಯಕ್ಷ ರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿ ವಸಂತಪೂಜಾರಿ, ಕೋಶಾಧಿಕಾರಿ ದಿನೇಶ್ ಕುಮಾರ್, ಉಪಾಧ್ಯಕ್ಷರಾದ ಭಾಸ್ಕರ ಕೋಟ್ಯಾನ್, ನಾರಾಯಣ ಕೋಟ್ಯಾನ್, ವಸಂತಸುವರ್ಣ, ರಾಜೇಶ್ ಅಮೀನ್, ಗೌರವ ಸಂಚಾಲಕರಾದ ಜಗನ್ನಾಥ ಸಾಲ್ಯಾನ್, ಶ್ರೀನಿವಾಸ ಕರ್ಕೇರ, ಸಂಚಾಲಕ ಲೋಕೇಶ್ಕೋಟ್ಯಾನ್, ಲೆಕ್ಕಪರಿಶೋಧಕ ಭುಜಂಗ ಟಿ. ಪೂಜಾರಿ, ಭಜನಾ ಸಮಿತಿ ಅಧ್ಯಕ್ಷ ಗಣೇಶ ಪೂಜಾರಿ, ಉಪಾಧ್ಯಕ್ಷ ಪದ್ಮನಾಭಪೂಜಾರಿ, ಕಾರ್ಯದರ್ಶಿಗಳಾದ ದಿನಕರ ಸಾಲ್ಯಾನ್, ಕರುಣಾಕರ ಪೂಜಾರಿ, ಕಮಲಾಕ್ಷ ಸಾಲ್ಯಾನ್, ಗುರುರಾಜ್, ಜತೆಕಾರ್ಯದರ್ಶಿಗಳಾದ ರಮೇಶ್ ಟಿ. ಸುವರ್ಣ, ಯಾದವ ಪೂಜಾರಿ, ಗುಣಪಾಲ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.